ಬೆಂಗಳೂರು : ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಆರೋಗ್ಯ, ಆರ್ಥಿಕ, ಮಾನಸಿಕ ಸ್ಥಿತಿ, ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತವೆ. ಮತ್ತೊಂದೆಡೆ  ವಾಸ್ತು ಸರಿಯಾಗಿದ್ದರೆ, ಜೀವನದಲ್ಲಿ ಎಲ್ಲವೂ ಸಕಾರಾತ್ಮಕವಾಗಿ ಕಂಡು ಬಂದು ಸಮೃದ್ಧಿ ಕಾಣುತ್ತದೆ. ಕೆಲವೊಮ್ಮೆ ಮನೆಯಲ್ಲಿ ಕಂಡು ಬರುವ ವಾಸ್ತು ದೋಷವನ್ನು ತೆಗೆದು ಹಾಕಲು ಬಹಳ ಪ್ರಯತ್ನ ಪಡಬೇಕಾಗುತ್ತದೆ. ಇದರಿಂದಾಗಿ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತವೆ. ಆದರೆ ವಾಸ್ತು ದೋಷಗಳನ್ನು ಹೋಗಲಾಡಿಸಲು ಕೆಲವು ಸರಳ ಮಾರ್ಗಗಳಿವೆ. ಅದನ್ನು ಅಳವಡಿಸಿಕೊಳ್ಳುವ ಮೂಲಕ  ಮನೆಯಲ್ಲಿ ಮತ್ತೆ ಸಮೃದ್ಧಿ ನೆಲೆಸುವಂತೆ ಮಾಡಬಹುದು. 


COMMERCIAL BREAK
SCROLL TO CONTINUE READING

ಗಿಡಗಳ ಬಳಕೆ : ಮನೆಯಲ್ಲಿ ಕೆಲವು ವಿಶೇಷ ಗಿಡಗಳನ್ನು ನೆಟ್ಟರೆ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಉದಾಹರಣೆಗೆ, ತುಳಸಿ, ತಾಳೆ, ಬೇವು ಮತ್ತು ಬಿಲ್ವ ಪತ್ರೆ ಮುಂತಾದ ಸಸ್ಯಗಳನ್ನು ನೆಡುವುದರಿಂದ  ಮನೆಯಲ್ಲಿನ ವಾಸ್ತು ದೋಷಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ :   ʼಬ್ರಾಹ್ಮಿ ಮುಹೂರ್ತʼದಲ್ಲಿ ನೀವು ಇಂತಹ ಕನಸು ಕಂಡರೆ 100% ಶ್ರೀಮಂತರಾಗುತ್ತೀರಿ..!


ಉಯ್ಯಾಲೆ ಹಾಕುವುದು - ಮನೆಯ ಅಶುಭ ಪರಿಣಾಮಗಳನ್ನು ಉಯ್ಯಾಲೆ ಬಳಸಿ ಹೋಗಲಾಡಿಸಬಹುದು. ಉಯ್ಯಾಲೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ವಿಶೇಷವಾಗಿಹಾಕಬೇಕು. 


ಬಾಗಿಲು ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸುವುದು : ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮತ್ತು ಅವುಗಳ  ಸ್ಥಿತಿಯನ್ನು ಉತ್ತಮವಾಗಿ ಇರಿಸುವುದರಿಂದ ವಾಸ್ತು ದೋಷಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅವುಗಳನ್ನು ಸರಿಯಾಗಿ ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ.  


ಇದನ್ನೂ ಓದಿ :   ವಾರದ ಈ ದಿನ ಕೂದಲು ಕತ್ತರಿಸುವುದು ಅತ್ಯಂತ ಶುಭ, ಮನೆಯಲ್ಲಿ ಧನವೃಷ್ಟಿಗೆ ಕಾರಣ!


ಹುಲ್ಲುಹಾಸು ಮತ್ತು ಉದ್ಯಾನದ ವ್ಯವಸ್ಥೆ: ಮನೆಯ ಹುಲ್ಲುಹಾಸು ಮತ್ತು ಉದ್ಯಾನದ ವ್ಯವಸ್ಥೆಯು ವಾಸ್ತು ದೋಷಗಳ ಮೇಲೆ ಪರಿಣಾಮ ಬೀರುತ್ತದೆ. ತೋಟದಲ್ಲಿ ಮರ, ಗಿಡಗಳನ್ನು ಕ್ರಮಬದ್ಧವಾಗಿ ನೆಡಬೇಕು.  


ಗಂಟೆಯ ಸದ್ದು : ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದು ಸಾಮಾನ್ಯ. ಆದರೆ ಈ ಗಂಟೆಯ ಶಬ್ದವು ವಾತಾವರಣದ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.  


ಶಂಖದ ಬಳಕೆ : ಶಂಖವನ್ನು ಬಳಸುವುದರಿಂದ ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಬಹುದು. ಈ ಶಂಖವನ್ನು ಪೂಜಾ ಸ್ಥಳದಲ್ಲಿ ಇಡಬೇಕು.


ಇದನ್ನೂ ಓದಿ : Griha Laxmi Yoga 2023 : ʼಗೃಹಲಕ್ಷ್ಮಿ ಯೋಗʼದಿಂದ ಈ 4 ರಾಶಿಯವರು ಆಗರ್ಭ ಶ್ರೀಮಂತರಾಗುತ್ತಾರೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.