Vastu Tips: ದುಡ್ಡು ಎಣಿಕೆ ಮಾಡುವಾಗ ನೀವು ಈ ತಪ್ಪು ಮಾಡ್ತಿರಾ, ಎಚ್ಚರ! ದಾರಿದ್ರ್ಯಕ್ಕೆ ಕಾರಣವಾಗುತ್ತದೆ
Vastu Tips for Money: ಜೀವನದಲ್ಲಿ ಸಿರಿವಂತರಾಗಲು ಧನದ ಅಧಿದೇವತೆಯಾದ ದೇವಿ ಲಕ್ಷ್ಮಿಯ ಕೃಪೆ ಇರುವುದು ತುಂಬಾ ಮಹತ್ವದ್ದಾಗಿರುತ್ತದೆ ದೇವಿ ಲಕ್ಷ್ಮಿ ಮುನಿಸಿಕೊಂಡರೆ, ವ್ಯಕ್ತಿಯ ಜೀವನದಲ್ಲಿ ದಾರಿದ್ರ್ಯ ಬರಲು ಸಮಯ ಬೇಕಾಗುವುದಿಲ್ಲ. ಹೀಗಾಗಿ ದೇವಿ ಲಕ್ಷ್ಮಿ ಮುನಿಸಿಕೊಳ್ಳುವ ಯಾವುದೇ ತಪ್ಪನ್ನು ಮಾಡಬಾರದು.
Vastu Tips For Counting Money: ತಾಯಿ ಲಕ್ಷ್ಮಿಯ ಅನುಗ್ರಹ ಮನೆಯಲ್ಲಿ ಅಪಾರ ಸಿರಿ-ಸಂಪತ್ತು ಮತ್ತು ಸುಖ-ಶಾಂತಿಗೆ ಕಾರಣವಾಗುತ್ತದೆ. ಆದ್ದರಿಂದ, ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆಯಲು ಮತ್ತು ಅದನ್ನು ಯಾವಾಗಲೂ ನಿಮ್ಮ ಮೇಲೆಯೇ ಇರಿಸಿಕೊಳ್ಳಲು, ಕೆಲವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. ಲಕ್ಷ್ಮಿ ದೇವಿಯ ಕೃಪಾಕಟಾಕ್ಷವನ್ನು ಯಾವಾಗಲು ನಮ್ಮ ಮೇಲೆಯೇ ಇರಿಸಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ಹಲವು ಸಂಗತಿಗಳನ್ನು ಹೇಳಲಾಗಿದೆ. ಇದಲ್ಲದೆ ದೇವಿ ಲಕ್ಷ್ಮಿ ಮುನಿಸಿಗೆ ಕಾರಣವಾಗುವ ಕೆಲ ತಪ್ಪುಗಳನ್ನು ಸಹ ಹೇಳಲಾಗಿದೆ, ಈ ತಪ್ಪುಗಳನ್ನು ಮಾಡುವುದರಿಂದ ಜೆವನದಲ್ಲಿನ ಸುಖ-ಸಮೃದ್ಧಿ ಹಾಳಾಗುತ್ತದೆ ಮತ್ತು ವ್ಯಕ್ತಿಯು ಬಡತನದಲ್ಲಿ ಸಿಲುಕಿಕೊಳ್ಳುತ್ತಾನೆ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದರೂ ವ್ಯಕ್ತಿಯ ಕೈಯಲ್ಲಿ ಹಣ ಉಳಿಯುವುದಿಲ್ಲ.
ನೋಟುಗಳನ್ನು ಎಣಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
ನೋಟು ಎಣಿಸುವಾಗ ಮಾಡಲಾಗುವ ಕೆಲ ತಪ್ಪುಗಳು ದೇವಿ ಲಕ್ಷ್ಮಿಗೆ ಕಿರಿಕಿರಿಯುಂಟುಮಾಡಬಹುದು. ಹೀಗೆ ಮಾಡುವುದರಿಂದ ಸಂಪತ್ತು ಮತ್ತು ವೈಭವವು ಜೀವನದಿಂದ ಹೊರಟುಹೊಗುತ್ತವೆ. ವ್ಯಕ್ತಿಯು ಹಣಕಾಸಿನ ಮುಗ್ಗಟ್ಟು, ದುಂದುವೆಚ್ಚ, ಆದಾಯದಲ್ಲಿ ಅಡೆತಡೆಗಳನ್ನು ಎದುರಿಸುತ್ತಾನೆ.
>> ನೋಟು ಎಣಿಕೆ ಮಾಡುವಾಗ ಅನೇಕರು ಬಾಯಿಯಲ್ಲಿರುವ ಉಗುಳನ್ನು ಬಳಸುತ್ತಾರೆ. ಹೀಗೆ ಮಾಡುವುದರಿಂದ ದೇವಿ ಲಕ್ಷ್ಮಿಗೆ ಅವಮಾನಿಸಿದಂತಾಗುತ್ತದೆ. ಅಲ್ಲದೆ, ನೋಟುಗಳ ಮೇಲಿನ ಸೂಕ್ಷ್ಮಜೀವಿಗಳು ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ, ನೋಟುಗಳನ್ನು ಎಣಿಸುವಾಗ ಎಂದಿಗೂ ಉಗುಳನ್ನು ಬಳಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವನದುದ್ದಕ್ಕೂ ನೀವು ಬಡತನವನ್ನೇ ಎದುರಿಸಬೇಕಾಗುತ್ತದೆ. ಅಂಟಿಕೊಂಡಿರುವ ನೋಟುಗಳನ್ನು ತೆಗೆಯಲು ನೋಟುಗಳನ್ನು ಎಣಿಸುವಾಗ ಒಂದು ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಕೈ ಬೆರಳಿಗೆ ಸ್ವಲ್ಪ ನೀರು ಹಚ್ಚಿಕೊಂಡು ನಂತರ ನೋಟುಗಳನ್ನು ಎಣಿಸಿ.
>> ನೋಟುಗಳ ಮೇಲೆ ಏನನ್ನೂ ಬರೆಯಬೇಡಿ ಅಥವಾ ಅವುಗಳನ್ನು ಹಾನಿಗೊಳಿಸಬೇಡಿ. ಈ ರೀತಿ ಮಾಡುವುದು ಹಣಕ್ಕೆ ಮಾಡಿದ ಅಪಮಾನ, ಜೊತೆಗೆ ಇದು ಭಾರತ ಸರ್ಕಾರದ ನಿಯಮಗಳಿಗೂ ವಿರುದ್ಧವಾಗಿದೆ.
>> ನೋಟುಗಳ ಮೇಲೆ ಎಂದಿಗೂ ಕೂಡ ಆಹಾರ ಪದಾರ್ಥಗಳನ್ನು ಇಡಬೇಡಿ. ಅಲ್ಲಲ್ಲಿ ನೋಟು ನಾಣ್ಯಗಳನ್ನು ಬೀಳಲು ಬಿಡಬೇಡಿ. ಹಣವನ್ನು ಯಾವಾಗಲೂ ಗೌರವದಿಂದ ನೋಡಿಕೊಳ್ಳಿ.
>> ನಿಮ್ಮ ವ್ಯಾಲೆಟ್ ಅಥವಾ ಪರ್ಸ್ ನಲ್ಲಿ ಹಣದ ಜೊತೆಗೆ ಹಳೆಯ ಬಿಲ್, ಪೇಪರ್ ಗಳನ್ನು ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಆದಾಯ ನಿಂತುಹೋಗುತ್ತದೆ.
ಇದನ್ನೂ ಓದಿ-Shani Jayanti: ತೊಂದರೆಗಳಿಂದ ಪಾರಾಗಲು ಶನಿ ಜಯಂತಿಯ ದಿನ ತಪ್ಪದೇ ಈ ಕೆಲಸ ಮಾಡಿ
>> ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಅಥವಾ ತಲೆಭಾಗದಲ್ಲಿ ವ್ಯಾಲೆಟ್ ಅಥವಾ ಪರ್ಸ್ ಇಟ್ಟು ಮಲಗಬೇಡಿ. ಅದನ್ನು ಕಬೋರ್ಡ್ ಅಥವಾ ಇತರ ಸುರಕ್ಷಿತವಾಗಿ ಜಾಗದಲ್ಲಿ ಇರಿಸಿ. ಅಲ್ಲದೆ, ಪರ್ಸ್‌ನಲ್ಲಿ ನೋಟುಗಳನ್ನು ತಿರುಚಿ ಇಡಬೇಡಿ.
ಇದನ್ನೂ ಓದಿ-Shukra Rashi Parivartan: ಇಂದಿನಿಂದ 27 ದಿನಗಳವರೆಗೆ ಈ ರಾಶಿಯವರಿಗೆ ಶುಕ್ರನ ಕೃಪೆ, ಹಣದ ಸುರಿಮಳೆ
(Declaimer- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.