Vastu Tips for Plot Selection in Kannada - ಪ್ಲಾಟ್ ಖರೀದಿಸುವುದು ಒಂದು ದೊಡ್ಡ ಜವಾಬ್ದಾರಿಯ ಕೆಲಸ. ಏಕೆಂದರೆ ಪ್ಲಾಟ್ ಅಥವಾ ನಿವೇಶನವನ್ನು ಖರೀದಿಸುವಲ್ಲಿ ಯಾವುದೇ ವಾಸ್ತು ಸಂಬಂಧಿತ ತಪ್ಪು ದೊಡ್ಡ ನಷ್ಟವನ್ನೇ ಉಂಟುಮಾಡುತ್ತದೆ. ಹೀಗಾಗಿ ನಿವೇಶನ ಖರೀದಿಸುವಾಗ ವಾಸ್ತುಗೆ ಸಂಬಂಧಿಸಿದ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಅಂತಹ ನಿವೇಶನವನ್ನು ಇಟ್ಟುಕೊಳ್ಳುವುದು ಅಥವಾ ಮಾರಾಟ ಮಾಡುವುದು ಕೂಡ ಹಾನಿ ತರುತ್ತದೆ.

COMMERCIAL BREAK
SCROLL TO CONTINUE READING

ಇಂತಹ ನಿವೇಶನ ಹಾನಿ ತರುತ್ತದೆ
ನೀವು ಖರೀದಿಸುತ್ತಿರುವ ನಿವೇಶನದ ದಕ್ಷಿಣ ದಿಕ್ಕಿನಲ್ಲಿ ಬಾವಿ ಇರುವುದು ತುಂಬಾ ಅಪಾಯಕಾರಿ, ಇಂತಹ ನಿವೇಶನದಲ್ಲಿ ಆಕಸ್ಮಿಕ ಅಪಘಾತಗಳು ಸಂಭವಿಸುತ್ತವೆ. ಅಲ್ಲಿ ನಿರ್ಮಿಸಲಾಗುವ ಮನೆಯಲ್ಲಿ ವಾಸಿಸುವರ ಬಳಿ ಧನ-ಸಂಪತ್ತು ಎಂದಿಗೂ ಕೂಡ ನಿಲ್ಲುವುದಿಲ್ಲ. ನಿವೇಶನ ಯಾವಾಗಲು ನೆರವಾದ ಕೋನಗಳನ್ನು ಹೊಂದಿರುವುದು ಉತ್ತಮ. ನಿವೇಶನದ ಈಶಾನ್ಯ ಮೂಲೆ ಬೆಳೆಯುವ ಹಾಗಿರಬೇಕು ಮತ್ತು ಅದು ಎಂದಿಗೂ ಕೂಡ ಶುಭಕರ. ಇದಲ್ಲದೆ, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಎತ್ತರ ಇರುವುದು ಯಾವಾಗಲು ಅಶುಭಕರ.

ನಿವೇಶನದ ಆಕಾರದಲ್ಲಿ, ನೈಋತ್ಯ ಅಂದರೆ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಕೋನ ಹೆಚ್ಚಾಗಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ನಿವೇಶನ ಖರೀದಿಸಲು ಹೋದಾಗ, ದಕ್ಷಿಣ ಭಾಗ ಹೆಚ್ಚಿರುವ ನಿವೇಶನವನ್ನು ಖರೀದಿಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅಂತಹ ನಿವೇಶನ ಈಗಾಗಲೇ ಇದ್ದರೆ, ಅದನ್ನು ಕೈಬಿಡಬೇಕು ಅಥವಾ ಆ ದಿಕ್ಕನ್ನು ಲಂಬ ಕೋನದಲ್ಲಿ ಪರಿವರ್ತಿಸಬೇಕು. ಹೀಗೆ ಮಾಡುವುದರಿಂದ ಉಳಿಯುವ ಭೂಮಿಯನ್ನು ಯಾರಿಗಾದರೂ ದಾನ ಮಾಡಬೇಕು. ಏಕೆಂದರೆ, ಅದನ್ನು ಮಾರಾಟ ಮಾಡುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಆದರೆ, ಈಶಾನ್ಯವನ್ನು ಹೊರತುಪಡಿಸಿ, ಆಗ್ನೇಯ ಮತ್ತು ಪಶ್ಚಿಮದಲ್ಲಿ ಹೆಚ್ಚಿರುವ ಭೂಖಂಡವನ್ನು ಸಮಕೋನದಲ್ಲಿರಿಸುವ ಮೂಲಕ ಅದರ ಉಳಿದ ಭಾಗವನ್ನು ನೀವು ಮಾರಾಟ ಮಾಡಬಹುದು.

ನಿವೇಶನದ ಕೋನಗಳಲ್ಲಿ ಸವೆತ ಇರಬಾರದು
ಇದೇ ರೀತಿ, ನಿವೇಶನದ ಯಾವುದೇ ಕೋನಗಳು ಸವೆತಗೊಂದ್ರಬಾರದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಅವಶ್ಯಕ. ಏಕೆಂದರೆ, ಯಾವ ರೀತಿ ಕೋನಗಳ ಹೆಚ್ಚಾಗುವಿಕೆಯಿಂದ ದೈವಾನುಕೂಲತೆಯ ಶಕ್ತಿ ಹೆಚ್ಚಾಗುತ್ತದೆಯೋ, ಅದೇ ರೀತಿ ಕೋನಗಳ ಸವೆತದಿಂದಾಗಿ, ಅದಕ್ಕೆ ಸಂಬಂಧಿಸಿದ ದೇವತೆಗಳ ಅಥವಾ ದೈವಾನುಕೂಲತೆಯ ಶಕ್ತಿಯಲ್ಲಿ ಇಳಿಕೆ ಉಂಟಾಗುತ್ತದೆ. ಯಾವುದೇ ಕೋನದಲ್ಲಿ ಸವೆತ ಉಂಟಾದರೆ, ನಿವೇಶನ ಚೌಕಾಗಿ ಉಳಿಯುವುದಿಲ್ಲ ಮತ್ತು ಅಂತಹ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುವುದನ್ನು ವಾಸ್ತು ಶಾಸ್ತ್ರದಲ್ಲಿ ವರ್ಜಿತ ಎನ್ನಲಾಗಿದೆ.

ಸವೆತಗೊಂಡ ನೈಋತ್ಯ ಕೋನ ಅಪಾಯಕಾರಿಯಲ್ಲ
ಆದರೆ, ಈ ಮೇಲಿನ ನಿಯಮಕ್ಕೂ ಕೂಡ ಒಂದು ಅಪವಾದವಿದೆ. ಅದೇನೆಂದರೆ ಆಗ್ನೇಯ ಕೋನದಿಂದ ನಿವೇಶನ ಸವೆತಗೊಂಡಿದ್ದರೆ. ಅಲ್ಲಿ ಮನೆ ನಿರ್ಮಿಸಿ ವಾಸಿಸುವುದು ಅಶುಭವಲ್ಲ. ಏಕೆಂದರೆ ಆಗ್ನೇಯ ಕೋನದ ಅಧಿಕಾರ ರಾಹುವಿನ ಬಳಿ ಇದೆ ಎಂಬುದೇ ಇದಕ್ಕೆ ಸ್ಪಷ್ಟವಾದ ಕಾರಣ. ರಾಹು ಅಸುರ ಶಕ್ತಿಯನ್ನು ಹೊಂದಿದ್ದಾನೆ. ಇದೂ ಕೂಡ ಅನೇಕ ರೀತಿಯಲ್ಲಿ ಅಶುಭತನಕ್ಕೆ ಕಾರಣವಾಗುತ್ತದೆ. ಹೀಗಾಗಿ, ಆಗ್ನೇಯ ಕೋನ ಸವೆತಗೊಂಡರು ಅದು ರಾಹುವಿನ ಬಲವನ್ನು ಕಡಿಮೆ ಮಾಡುತ್ತದೆ.ಇಂತಹ ವಸತಿಗಳಲ್ಲಿ ವಾಸಿಸುವ ಜನರು ಮೂಢನಂಬಿಕೆಗಳಿಂದ ಮುಕ್ತವಾಗಿ ಬದುಕುತ್ತಾರೆ. ಅಡೆತಡೆಗಳ ಭಯವಿಲ್ಲವಿಲ್ಲದೆ ಬದುಕುತ್ತಾರೆ, ಮನಸ್ಸು ಕೆಡುವುದಿಲ್ಲ. ರಾಹು ಬಲಹೀನನಾಗುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಈ ಕೋನದ ಸವೆತದಿಂದಾಗಿ, ವಾಸ್ತು ಪುರುಷನ ತಲೆಗಿಂತ ಕಾಲುಗಳು ಚಿಕ್ಕದಾಗುತ್ತವೆ, ಇದನ್ನು ಮಂಗಳಕರ ಸಂಕೇತ ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-Palmistry: ಹಸ್ತದ ಗಾತ್ರ ವ್ಯಕ್ತಿಯ ವ್ಯಕ್ತಿತ್ವ ಸ್ವಭಾವ ಕೂಡ ಹೇಳುತ್ತದೆ

ವೈಬ್ರೇಶನ್ ಉತ್ತಮವಾಗಲು ಏನು ಮಾಡಬೇಕು
ಹೇಗೆ ಮನುಷ್ಯನ ಸುತ್ತ ನಾಲ್ಕು ದಿಕ್ಕುಗಳ ಅಲೆಗಳ ಸೆಳೆತ ಇರುತ್ತದೆಯೋ, ಅದೇ ರೀತಿ ಭೂಮಿಯ ಮೇಲೂ ಕೂಡ. ವಿವಿಧ ರೀತಿಯ ವೈಬ್ರೇಶನ್ ಗಳಿರುತ್ತವೆ. ಈ ಅಲೆಗಳ ಮತ್ತು ಅವುಗಳ ಹಿಂದೆ ಕೆಲವು ಗೋಚರ ಮತ್ತು ಅಗೋಚರ ಕಾರಣಗಳಿವೆ. ಉದಾಹರಣೆಗೆ ನೂರು ವರ್ಷಗಳ ಹಿಂದೆ ಯಾವುದಾದರೊಂದು ಭೂಮಿಯಲ್ಲಿ ಸ್ಮಶಾನ ಭೂಮಿ ಇದ್ದರೆ ಅಂತಹ ಭೂಮಿಯ ವೈಬ್ರೇಶನ್ ಸರಿಯಾಗಿರುವುದಿಲ್ಲ. ಈಗ ಅಂತಹ ಭೂಮಿಯಲ್ಲಿ ಎಲ್ಲಿಯೂ ಕೂಡ ವಾಸಿಸುವುದು  ಸೂಕ್ತವಲ್ಲ. ಆಸ್ಪತ್ರೆ, ಕಾರಾಗೃಹ, ಪೊಲೀಸ್ ಠಾಣೆ ಹೀಗೆ ಯಾವುದಾದರೂ ಒಂದು ಕಡೆ ಹಲವು ವರ್ಷಗಳಿಂದ ಯಾತನೆ, ಸಂಕಟದ ವಾತಾವರಣವಿದ್ದು, ಇಂದು ಅಲ್ಲಿಯೇ ಮನೆ ಕಟ್ಟಲು ಹೋದರೆ, ಆಗ ನೋವಿನ ಅಲೆಗಳು ಅಲ್ಲಿ ಪಸರಿಸಿವೆ ಎಂಬುದನ್ನು ನೆನಪಿನಲ್ಲಿಡಿ. ಇಂತಹ ಕಡೆ ನಿವೇಶನ ಖರೀದಿಸುವ ಮಾಲಿಕರಿಗೆ ಹಲವಾರು ವರ್ಷಗಳವರೆಗೆ ಶಾಂತಿ ಪ್ರಾಪ್ತಿಯಾಗುವುದಿಲ್ಲ.


ಇದನ್ನೂ ಓದಿ-Weekly Horoscope: ಕರಿಯರ್ ನಲ್ಲಿ ಬದಲಾವಣೆಯ ಜೊತೆಗೆ ಈ ರಾಶಿಗಳ ಜನರಿಗೆ ಪ್ರಮೋಶನ್ ಸಿಗಲಿದೆ, ಇಲ್ಲಿದೆ ಸಾಪ್ತಾಹಿಕ ರಾಶಿ ಫಲ

ಬಾವಿ ಮತ್ತು ಆಲದ ಮರ ಇರುವುದು ಸೂಕ್ತವಲ್ಲ
ನಿವೇಶನದಲ್ಲಿ ಬಾವಿ ಅಥವಾ ಆಲದ ಮರ ಇರುವುದು ಸೂಕ್ತವಲ್ಲ. ಏಕೆಂದರೆ, ಅಂತಹ ನಿವೇಶನದಲ್ಲಿ ನಿರ್ಮಾಣಗೊಂಡ ಮನೆಯ ಮುಖ್ಯ ದ್ವಾರವನ್ನು ವಾಸ್ತು ಪ್ರಕಾರ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಬಾಗಿಲಿನ ಮುಂದೆ ಯಾವುದೇ ರೀತಿಯ ಅಡಚಣೆಯಿದ್ದರೆ, ಅಂತಹ ನಿವೇಶನವನ್ನು ಸಾಧ್ಯವಾದಷ್ಟು ಖರೀದಿಸುವುದನ್ನು ತಪ್ಪಿಸಬೇಕು. ನಿವೇಶನದ ಈಶಾನ್ಯ ಭಾಗದಲ್ಲಿ ತಗ್ಗು ಮತ್ತು ನೈಋತ್ಯ ಭಾಗದಲ್ಲಿ ಎತ್ತರ ಇರಬೇಕು ಎಂಬುದನ್ನು ನೆನಪಿನಲ್ಲಿಡಿ, ಆಗ ಮಾತ್ರ ಶುಭ ಸಂಗತಿಗಳು ಹೆಚ್ಚಾಗುತ್ತವೆ. ಭೂಮಿಯ ದಕ್ಷಿಣದಲ್ಲಿ ಬಾವಿ ಇದ್ದರೆ ಅದು ಅಶುಭ. ಏಕೆಂದರೆ ಅಂತಹ ಮನೆಯಲ್ಲಿ ಅಪಘಾತಗಳು ಸಂಭವಿಸುತ್ತವೆ. ನಿವೇಶನದಲ್ಲಿ ವಾಸಿಸುವ ವ್ಯಕ್ತಿಯು ಎಂದಿಗೂ ಹಣವನ್ನು ಕೂಡಿಹಾಕಲು ಸಾಧ್ಯವಾಗುವುದಿಲ್ಲ. ನಿವೇಶನ ತೆಗೆದುಕೊಂಡ ನಂತರ, ನಿರ್ಮಾಣ ಕಾರ್ಯ ಆರಂಭಿಸುವ ಸಮಯದಲ್ಲಿ, ಯಾವ ಸ್ಥಳದಿಂದ, ಯಾವ ಮುಹೂರ್ತದಲ್ಲಿ ಏನು ನಿರ್ಮಾಣವನ್ನು ಮೊದಲು ಪ್ರಾರಂಭಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ನಿರ್ಮಾಣ ಕಾರ್ಯ ಆರಂಭಿಸುವ ಮೊದಲು ಭೂ ಪರೀಕ್ಷೆ, ಸಂಶೋಧನೆ ಹಾಗೂ ಕಂಟಕಗಳ ಅಧ್ಯಯನ ತಪ್ಪದೆ ನಡೆಸಬೇಕು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.