Vastu Tips For Happy Life : ಯಾವುದೇ ಕಾರಣವಿಲ್ಲದಿದ್ದರೂ ಪದೇ ಪಡೆ ವಿವಾದದಲ್ಲಿ ಬೀಳುವುದು,  ಮನೆಯಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಗೊಂದಲ ಕಿರಿ ಕಿರಿ ಮುಂದುವರಿಯುತ್ತಿದ್ದರೆ ಇದು ವಾಸ್ತುದೋಷದ ಸಂಕೇತವಾಗಿರಬಹುದು. ಹೀಗಿದ್ದಾಗ ಕೆಲವೊಂದು ವಾಸ್ತು ಪರಿಹಾರಗಳನ್ನು ಅನುಸರಿಸುವುದರಿಂದ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಹೀಗೆ ಮಾಡುವುದರಿಂದ ಮನೆಯಲ್ಲಿ ನೆಲೆಯಾಗುವುದು ಸುಖ ಸಂತೋಷ :
ಸಾಸಿವೆ ಎಣ್ಣೆಯಲ್ಲಿ ಲವಂಗವನ್ನು ಹಾಕಿ ದೀಪವನ್ನು ಹಚ್ಚಿ :
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಸಾಸಿವೆ ಎಣ್ಣೆಯಲ್ಲಿ ಲವಂಗವನ್ನು ಹಾಕಿ ದೀಪ ಬೆಳಗಿಸಿ. ಈ ರೀತಿ ಮನೆಯಲ್ಲಿ  ದೀಪ ಬೆಳಗುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಎನ್ನುವ ನಂಬಿಕೆ ಇದೆ. ಲಕ್ಷ್ಮಿ ದೇವಿಯ ಕೃಪೆಯಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.


ಇದನ್ನೂ ಓದಿ : Monthly Horoscope: ಡಿಸೆಂಬರ್‌ನಲ್ಲಿ ಈ ರಾಶಿಯವರ ಅದೃಷ್ಟ ಬೆಳಗಲಿದ್ದು, ಸುಖ-ಸಂಪತ್ತು ದೊರೆಯಲಿದೆ


ಬಾಣಲೆಯ ಮೇಲೆ ಹಾಲು ಚಿಮುಕಿಸಿ :
ಮನೆಯಲ್ಲಿ ಅಡುಗೆ ಮಾಡುವ ಮೊದಲು ಬಾಣಲೆಯ ಮೇಲೆ ಹಾಲು ಚಿಮುಕಿಸಿ. ಇದರೊಂದಿಗೆ, ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯು ಮನೆಯಿಂದ ಹೊರಹೋಗಿ, ಮನೆಯಲ್ಲಿ ಸಮೃದ್ಧಿ ನೆಲೆಯಾಗುವುದು. 


ಹಸುವಿಗೆ ಆಹಾರ ನೀಡಿ : 
ಮನೆಯಲ್ಲಿ ಮಾಡಿದ ಅಡುಗೆಯನ್ನು ಮೊದಲು ಹಸುವಿಗೆ ನೀಡಿ. ಹಸುವಿನಲ್ಲಿ ಎಲ್ಲಾ ದೇವ-ದೇವತೆಗಳ ವಾಸವಾಗಿದ್ದಾರೆ ಎಂದು ಹೇಳಲಾಗುತ್ತದೆ.  ಹಾಗಾಗಿ ನಿತ್ಯ ಹಸುವಿಗೆ ಆಹಾರ ನೀಡುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಯ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.


ಈ ರೀತಿ ಬಡತನವನ್ನು ತೊಡೆದುಹಾಕಬಹುದು : 
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರಬೇಕಾದರೆ, ಮನೆಯಲ್ಲಿ ಮುರಿದ ವಸ್ತುಗಳನ್ನು ಇಡಬಾರದು. ಮನೆಯಿಂದ ಮುರಿದ ವಸ್ತುಗಳನ್ನು ತಕ್ಷಣ ಹೊರಹಾಕಬೇಕು. 


ಇದನ್ನೂ ಓದಿ : Numerology 2023: ಈ ದಿನಾಂಕಗಳಲ್ಲಿ ಜನಿಸಿದವರಿಗೆ 2023ರ ವರ್ಷವು ತುಂಬಾ ಮಂಗಳಕರವಾಗಿದೆ!


ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲಿ ನೆಡಬೇಕು:
ವಾಸ್ತು ಪ್ರಕಾರ ತುಳಸಿ ಗಿಡವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನೆಡಬೇಕು.  ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.