Vastu Tips: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿ ಕೆಲಸಕ್ಕೂ ನಿರ್ದೇಶನವನ್ನು ನೀಡಲಾಗುತ್ತದೆ. ವಾಸ್ತುವಿನಲ್ಲಿ ಮನೆಯ ಮುಖ್ಯ ದ್ವಾರ, ಕಿಟಕಿ ಬಾಗಿಲಿನಿಂದ ಹಿಡಿದು ಅಡುಗೆಮನೆ, ಮಲಗುವ ಕೋಣೆ ಮತ್ತು ಸ್ನಾನಗೃಹದವರೆಗೆ ಎಲ್ಲದಕ್ಕೂ ನಿರ್ದಿಷ್ಟ ದಿಕ್ಕನ್ನು ತಿಳಿಸಲಾಗಿದೆ. ಅಂತೆಯೇ, ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಇಡುವ ವಸ್ತುಗಳಿಗೂ ಕೂಡ ಕೆಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಟಿವಿಯನ್ನು ಕೂಡ ನಾವು ಎಲ್ಲೆಂದರಲ್ಲಿ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದಾಗಿ, ಮನೆಯ ಒಡೆಯ ಹಲವು ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ಭಾರೀ ಹಣದ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಮನೆಯಲ್ಲಿ ಟಿವಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.


COMMERCIAL BREAK
SCROLL TO CONTINUE READING

ವಾಸ್ತು ಪ್ರಕಾರ ಮನೆಯಲ್ಲಿ ಟಿವಿ ಇಡಲು ಇದು ಸರಿಯಾದ ದಿಕ್ಕು:
ವಾಸ್ತು ಶಾಸ್ತ್ರದ ಪ್ರಕಾರ, ಆಗ್ನೇಯ ಅಥವಾ ಪೂರ್ವ ದಿಕ್ಕು ಮನೆಯಲ್ಲಿ ಟಿವಿ ಇಡಲು ಸರಿಯಾದ ದಿಕ್ಕು. ಈ ದಿಕ್ಕಿನಲ್ಲಿ ಟಿವಿಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇದರಿಂದ ಧನಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ ಎಂಬ ನಂಬಿಕೆಯೂ ಇದೆ. 


ಇದನ್ನೂ ಓದಿ- Good Luck Signs: ಮನೆಯ ಬಾಲ್ಕನಿಯಲ್ಲಿ ಈ ಪಕ್ಷಿ ಕಾಣಿಸಿಕೊಂಡರೆ ಸುವರ್ಣ ದಿನಗಳು ಆರಂಭ ಎಂದೇ ಅರ್ಥ


ಟಿವಿ ನೋಡುವಾಗ ಮುಖ ಪೂರ್ವದ ಕಡೆಗೆ ಇರಬೇಕು: 
ವಾಸ್ತು ಪ್ರಕಾರ, ಟಿವಿ ವೀಕ್ಷಿಸುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು.  ಇದರೊಂದಿಗೆ, ಮನೆಯ ಪ್ರವೇಶದ್ವಾರದ ಮುಂದೆ ಟಿವಿಯನ್ನು ಎಂದಿಗೂ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸದಾ ಕಲಹ ಉಂಟಾಗಿ ಕುಟುಂಬ ಸದಸ್ಯರ ನಡುವೆ ಕಲಹದ ವಾತಾವರಣ ನಿರ್ಮಾಣವಾಗುತ್ತದೆ.


ಬೆಡ್ ರೂಂನಲ್ಲಿ ಟಿವಿ ಇಡುವಾಗ ಈ ನಿಯಮಗಳನ್ನು ಅನುಸರಿಸಿ:
ವಾಸ್ತು ಶಾಸ್ತ್ರದ ಪ್ರಕಾರ, ಬೆಡ್ ರೂಂನಲ್ಲಿ ಟಿವಿ ಇಡುವುದು ಒಳ್ಳೆಯದಲ್ಲ. ಒಂದೊಮ್ಮೆ ನೀವು ನಿಮ್ಮ ಮಲಗುವ ಕೋಣೆಯಲ್ಲಿ ಟಿವಿ ಹಾಕಲು ಬಯಸಿದರೆ, ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ. ಮಲಗುವ ಕೋಣೆಯಲ್ಲಿ ಟಿವಿಯನ್ನು ಆಗ್ನೇಯ ದಿಕ್ಕಿನಲ್ಲಿ ಅಂದರೆ ಆಗ್ನೇಯ ಕೋನದಲ್ಲಿ ಇಡಬೇಕು. ಇದಲ್ಲದೆ, ಟಿವಿ ಮಲಗುವ ಕೋಣೆಯ ಮಧ್ಯದಲ್ಲಿ ಇರಬಾರದು. ಏಕೆಂದರೆ, ಇದು ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Tulsi Dry Leaves Tips: ಒಣ ತುಳಸಿ ಎಲೆಗಳ ಈ ಪರಿಹಾರದಿಂದ ನಿಮ್ಮ ಅದೃಷ್ಟವೇ ಬದಲಾಗುತ್ತೆ


ಮನೆಯಲ್ಲಿ ಟಿವಿ ಇಡುವಾಗ ಮಾಡುವ ಈ ತಪ್ಪಿನಿಂದ ಭಾರೀ ನಷ್ಟ:
ವಾಸ್ತು ಶಾಸ್ತ್ರದಲ್ಲಿ ಟಿವಿ ಅಳವಡಿಕೆ ಹಾಗೂ ಅದರ ಉಪಯೋಗದ ಬಗ್ಗೆ ಕೆಲವು ಮಾಹಿತಿ ನೀಡಲಾಗಿದೆ. ವಾಸ್ತು ಪ್ರಕಾರ, ಟಿವಿಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಅದರ ಮೇಲೆ ಕೊಳಕು ಅಥವಾ ಧೂಳನ್ನು ಎಂದಿಗೂ ಬಿಡಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಗೆಟಿವಿಟಿ ಹೆಚ್ಚುತ್ತದೆ. ನಕಾರಾತ್ಮಕ ಶಕ್ತಿಯಿಂದ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.