ನವದೆಹಲಿ: ವಾಸ್ತು ಶಾಸ್ತ್ರ(Vastu Shastra)ವು ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಲು ಮತ್ತು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳ ಮೂಲಕ ಧನಾತ್ಮಕ ಶಕ್ತಿಯನ್ನು ರವಾನಿಸಲು ಒಳ್ಳೆಯ ಮಾರ್ಗಗಳನ್ನು ನೀಡುತ್ತದೆ. ಇವುಗಳಲ್ಲಿ ಕನ್ನಡಿ, ತುಳಸಿ ಗಿಡ, ಘಂಟೆ, ಕುದುರೆ ಲಾಳ, ಉಪ್ಪು ಮುಂತಾದ ಅನೇಕ ವಸ್ತುಗಳು ಸೇರಿವೆ. ಇಂದು ನಾವು ಈ ಕೆಲವು ವಸ್ತುಗಳ ವಿಶೇಷ ಉಪಯೋಗ(Important Vastu Tips)ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ ನೋಡಿ…  


COMMERCIAL BREAK
SCROLL TO CONTINUE READING

ವಾಸ್ತುಶಾಸ್ತ್ರದಲ್ಲಿ ಕನ್ನಡಿಯ ಉಪಯೋಗ


ನಾವು ಸಾಮಾನ್ಯವಾಗಿ ಮುಖವನ್ನು ನೋಡಿಕೊಳ್ಳಲು ಕನ್ನಡಿ(Mirror)ಯನ್ನು ಬಳಸುತ್ತೇವೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಬಹಳ ಉಪಯುಕ್ತ ವಿಷಯವೆಂದು ಪರಿಗಣಿಸಲಾಗಿದೆ. ಕನ್ನಡಿಯಲ್ಲಿ ಅನೇಕ ವಾಸ್ತು ದೋಷ(Negative Energy)ಗಳನ್ನು ತೆಗೆಯುವ ಶಕ್ತಿ ಇದೆ. ಆದರೆ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಯಾವುದೇ ಕನ್ನಡಿಯನ್ನು ಇಡಬಾರದು ಎಂಬ ಪ್ರಮುಖ ವಿಷಯವನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗೆ ಮಾಡುವುದು ತುಂಬಾ ಅಶುಭಕರ. ಮನೆಯ ಮುಂದೆ ದೊಡ್ಡ ಕಂಬ, ಮರ, ಮನೆ, ಅವಶೇಷಗಳು ಇರುವುದು ಅಶುಭಕರ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಮುಖ್ಯ ಬಾಗಿಲಿನ ಚೌಕಟ್ಟಿನ ಮೇಲೆ ಒಂದು ರೌಂಡ್ ಆಕಾರದ ಕನ್ನಡಿ(Round Mirror)ಯನ್ನು ಹಾಕಬೇಕು. ಹೀಗೆ ಮಾಡುವುದರಿಂದ ಮನೆಗೆ ಬರುವ ಋಣಾತ್ಮಕ ಅಂಶವನ್ನು ತಡೆಗಟ್ಟಬಹುದು.  


ಮನೆಯ ಈಶಾನ್ಯ ಮೂಲೆಯು ಚಿಕ್ಕದಾಗಿದ್ದರೆ ಅಲ್ಲಿ ದೊಡ್ಡ ಕನ್ನಡಿಯನ್ನು ಇರಿಸಬೇಕು. ಈ ಕಾರಣದಿಂದ ಸ್ಥಳವು ವಿಸ್ತಾರವಾಗಿ ಕಾಣುತ್ತದೆ ಮತ್ತು ಇದು ವಾಸ್ತು ದೋಷವನ್ನು ತೆಗೆದುಹಾಕುತ್ತದೆ. ಡ್ರೆಸ್ಸಿಂಗ್ ರೂಮಿನ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿ ಇರಿಸಿ. ಅಂತಹ ಕನ್ನಡಿ ನಿಮಗೆ ಶುಭಕರವಾಗಿರುತ್ತದೆ.  ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇಡಬೇಡಿ, ಒಂದು ವೇಳೆ ಅಲ್ಲಿ ಕನ್ನಡಿ ಇರಿಸಿದ್ದರೆ ಪ್ರತಿ ರಾತ್ರಿ ಅದನ್ನು ಬಟ್ಟೆಯಿಂದ ಮುಚ್ಚಬೇಕು.  


ಕುದುರೆ ಲಾಳ ನಕಾರಾತ್ಮಕ ಶಕ್ತಿಯನ್ನು ದೂರವಿರಿಸುತ್ತದೆ


ಕುದುರೆ ಲಾಳ (Horseshoe)ವನ್ನು ಹಲವು ಶತಮಾನಗಳಿಂದ ಬಳಸಲಾಗುತ್ತಿದೆ. ಜ್ಯೋತಿಷ್ಯ ಮತ್ತು ಲಾಲ್ ಕಿತಾಬ್‌ನಲ್ಲಿ ವಾಸ್ತು ಹೊರತಾಗಿ ಕುದುರೆಲಾಳದ ಬಳಕೆಯನ್ನು ಬಹಳ ಮುಖ್ಯವೆಂದು ವಿವರಿಸಲಾಗಿದೆ. ಅದರಲ್ಲೂ ಕಪ್ಪು ಕುದುರೆಯ ಲಾಳವು ಮನೆಯ ಹಲವು ವಾಸ್ತು ದೋಷಗಳನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ಇದಕ್ಕಾಗಿ U ಆಕಾರದ ಕುದುರೆ ಲಾಳವನ್ನು ಮನೆಗಳಲ್ಲಿ ಹಾಕಬೇಕು. ಮತ್ತೊಂದೆಡೆ ಇದನ್ನು ಅಂಗಡಿ, ಕಚೇರಿ, ಕಾರ್ಖಾನೆ ಇತ್ಯಾದಿಗಳಲ್ಲಿ ಮೇಲ್ಮುಖವಾಗಿ ಹಾಕುವುದರಿಂದ ನಕಾರಾತ್ಮಕ ಶಕ್ತಿಯಿಂದ ದೂರವಿರಬಹುದು. ಕುದುರೆ ಲಾಳಕ್ಕೆ ಅದರದೇಯಾದ ಮಹತ್ವವಿದ್ದು, ವಾಸ್ತುದೋಷ ನಿವಾರಣೆಯಲ್ಲಿ ಇದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.