ವಾಷಿಂಗ್ಟನ್: ಕ್ಯಾಲರಿ ಕಡಿಮೆ ಇರುವಂತಹ ಸಸ್ಯಹಾರಿ ಆಹಾರ (Vegan Diet)ವು ಸಂಧಿವಾತ ರೋಗಿಗಳ ಕೀಲು ನೋವನ್ನು ಸುಧಾರಿಸುತ್ತದೆ ಎಂದು ಹೊಸ ಅಧ್ಯಯನದಿಂದ ಬಹಿರಂಗವಾಗಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದ್ದವರು ತೂಕ ನಷ್ಟವನ್ನು ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದ್ದರೆ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು


ಈ ಅಧ್ಯಯನದ ವರದಿಯು 'ಅಮೆರಿಕನ್ ಜರ್ನಲ್ ಆಫ್ ಲೈಫ್‌ಸ್ಟೈಲ್ ಮೆಡಿಸಿನ್' ಜರ್ನಲ್‌ನಲ್ಲಿ ಪ್ರಕಟವಾಗಿದೆ. "ರುಮಟಾಯ್ಡ್ ಸಂಧಿವಾತ(Joint Pain)ದಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಕೀಲು ನೋವಿನಿಂದ ನೆಮ್ಮದಿ ಪಡೆಯಲು ಸಸ್ಯ ಆಧಾರಿತ ಆಹಾರವು ಉತ್ತಮ" ಎಂದು ಅಧ್ಯಯನದ ಪ್ರಮುಖ ಲೇಖಕ ಮತ್ತು ವೈದ್ಯರ ಸಮಿತಿಯ ಅಧ್ಯಕ್ಷರಾದ ನೀಲ್ ಬರ್ನಾರ್ಡ್ ಹೇಳಿದ್ದಾರೆ. 


ರುಮಟಾಯ್ಡ್ ಸಂಧಿವಾತವು ಸಾಮಾನ್ಯ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ಸಾಮಾನ್ಯವಾಗಿ ಕೀಲು ನೋವು, ಊತ ಮತ್ತು ಅಂತಿಮವಾಗಿ ಶಾಶ್ವತ ಜಾಯಿಂಡ್‌ ಡ್ಯಾಮೇಜ್‌ನ್ನು ಉಂಟುಮಾಡುತ್ತದೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.