ರವೆಯಿಂದ ಇಡ್ಲಿ ಮಾಡುವುದು ಎಲ್ಲರಿಗೆ ಗೊತ್ತಿರುವ ವಿಷಯ ಆದರೆ ಪೌಷ್ಟಿಕ ಆಹಾರವಾಗಿ ವೆಜಿಟೇಬಲ್ ಇಡ್ಲಿಯನ್ನು ತಯಾರಿಸಬಹುದು. 


COMMERCIAL BREAK
SCROLL TO CONTINUE READING

ಇದು ಆರೋಗ್ಯಕ್ಕೆ ಪೌಷ್ಟಿಕತೆಯನ್ನು ನೀಡುವುದರ ಜೊತೆಗೆ ದೇಹಕ್ಕೆ ತುಂಬಾ ಸಹಕಾರಿಯಾಗಿದೆ ಈ ಇಡ್ಲಿಯನ್ನು ತಯಾರಿಸುವ ವಿಧಾನ ಇಲ್ಲಿದೆ. 


ಸಾಮಾನ್ಯವಾಗಿ ಜನರಿಗೆ ಇಡ್ಲಿ ಸಾಂಬಾರ್ ಎಂದರೆ ತುಂಬಾ ಇಷ್ಟವಾದಂತಹ ಆಹಾರ. ಇಡ್ಲಿ ಮಾಡಲು ಬಳಸುವ ವಿಧಾನವನ್ನು ಇದಕ್ಕೂ ಬಳಸಲಾಗುತ್ತದೆ ಆದರೆ ಇದರ ಜೊತೆಗೆ ತರಕಾರಿಗಳನ್ನು ಬಳಸುತ್ತಾರೆ. 


ಇದನ್ನು ಓದಿ :ಬಾಳೆಹಣ್ಣನ್ನು ತಿಂದಿದೀರಾ? ಅದರಲ್ಲೂ ಕೆಂಪು ಬಾಳೆ ಹಣ್ಣು ತಿನ್ನಿ, ಅದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ


ಬೇಕಾಗುವ ಪದಾರ್ಥಗಳು 


  • ಎರಡು ಕಪ್ ಅಕ್ಕಿ 

  • ಒಂದು ಕಪ್ ಗೋಡಂಬಿ 

  • ಈರುಳ್ಳಿ ಕ್ಯಾಪ್ಸಿಕಂ ಕ್ಯಾರೆಟ್ ಬೀನ್ಸ್ ಕತ್ತರಿಸಿದ ತರಕಾರಿಗಳು 

  • ಕತ್ತರಿಸಿದ ಕೊತ್ತಂಬರಿ 

  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 

  •  ಜೀರಿಗೆ ಪುಡಿ

  • ಮನಸ್ಸಿನ ಪುಡಿ 

  • ಅರಿಶಿಣ 

  • ಉಪ್ಪು 

  •  ಎಣ್ಣೆ 


ಇದನ್ನು ಓದಿ :ಹಾರರ್ ಸಿನಿಮಾ 'ಹಗ್ಗ'ದ ಮೂಲಕ ಸೂಪರ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ! ನಟಿ ಅನು ಪ್ರಭಾಕರ್


ತಯಾರಿಸುವ ವಿಧಾನ 
ಅಕ್ಕಿ ಮತ್ತು ಮೆಂತ್ಯವನ್ನು ಒಟ್ಟಿಗೆ ಆರು ಗಂಟೆಗಳ ಕಾಲ ನೆನೆಸಿಟ್ಟು, ನೆನೆಸಿದ ಅಕ್ಕಿ ಮತ್ತು ಬೇಳೆಯನ್ನು ನೀರಿನಿಂದ ಚೆನ್ನಾಗಿ ತೊಳೆದು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣಕ್ಕೆ ಕತ್ತರಿಸಿದ ತರಕಾರಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಮೆಣಸಿನ ಪುಡಿ, ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ಆರರಿಂದ ಎಂಟು ಗಂಟೆಗಳ ಕಾಲ ಇಡಬೇಕು. 


ಇದಾದ ಬಳಿಕ ಇಡ್ಲಿ ಪಾತ್ರೆಗೆ ಎಣ್ಣೆ ಹಾಕಿ ಹಿಟ್ಟನ್ನು ಹಾಕಿ ಸಾಮಾನ್ಯ ರೀತಿಯಲ್ಲಿ ಮಾಡುವ ಹಾಗೆ ಮಾಡಿದರೆ ವೆಜಿಟೇಬಲ್ ಇಡ್ಲಿ ರೆಡಿ ಮತ್ತು ಇದನ್ನು ಟೊಮ್ಯಾಟೋ ಚಟ್ನಿ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಬಹುದು.


ತರಕಾರಿ ಇಡ್ಲಿ ಯಲ್ಲಿ ವಿಟಮಿನ್ ಬಿ ಸಿ ಎ  ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕಬ್ಬಿಣ ಕ್ಯಾಲ್ಸಿಯಂ ಮೆಗ್ನೀಷಿಯಂ ನಂತಹ ಪೋಷಕಾಂಶಗಳನ್ನು ಒಳಗೊಂಡಿದ್ದು, ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಇದು ರಕ್ತದೊತ್ತಡ ಜೀರ್ಣ ಕ್ರಿಯೆಯಂತಹ ಸಮಸ್ಯೆಗಳನ್ನು ಸುಧಾರಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.