ಶನಿಯ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆ, 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತಿನ ಅಂಶವೆಂದು ಕರೆಯಲಾಗುತ್ತದೆ. ಮಂಗಳನನ್ನು ಶೌರ್ಯ ಮತ್ತು ಶಕ್ತಿಯ ಕಾರಕ ಎನ್ನಲಾಗುತ್ತದೆ. ಶುಕ್ರ-ಮಂಗಳನ ಸಂಯೋಗವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಆಗುತ್ತೆ. ಇದರೊಂದಿಗೆ, ಗ್ರಹಗಳ ಸಂಯೋಜನೆಯ ಪರಿಣಾಮವು ಕೂಡಾ ರಾಶಿಚಕ್ರದ (Zodiac sign) ಎಲ್ಲಾ 12 ರಾಶಿಗಳ ಮೇಲೆ ಬೀರಲಿದೆ. ಧನು ರಾಶಿಯಲ್ಲಿ (Sagitarius) ಶುಕ್ರ ಮತ್ತು ಮಂಗಳ ಸಂಯೋಗವಿದೆ. ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತಿನ ಅಂಶವೆಂದು ಕರೆಯಲಾಗುತ್ತದೆ. ಮಂಗಳನನ್ನು ಶೌರ್ಯ ಮತ್ತು ಶಕ್ತಿಯ ಕಾರಕ ಎನ್ನಲಾಗುತ್ತದೆ. ಶುಕ್ರ-ಮಂಗಳನ ಸಂಯೋಗವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದು ಮೂರು ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಮಿಥುನ ರಾಶಿ (Gemini) :
ಜಾತಕದ 7 ನೇ ಮನೆಯಲ್ಲಿ ಶುಕ್ರ (Venus) ಮತ್ತು ಮಂಗಳನ (Mars) ಸಂಯೋಗವಾಗಿದೆ. ಈ ಸಂಯೋಜನೆಯು ಸಂತೋಷದ ಫಲಿತಾಂಶವನ್ನು ನೀಡುತ್ತದೆ. ಈ ಅವಧಿಯಲ್ಲಿ ವೈವಾಹಿಕ ಜೀವನ (Married life) ಸುಖಮಯವಾಗಿರುತ್ತದೆ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಯಶಸ್ಸು ಇರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸೂಕ್ತ ಸಮಯವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಇದನ್ನೂ ಓದಿ : Dream interpretation: ಇಂತಹ ಕನಸುಗಳು ಧನ ಲಾಭದ ಸಂಕೇತಗಳನ್ನು ನೀಡುತ್ತವೆ
ವೃಶ್ಚಿಕ ರಾಶಿ (Scorpio):
ಜಾತಕದ ಎರಡನೇ ಮನೆಯಲ್ಲಿ ಶುಕ್ರ ಮತ್ತು ಮಂಗಳ ಸಂಯೋಗವಿದೆ. ಎರಡನೇ ಮನೆ ಅಂದರೆ ಹಣಕಾಸಿಗೆ ಸಂಬಂಧಪಟ್ಟಿರುವಂಥದ್ದು. ಈ ಸಂಯೋಜನೆಯೊಂದಿಗೆ, ಜೀವನದಲ್ಲಿ ಧನಲಾಭಾದ ಯೋಗವೂ ಸೃಷ್ಟಿಯಾಗುತ್ತದೆ. ಇದರ ಹೊರತಾಗಿ, ಉದ್ಯೋಗ-ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಬಹಳಷ್ಟು ದಿನಗಳಿಂದ ಹೊರಗಡೆ ಸಿಕ್ಕಿಹಾಕಿಕೊಂಡಿದ್ದ ಹಣ ಮತ್ತೆ ಕೈ ಸೇರಲಿದೆ. ವೃಶ್ಚಿಕ ರಾಶಿಯ (Scorpio) ಅಧಿಪತಿ ಮಂಗಳ (Mars). ಆದ್ದರಿಂದ, ಈ ರಾಶಿಚಕ್ರದ ಜನರಿಗೆ ಈ ಸಂಯೋಜನೆಯು ಬಹಳ ಪ್ರಯೋಜನಕಾರಿಯಾಗಿ ಸಾಬೀತಾಗುತ್ತದೆ.
ಕುಂಭ ರಾಶಿ (Aquarius) :
ಕುಂಭ ರಾಶಿಯ (Aquarius) ಜಾತಕದ 11ನೇ ಮನೆಯಲ್ಲಿ ಶುಕ್ರ-ಮಂಗಳ ಸಂಯೋಗ (Venus Mars Conjunction) ಉಂಟಾಗುತ್ತದೆ. ಜಾತಕದ ಹನ್ನೊಂದನೇ ಮನೆ ಆದಾಯಕ್ಕೆ ಸಬಂಧಿಸಿದ್ದಾಗಿದೆ. ಕುಂಭ ರಾಶಿಯವರಿಗೆ ಮಂಗಳ ಮತ್ತು ಶುಕ್ರನ ಸಂಯೋಜನೆಯು ಲಾಭದಾಯಕವಾಗಿರುತ್ತದೆ. ದೈನಂದಿನ ಆದಾಯ ಹೆಚ್ಚಾಗುತ್ತದೆ. ಮಾಧ್ಯಮ, ವೈದ್ಯಕೀಯ, ಕಲೆ ಮತ್ತು ಪೊಲೀಸ್ ಇಲಾಖೆಗಳಿಗೆ ಸಂಬಂಧಿಸಿದ ಜನರು ಬಡ್ತಿ ಪಡೆಯುವ ಸಾಧ್ಯತೆ ಇದೆ. ಕುಂಭ ರಾಶಿಯ ಅಧಿಪತಿ ಶನಿ. ಶನಿ (Saturn) ಮತ್ತು ಶುಕ್ರನ ನಡುವೆ ಸ್ನೇಹ ಸಂಬಂಧವಿದೆ. ಆದ್ದರಿಂದ, ಈ ರಾಶಿಚಕ್ರದ ಜನರು ಈ ಸಂಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ.
ಇದನ್ನೂ ಓದಿ : Vastru Shastra: ಮನೆ/ಕಚೇರಿಯಲ್ಲಿ ಈ ದಿಕ್ಕಿನಲ್ಲಿ ಗಡಿಯಾರ ಇಡುವುದು ತುಂಬಾ ಅಶುಭ
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.