Venus Transit 2021 - ವೃಷಭ ರಾಶಿಯಲ್ಲಿ ಶುಕ್ರನ ಪ್ರವೇಶ (Shukra Rashi Parivartan 2021) ಭಾರಿ ಮಹತ್ವದ್ದು ಎನ್ನಲಾಗುತ್ತಿದೆ. ಈ ಶುಕ್ರನ ನಡೆ ಮೇಷ ರಾಶಿಯಿಂದ ಹಿಡಿದು ಮೀನ ರಾಶಿ ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಶುಕ್ರನ ಈ ರಾಶಿ ಪರಿವರ್ತನೆ ಕೆಲ ರಾಶಿ ಚಕ್ರದ ಜಾತಕದವರಿಗೆ ಹಾನಿ ಕೂಡ ತರಲಿದೆ ಎನ್ನಲಾಗಿದೆ. ನೀಚ ಗ್ರಹ ಎಂದೇ ಹೇಳಲಾಗುವ  ರಾಹು ಈಗಾಗಲೇ ವೃಷಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಈಗಾಗಲೇ ಮೇ 1 ರಂದು ಬುಧ ತನ್ನ ರಾಶಿ ಪರಿವರ್ತಿಸಿದ್ದಾನೆ. ವೃಷಭರಾಶಿಯಲ್ಲಿ ರಾಹುವಿನ ಜೊತೆಗೆ ಬುಧ ಬಂದ ಬಳಿಕ ಜಡತ್ವ ಯೋಗ ನಿರ್ಮಾಣಗೊಳ್ಳುತ್ತಿದೆ. ಮೇ 4 ರಂದು ಶುಕ್ರನ ಆಗಮನದಿಂದ (Venus Transit In Taurus) ವೃಷಭ ರಾಶಿಯಲ್ಲಿ ಒಟ್ಟು ಮೂರು ಗ್ರಹಗಳ ಯುತಿ ನಿರ್ಮಾಣಗೊಳ್ಳಲಿದೆ. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಧನ, ಐಶ್ವರ್ಯ, ಮನರಂಚನೆ, ಭೋಗ-ವಿಳಾಸ, ಗ್ಯಾಜೆಟ್ಸ್, ಲವ್, ರೋಮಾನ್ಸ್ ಹಾಗೂ ಸುಖ ದಾಂಪತ್ಯ ಜೀವನ, ಫ್ಯಾಶನ್ ಇತ್ಯಾದಿಗಳ ಮೂಲ ಕಾರಕ ಶುಕ್ರ ಎಂದು ಹೇಳಲಾಗಿದೆ


COMMERCIAL BREAK
SCROLL TO CONTINUE READING

12 ರಾಶಿಗಳ ರಾಶಿ ಫಲ (Venus Transit)
1. ಮೇಷ: ಶುಕ್ರನ ಈ ಗೋಚರ ನಿಮ್ಮ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ. ಶುಕ್ರನ ಈ ಗೋಚರ ನಿಮ್ಮ ರಾಶಿಯ ಎರಡನೆಯ ಭಾವದಿಂದ ಆಗುತ್ತಿದೆ. ಧನದ ವಿಷಯದಲ್ಲಿ ಶುಭ ಸಮಾಚಾರಗಳು ಪ್ರಾಪ್ತಿಯಾಗಲಿವೆ. ತಪ್ಪು ತಿಳುವಳಿಕೆಯಂತಹ ಸ್ಥಿತಿಯಿಂದ ದೂರ ಉಳಿಯಿರಿ. ಇಲ್ಲದೆ ಹೋದಲ್ಲಿ ತೊಂದರೆ ಎದುರಾದೀತು. ಆರೋಗ್ಯದ  ಕಾಳಜಿ ವಹಿಸಿ ಅದರಲ್ಲೂ ವಿಶೇಷವಾಗಿ ತಾಪಮಾನದ ಏರಿಳಿತದ ಮೇಲೆ ವಿಶೇಷ ಗಮನವಿರಲಿ.


2. ವೃಷಭ: ಶುಕ್ರ ನಿಮ್ಮ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ನಿಮ್ಮ ರಾಶಿಯಲ್ಲಿ ಶುಕ್ರನ ಈ ಗೋಚರ ನಿಮಗೆ ಲಾಭ ತರಲಿದೆ. ನಿಮ್ಮ ರಾಶಿಯ ಎರಡನೇ ಭಾವದಲ್ಲಿ ಶುಕ್ರನ ಈ ಗೋಚರ ಸಂಭವಿಸಲಿದೆ. ಮೊದಲ ಭಾವ ಆತ್ಮ, ಮಾನಸಿಕ ಶಕ್ತಿ ಇತ್ಯಾದಿಗಳಿಗೆ ಕಾರಕ. ಶುಕ್ರನ ಈ ರಾಶಿ ಪರಿವರ್ತನೆ ನಿಮಗೆ ಆರ್ಥಿಕ ಲಾಭ ನೀಡಲಿದೆ. ಭೋಗ ವಿಲಾಸಿ ಜೀವನಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ವೃದ್ಧಿಯಾಗಲಿದೆ.


3. ಮಿಥುನ: ಶುಕ್ರನ ಈ ರಾಶಿ ಪರಿವರ್ತನೆ ನಿಮ್ಮ ಜಾತಕದ 12ನೇ ಭಾವದಲ್ಲಿ ನೆರವೇರಲಿದೆ. ಹೀಗಾಗಿ ನಿಮಗೆ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇದೆ. ಖರ್ಚಿನ ಮೇಲೆ ನಿಯಂತ್ರಣವಿರಲಿ ಹಾಗೂ ಆರೋಗ್ಯದ ಪ್ರತಿ ನಿರ್ಲಕ್ಷ ಧೋರಣೆ ಬೇಡ.


4. ಕರ್ಕ: ಶುಕ್ರನ ವೃಷಭ ಗೋಚರ ನಿಮಗೆ ಲಾಭ ತರಲಿದೆ. ಆದರೆ, ಕೆಲ ಪ್ರಕರಣಗಳಲ್ಲಿ ಜಾಗ್ರತೆಯಿಂದಿರುವ ಅವಶ್ಯಕತೆ ಇದೆ. ಶುಕ್ರ ನಿಮ್ಮ ರಾಶಿಯ 11ನೇ ಭಾವದಲ್ಲಿ ಬರಲಿದ್ದಾನೆ. ಈ ಅವಧಿಯಲ್ಲಿ ಸ್ನೇಹಿತರಿಂದ ಬೆಂಬಲ ಸಿಗಲಿದೆ. ಸಹೋದರ-ಸಹೋದರಿಯರ ಜೊತೆಗೆ ಸಂಬಂಧ ಸುಧಾರಣೆ.


5. ಸಿಂಹ: ಜಾಬ್ ಹಾಗೂ ಕರಿಯರ್ ದೃಷ್ಟಿಯಿಂದ ಶುಕ್ರನ ಈ ಗೋಚರ ನಿಮ್ಮ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ನಿಮ್ಮ ರಾಶಿಯಲ್ಲಿ ಶುಕ್ರ 10ನೇ ಭಾವದಲ್ಲಿ ಗೋಚರಿಸಲಿದ್ದಾನೆ. ಹೊಸ ನೌಕರಿಯ ಶೋಧ ಪೂರ್ಣಗೊಳ್ಳಲಿದೆ. ಹೊಸ ವ್ಯಾಪಾರ ಆರಂಭಿಸುವಿರಿ. ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ.


ಇದನ್ನೂ ಓದಿ-ವೈಶಾಖ ಮಾಸದ ಮೊದಲ ಶನಿವಾರ ಶನಿದೇವನನ್ನು ಹೀಗೆ ಪೂಜೆ ಮಾಡಿದರೆ ಕಷ್ಟಗಳು ದೂರವಾಗುತ್ತದೆಯಂತೆ


6. ಕನ್ಯಾ: ಕನ್ಯಾ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಈ ಗೋಚರ 9ನೇ ಭಾವದಲ್ಲಿ ನೆರವೇರುತ್ತಿದೆ. ಸಂಚಾರ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಇದರಿದ ಲಾಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪರಿಣಾಮಗಳು ಪ್ರಾಪ್ತಿಯಾಗಲಿದೆ. ಧನಲಾಭದ ಸ್ಥಿತಿ  ನಿರ್ಮಾಣಗೊಳ್ಳುತ್ತಿದೆ.


7. ತುಲಾ: ಆರೋಗ್ಯದ ಕಾಳಜಿ ವಹಿಸಿ. ಜ್ಞಾನಪ್ರಾಪ್ತಿಯ ವಿಷಯದಲ್ಲಿ ಶುಕ್ರನ ಈ ಗೋಚರ ಸಹಕರಿಸಲಿದೆ. ಸಂಬಂಧಗಳ ಸಹಾಯದಿಂದ ನೀವು ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಜನರ ಪ್ರತಿಭೆಯಿಂದ ಪ್ರಭಾವಿತರಾಗುವಿರಿ. ವಿವಾದದ ಸ್ಥಿತಿಯಿಂದ ದೂರ ಉಳಿಯಲು ಪ್ರಯತ್ನಿಸಿ.


8. ವೃಶ್ಚಿಕ:  ಈ ರಾಶಿಯವರ ಜಾತಕದ ಸಪ್ತಮ ಭಾವದಲ್ಲಿ ಶುಕ್ರನ ಈ ಗೋಚರ ನಡೆಯಲಿದೆ. ಲವ್- ರಿಲೇಶನ್ ಶಿಪ್ ವಿಷಯದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಪ್ರೇಮ ವಿವಾಹ ಮಾಡಬಯಸುವವರಿಗೆ ಕಷ್ಟಗಳು ಎದುರಾಗಲಿವೆ. ಧೈರ್ಯದಿಂದಿರಿ.


9. ಧನು: ಶುಕ್ರ ರಾಶಿ ಪರಿವರ್ತನೆ ನಿಮಗೆ ಸ್ವಲ್ಪ ಕಷ್ಟಗಳನ್ನು ನೀಡಲಿದೆ. ಆರನೇ ಭಾವದಲ್ಲಿ ಶುಕ್ರನ ಗೋಚರ ನಡೆಯಲಿದೆ. ಇದರಿಂದ ಒತ್ತಡ ಹಾಗೂ ವಿವಾದದ ಸ್ಥಿತಿಗಳು ಎದುರಾಗಲಿವೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ನೌಕರಿಯಲ್ಲಿಯೂ ಕೂಡ ಅಡಚಣೆ ಎದುರಾಗಲಿದೆ.


ಇದನ್ನೂ ಓದಿ- ಹಣಕಾಸಿನ ಸಮಸ್ಯೆಯಾಗಲಿ, ಸಂಬಂಧದ ನಡುವಿನ ಬಿಕ್ಕಟ್ಟಾಗಲಿ ಚಿಟಿಕೆ ಅರಶಿನದಲ್ಲಿದೆ ಎಲ್ಲದಕ್ಕೂ ಪರಿಹಾರ..!


10. ಮಕರ: ಪ್ರೇಮ ಸಂಬಂಧ, ಸಂತಾನದ ದೃಷ್ಟಿಯಿಂದ ಶುಕ್ರನ ಗೋಚರ ನಿಮಗೆ ಶುಭ ಸಾಬೀತಾಗಲಿದೆ. ಧನಲಾಭದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಪ್ರೀತಿಯನ್ನು ವ್ಯಕ್ತಪಡಿಸಬಹುದು. ಶಿಕ್ಷಣಕ್ಕೆ ಉತ್ತಮ ಸಮಯವಾಗಿದೆ. ಈ ಅವಧಿಯಲ್ಲಿ ಗುರಿ ತಲುಪಲು ಹೆಚ್ಚು ಪ್ರಯತ್ನಿಸಬೇಕಾದ ಅವಶ್ಯಕತೆ ಬೀಳುವುದಿಲ್ಲ.


11. ಕುಂಭ: ಶುಕ್ರ ಗ್ರಹದ ಈ ಗೋಚರ ನಿಮ್ಮ ಜನ್ಮ ಜಾತಕದ 4ನೇ ಭಾವದಲ್ಲಿ ನಡೆಯಲಿದೆ. ಜನ್ಮ ಕುಂಡಲಿಯ ನಾಲ್ಕನೇ ಭಾವ ಕುಟುಂಬ, ತಾಯಿ, ಸಂಪತ್ತು, ಜನತೆ ಹಾಗೂ ಮನೆ ಇತ್ಯಾದಿಗಳ ಕಾರಣ ಎನ್ನಲಾಗುತ್ತದೆ. ಭೂಮಿ, ಭವನ ಇತ್ಯಾದಿಗಳ ಖರೀದಿಯ ವಿಷಯದಲ್ಲಿ ಸಫಲತೆ ಪ್ರಾಪ್ತಿಯಾಗಲಿದೆ. ಮನೆ ಸುಂದರಗೊಳಿಸುವಲ್ಲಿ ಯಶಸ್ಸು ಸಿಗಲಿದೆ.


12. ಮೀನ: ಶುಕ್ರನ ಈ ಗೋಚರ ನಿಮ್ಮ ರಾಶಿಯ ಮೂರನೇ ಭಾವದಲ್ಲಿ ನಡೆಯುತ್ತಿದೆ. ಮಿತ್ರರು, ಸಂಚಾರ, ಲೇಖನ, ಮನೋರಂಜನೆ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಪರಿಣಾಮಗಳು ಪ್ರಾಪ್ತಿಯಾಗಲಿವೆ. ಕಲೆ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಯಶಸ್ಸು ಲಭಿಸಲಿದೆ. ಧನಲಾಭದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.


ಇದನ್ನೂ ಓದಿ- ಸಮಸ್ಯೆಗಳು ಬೆನ್ನುಬಿಡುತ್ತಿಲ್ಲವೇ? ಹಾಗಿದ್ದರೆ ಈ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.