Shukra Gochar 2022: ಮುಂದಿನ 26 ದಿನಗಳವರೆಗೆ ಈ 5 ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ
Venus Transit May 2022: ಧನ, ಭೌತಿಕ ಸುಖ ಹಾಗೂ ಪ್ರೀತಿ-ಪ್ರಣಾಯದ ಕಾರಕ ಗ್ರಹ ಶುಕ್ರ ತನ್ನ ರಾಶಿಯನ್ನು ಬದಲಾಯಿಸಲಿದೆ. ಇದು 5 ರಾಶಿಗಳ ಜಾತಕಾದವರ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ.
Shukra Rashi Parivartan 23 May 2022: ಶುಕ್ರನ ರಾಶಿ ಪರಿವರ್ತನೆ ಆರ್ಥಿಕ ಸ್ಥಿತಿ, ಸುಖ-ಸೌಕರ್ಯಗಳು. ಲವ್ ಲೈಫ್ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಮೇ 23ರಂದು ಶುಕ್ರ ಗ್ರಹ ತನ್ನ ರಾಶಿಯನ್ನು ಬಡಲಾಯಿಸಲಿದೆ. ಅಂದರೆ, ಶುಕ್ರ ಮೇಷ ರಾಶಿಗೆ ಪ್ರವೇಶಿಸಲಿದ್ದು, ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಶುಕ್ರ ಮೇ 23 ರಿಂದ ಜೂನ್ 18ರವರೆಗೆ ಮೇಷ ರಾಶಿಯಲ್ಲಿಯೇ ವಿರಾಜಮಾನನಾಗಲಿದ್ದಾನೆ. ಹಾಗಾದರೆ, ಶುಕ್ರನ ಈ ರಾಶಿ ಪರಿವರ್ತನೆಯಿಂದ ಯಾರಿಗೆ ಶುಭಫಲಗಳು ಪ್ರಾಪ್ತಿಯಾಗಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಈ ಐದು ರಾಶಿಗಳ ಮೇಲೆ ಶುಕ್ರನ ಕೃಪಾಯವೃಷ್ಟಿ
ಮೇಷ ರಾಶಿ - ಶುಕ್ರನ ಮೇಷ ರಾಶಿಗೆ ಪ್ರವೇಶ ಮೇಷ ರಾಶಿಯ ಜಾತಕದವರಿಗೆ ಸಾಕಷ್ಟು ಲಾಭ ನೀಡಲಿದೆ, ವೃತ್ತಿ ಜೀವನದಲ್ಲಿ ಬಡ್ತಿಯ ಸಂಕೇತಗಳಿವೆ. ಹೊಸ ನೌಕರಿಯ ಕರೆ ಬರಬಹುದು. ಪ್ರಮೋಷನ್ ಸಾಧ್ಯತೆ ಇದೆ . ಧನಲಾಭದ ಜೊತೆಗೆ ಲವ್ ಲೈಫ್ ಸುಧಾರಿಸಲಿದೆ. ಜೀವನದಲ್ಲಿ ಪ್ರೀತಿ ರೊಮಾನ್ಸ್ ಹೆಚ್ಚಾಗಲಿದೆ.
ಮಿಥುನ ರಾಶಿ - ಶುಕ್ರನ ಮೇಷ ಗೋಚರ ಮಿಥುನ ಜಾತಕದವರಿಗೆ ಲಾಭಕಾರಿ ಸಾಬೀತಾಗಲಿದೆ. ಧನಲಾಭದ ಸಂಕೇತಗಳಿವೆ. ಆದಾಯದಲ್ಲಿನ ಹೆಚ್ಚಳ ಜೀವನವನ್ನು ಖುಷಿಯಿಂದ ತುಂಬಲಿದೆ. ಮನೆಯಲ್ಲಿ ನಗುವಿನ ವಾತಾವರಣವಿರಲಿದ್ದು, ನವವಿವಾಹಿತರಿಗೆ ಸಂತಾನ ಸುಖ ಪ್ರಾಪ್ತಿಯಾಗುವ ಸಂಕೇತಗಳಿವೆ.
ಸಿಂಹ ರಾಶಿ - ಶುಕ್ರನ ರಾಶಿ ಪರಿವರ್ತನೆ ಸಿಂಹ ರಾಶಿಯ ಜಾತಕದವರ ಭಾಗ್ಯವನ್ನು ಬಲಪಡಿಸಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ಲಭಿಸಲಿದೆ. ಹೊಸ ನೌಕರಿ ಸಿಗುವ ಸಾಧ್ಯತೆ ಇದೆ. ನೌಕರಿ ಇಲ್ಲದವರ ನೌಕರಿಯ ಹುಡುಕಾಟಕ್ಕೆ ತೆರೆಬೀಳಲಿದೆ. ವ್ಯಾಪಾರಿಗಳಿಗೆ ಲಾಭವಾಗಲಿದ್ದು, ಕೆಲ ಜಾತಕದವರ ಕಾರ್ಯಕ್ಷೇತ್ರ ಬದಲಾಗುವ ಸಾಧ್ಯತೆ ಇದೆ.
ಮಕರ ರಾಶಿ - ಮಕರ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಮೇಷ ರಾಶಿ ಗೋಚರ ಜೀವನದಲ್ಲಿ ಹಲವು ಒಳ್ಳೆಯ ಬದಲಾವಣೆಗಳನ್ನು ತರಲಿದೆ. ಪ್ರೀತಿಯಲ್ಲಿರುವವರು ವಿವಾಹ ಬಂಧನಕ್ಕೆ ಒಳಗಾಗುವ ಲಕ್ಷಣಗಳಿವೆ. ವಿವಾಹಿತರ ವೈವಾಹಿಕ ಜೀವನ ಕೂಡ ಸುಖದಿಂದ ಕೂಡಿರಲಿದೆ. ಮನೆ-ವಾಹನ ಖರೀದಿಗೆ ಈ ಸಮಯ ಉತ್ತಮವಾಗಿದೆ. ಆದಾಯದಲ್ಲಿ ವೃದ್ಧಿಯ ಸಂಕೇತಗಳಿವೆ.
ಇದನ್ನೂ ಓದಿ-Health Tips: ವೀಳ್ಯದೆಲೆ ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ಪ್ರಯೋಜನ..?
ಕುಂಭ ರಾಶಿ - ಕುಂಭ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಮೇಷ ರಾಶಿ ಗೋಚರ ಸಾಕಷ್ಟು ಶುಭವಾಗಿರಲಿದೆ. ನೌಕರಿಯಲ್ಲಿ ಬಡ್ತಿಯ ಲಕ್ಷಣಗಳು ಗೋಚರಿಸುತ್ತಿವೆ. ಗ್ಲಾಮರ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅತ್ಯಂತ ಶುಭವಾಗಿದೆ. ಕಮ್ಯೂನಿಕೇಶನ್ ಉತ್ತಮವಾಗಲಿದೆ. ಈ ಅವಧಿಯಲ್ಲಿ ನೀವು ಜನರ ಮೇಲೆ ಸುಲಭವಾಗಿ ನಿಮ್ಮ ಪ್ರಭಾವ ಬೀರುವಿರಿ.
ಇದನ್ನೂ ಓದಿ-Trigrahi Yog: ಮೀನ ರಾಶಿಯಲ್ಲಿ ‘ತ್ರಿಗ್ರಾಹಿ ಯೋಗ’, ಈ 3 ರಾಶಿಯವರ ಜೀವನದಲ್ಲಿ ಪ್ರಗತಿ
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.