ಬೆಂಗಳೂರು :  ಗ್ರಹಗಳ ಸ್ಥಾನಗಳು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ಕೂಡಾ ನಮ್ಮ ಜೀವನದ ಕೆಲವು ಅಂಶಗಳೊಂದಿಗೆ ಸಂಬಂಧ ಹೊಂದಿದೆ. ಗ್ರಹಗಳು ರಾಶಿ ಬದಲಾಯಿಸುತ್ತಿದ್ದಂತೆಯೇ  ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ.  ಶುಕ್ರ ಐಷಾರಾಮಿ ಜೀವನ, ವೈವಾಹಿಕ ಜೀವನ, ಪ್ರೀತಿ, ಸೌಂದರ್ಯದ ಅಂಶವಾಗಿದೆ. ಜಾತಕದಲ್ಲಿ ಶುಕ್ರನ ಸ್ಥಾನ ದುರ್ಬಲ ವಾಗಿದ್ದರೆ  ಅದು ವ್ಯಕ್ತಿಯ ಆರ್ಥಿಕ ಸ್ಥಿತಿ,  ಆರೋಗ್ಯ, ಸುಖ ಸಂತೋಷದ ಮೇಲೆ  ಭಾರೀ ಪರಿಣಾಮ ಬೀರುತದೆ.  ವ್ಯಕ್ತಿಯ ಪ್ರೇಮ ಜೀವನ ವೈವಾಹಿಕ ಜೀವನದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Shri Ganeshaನ ಕೃಪೆಯಿಂದ ಎಲ್ಲಾ ಕೆಲಸಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿ, ಕೇವಲ ಈ ಸಣ್ಣ ವಸ್ತುವನ್ನು ಮನೆಗೆ ತನ್ನಿ


ಶುಕ್ರನು ವೃಷಭ, ತುಲಾ ಮತ್ತು ಮೀನ ರಾಶಿಯ ಅಧಿಪತಿ.  ಶುಕ್ರನು ಮಂಗಳಕರಾಗಿದ್ದರೆ, ಆ ವ್ಯಕ್ತಿ ಜೀವನದಲ್ಲಿ ಭಾರೀ ಅದೃಷ್ಟವನ್ನು ಪಡೆಯುತ್ತಾನೆ. ಜೂನ್ 18 ರಂದು ಶುಕ್ರ ತನ್ನ ರಾಶಿಯನ್ನು ಬದಲಿಸಲಿದ್ದಾನೆ. ಈ ದಿನ ಶುಕ್ರನು ಮೇಷದಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ರಾಶಿ ಪರಿವರ್ತನೆಯು 2 ರಾಶಿಯವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲಿದೆ.  


ಮಿಥುನ:
ಮಿಥುನ ರಾಶಿಯವರಿಗೆ ಶುಕ್ತ ಸಂಕ್ರಮಣವು ಭಾರೀ ಲಾಭವನ್ನು ತರಲಿದೆ. ಯಾವುದೇ ಕೆಲಸದಲ್ಲಿಯಾದರೂ ಯಶಸ್ಸು ಸಿಗುತ್ತದೆ. ಕೈ ಹಾಕಿದ ಎಲ್ಲಾ ಕೆಲಸವೂ ಕೈ ಗೂಡುತ್ತದೆ. ಮಾತ್ರವಲ್ಲ ಹೆಚ್ಚಿನ ಶ್ರಮವಿಲ್ಲದೆಯೇ ಕೆಲಸಗಳೆಲ್ಲಾ ಸಾಂಗವಾಗಿ ನೆರವೇರುತ್ತದೆ. ಕ ಯಾವುದೇ ವ್ಯವಹಾರ ಆರಂಭಿಸಲು ಇದು ಉತ್ತಮ ಸಮಯ. ಹೂಡಿಕೆ ಮಾಡಲು ಕೂಡಾ ಒಳ್ಳೆಯ ಸಮಯ ಎನ್ನಲಾಗಿದೆ. ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಗೌರವ , ಪ್ರತಿಷ್ಠೆ ಹೆಚ್ಚಾಗುತ್ತದೆ. ಹೊಸ ವಾಹನ, ಮನೆ ಖರೀದಿ ಸಾಧ್ಯತೆ ಇದೆ. 


ಇದನ್ನೂ ಓದಿ :Shani Retrograde Effect: 141 ದಿನಗಳವರೆಗೆ ಶನಿಯ ಹಿಮ್ಮುಖ ಚಲನೆ, ಯಾರಿಗೆ ಲಾಭ-ಯಾರಿಗೆ ನಷ್ಟ? ಇಲ್ಲಿ ತಿಳಿದುಕೊಳ್ಳಿ


ಸಿಂಹ: 


ಶುಕ್ರ ಸಂಕ್ರಮಣ ಸಿಂಹ ರಾಶಿಯವರಿಗೆ ಕೂಡಾ ಅದೃಷ್ಟವನ್ನು ತರಲಿದೆ.  ಹಣಕಾಸಿನ ಲಾಭವು ಅಧಿಕವಾಗಿರುತ್ತದೆ. ಕೌಟುಂಬಿಕ ಜೀವನವು ಹೆಚ್ಚು ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನೀವು ಸಾಕಷ್ಟು ಗೌರವವನ್ನು ಪಡೆಯುತ್ತೀರಿ.  ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ. ಈ ಸಮಯದಲ್ಲಿ ಮಾಡುವ ಹೂಡಿಕೆ ಲಾಭ ತರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ವರದಾನವಾಗಿರಲಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.