Lucky Moles on Human Body: ಪ್ರತಿಯೊಬ್ಬ ವ್ಯಕ್ತಿಯ ದೇಹದ ಭಾಗಗಳ ವಿಭಿನ್ನವಾಗಿರುತ್ತದೆ. ಅದರಲ್ಲಿ ಮುಖ್ಯವಾದುದು ದೇಹದಲ್ಲಿ ಗೋಚರಿಸುವ ಮಚ್ಚೆಗಳು. ದೇಹದ ಕೆಲವೊಂದು ಭಾಗಗಳಲ್ಲಿರುವ ಮಚ್ಚೆಗಳು ವ್ಯಕ್ತಿಯ ಭವಿಷ್ಯದ ಜೊತೆ, ಆತ ಜೀವನದಲ್ಲಿ ಎಷ್ಟು ಸಂಪತ್ತು, ಯಶಸ್ಸು, ಆಸ್ತಿ, ಸಂತೋಷ ಗಳಿಸುತ್ತಾನೆ ಎಂಬುದನ್ನು ನಿರ್ಧರಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Hair Care: ಮೊಟ್ಟೆ ಜೊತೆ 2 ಚಮಚ ಈ ಎಣ್ಣೆಯನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ: ತಕ್ಷಣವೇ ಕೂದಲು ಆಗುತ್ತೆ ಶೈನ್!


ಕಣ್ಣಿನ ರೆಪ್ಪೆಗಳ ಮೇಲೆ ಮಚ್ಚೆ: ಕಣ್ಣಿನ ರೆಪ್ಪೆಗಳ ಮೇಲಿರುವ ಅತ್ಯಂತ ಸೂಕ್ಷ್ಮವಾದ ಮಚ್ಚೆಗಳು, ಆ ವ್ಯಕ್ತಿಯನ್ನು ಅದೃಷ್ಟವಂತರನ್ನಾಗಿಸುತ್ತದೆ ಎಂದು ಹೇಳಲಾಗುತ್ತದೆ.


ಕಣ್ಣಿನ ಮೇಲೆ ಮಚ್ಚೆ: ಕಣ್ಣಿನ ಮೇಲೆ ಮಚ್ಚೆ ಇರುವ ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನ ಅರ್ಥಗಳನ್ನು ಹೊಂದಿದೆ. ಒಬ್ಬ ಮನುಷ್ಯನಿಗೆ ಬಲಗಣ್ಣಿನ ಮೇಲೆ ಮಚ್ಚೆ ಇದ್ದರೆ, ಅವನು ತನ್ನ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾನೆ ಎಂದರ್ಥ. ಮತ್ತೊಂದೆಡೆ ಎಡಗಣ್ಣಿನ ಮೇಲೆ ಮಚ್ಚೆ ಇದ್ದರೆ, ಅವನ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇರುತ್ತವೆ ಎಂಬುದನ್ನು ಸೂಚಿಸುತ್ತದೆ. ಇನ್ನು ಮಹಿಳೆಯ ಎಡಗಣ್ಣಿನ ಮೇಲೆ, ಮತ್ತು ಪುರುಷರ ಬಲಗಣ್ಣಿನ ಮೇಲೆ ಮಚ್ಚೆ ಇದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.


ಮೂಗಿನ ಮೇಲೆ ಮಚ್ಚೆ: ಸಮುದ್ರಶಾಸ್ತ್ರದಲ್ಲಿ ಮೂಗಿನ ಮೇಲೆ ಮಚ್ಚೆ ಇರುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅಂತಹ ವ್ಯಕ್ತಿಯು ತುಂಬಾ ಪ್ರತಿಭಾವಂತನಾಗಿರುತ್ತಾನೆ ಮತ್ತು ಅವನ ಪ್ರತಿಭೆಯ ಆಧಾರದ ಮೇಲೆ ಹೆಸರನ್ನು ಗಳಿಸುತ್ತಾನೆ. ಅದರಲ್ಲೂ ಮಹಿಳೆಯ ಮೂಗಿನ ಮೇಲೆ ಮಚ್ಚೆ ಇದ್ದರೆ ಆಕೆ ಅದೃಷ್ಟವಂತಳಾಗುತ್ತಾಳೆ.


ಹುಬ್ಬುಗಳ ಮೇಲೆ ಮಚ್ಚೆ: ಹುಬ್ಬುಗಳ ಮೇಲೆ ಮಚ್ಚೆ ಇದ್ದರೆ ಅದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಎರಡೂ ಹುಬ್ಬುಗಳ ಮೇಲೆ ಮಚ್ಚೆ ಇದ್ದರೆ, ಆ ವ್ಯಕ್ತಿಯು ದೇಶ ಮತ್ತು ಪ್ರಪಂಚವನ್ನು ಸುತ್ತುತ್ತಾನೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಬಲ ಹುಬ್ಬಿನ ಮೇಲೆ ಮಚ್ಚೆ ಇದ್ದರೆ ಆ ವ್ಯಕ್ತಿಯು ಬಹಳಷ್ಟು ಯಶಸ್ಸು ಮತ್ತು ಹಣವನ್ನು ಪಡೆಯುತ್ತಾನೆ. ಎಡ ಹುಬ್ಬಿನ ಮೇಲಿನ ಮಚ್ಚೆ ಇರುವವರಿಗೆ ಸಂತೋಷದ ದಾಂಪತ್ಯ ಇರುತ್ತದೆ ಎಂದು ಹೇಳಲಾಗುತ್ತದೆ.


ಕಿವಿಯ ಮೇಲೆ ಮಚ್ಚೆ: ಕಿವಿಯ ಮೇಲೆ ಮಚ್ಚೆ ಇರುವುದು ಒಳ್ಳೆಯದಲ್ಲ. ಅಂತಹ ವ್ಯಕ್ತಿಗೆ ಆಯಸ್ಸು ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ.


ತುಟಿಗಳ ಮೇಲೆ ಮಚ್ಚೆ: ಮಹಿಳೆಯರ ತುಟಿಗಳ ಮೇಲೆ ಅಥವಾ ಮೂಗಿನ ಬಳಿ ಮಚ್ಚೆ ಇರುವುದು ಅವರ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಅದೃಷ್ಟವನ್ನು ಕೂಡ ನೀಡುತ್ತದೆ.


ಮುಖದ ಮೇಲೆ ಮಚ್ಚೆ: ಮುಖದ ಸುತ್ತ ಮಚ್ಚೆ ಇದ್ದರೆ, ಪುರುಷರು ಮತ್ತು ಮಹಿಳೆಯರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ  ಜನರು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ನಡೆಸುತ್ತಾರೆ ಮತ್ತು ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ.


ಕೆನ್ನೆಯ ಮೇಲಿನ ಮಚ್ಚೆ: ಎಡ ಕೆನ್ನೆಯ ಕಪ್ಪು ಮಚ್ಚೆಯು ಬಡತನದ ಸಂಕೇತವಾಗಿದೆ ಮತ್ತು ಬಲ ಕೆನ್ನೆಯ ಕಪ್ಪು ಮಚ್ಚೆಯು ಸಂಪತ್ತಿನ ಸಂಕೇತವಾಗಿದೆ.


ಇದನ್ನೂ ಓದಿ: Mangal Gochar 2023: ಈ ರಾಶಿಯವರ ಭಾಗ್ಯದ ಬಾಗಿಲು ತೆರೆದ ಮಂಗಳ: ಮುಂದಿನ 45 ದಿನ ಹೆಜ್ಜೆ ಹೆಜ್ಜೆಗೂ ಜಯ; ದಿಢೀರ್ ಧನಲಾಭ


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.