Viagra uses : ಮಲಗುವ ಕೋಣೆಯಲ್ಲಿ ಸಂಗಾತಿಯನ್ನು ಸಂತೋಷಗೊಳಿಸಲು ವಯಾಗ್ರದಂತಹ ಲೈಂಗಿಕ ಪ್ರಚೋದನಕಾರಿ ಔಷಧಗಳನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಈ ಔಷಧವು ಪುರುಷ ಲೈಂಗಿಕ ಸಾಮರ್ಥ್ಯಕ್ಕೆ ಸಂಬಂಧಿಸಿದೆ ಮತ್ತು ದುರ್ಬಲ ಲೈಂಗಿಕ ಸಾಮರ್ಥ್ಯವನ್ನು ಹೊಂದಿರುವವರಿಗೆ ಇದನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ವೈದ್ಯರು ಸ್ವತಃ ವಯಾಗ್ರ ಬಳಕೆಯನ್ನು ಅನುಮೋದಿಸುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಹೌದು.. ವಯಾಗ್ರ ಬಳಸುವ ಜನರು ತಮ್ಮ ಕಿವಿಯಲ್ಲಿ ಕಿವುಡುತನದ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಬ್ರಿಟನ್‌ ದೇಶದಲ್ಲಿ ವಯಾಗ್ರ ತೆಗೆದುಕೊಂಡ ಒಂಬತ್ತು ಜನರು ಔಷಧವನ್ನು ಬಳಸಿದ ನಂತರ ಕಳೆದ ಐದು ವರ್ಷಗಳಲ್ಲಿ ಹಲವಾರು ಅಡ್ಡಪರಿಣಾಮಗಳನ್ನು ಅನುಭವಿಸಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: ಈ ರಾಶಿಯ ಜನರ ಬಾಳಲ್ಲಿ ದೀಪಾವಳಿ ತರಲಿದೆ ಸಂತೋಷ-ಸಮೃದ್ಧಿ: ಲಕ್ಷ್ಮೀದೇವಿ ಅನುಗ್ರಹದಿಂದ ಸಿರಿಸಂಪತ್ತಿನ ಸುಧೆಯೇ ಹರಿದುಬರಲಿದೆ


ಅಲ್ಲದೆ, ಪ್ಲೇಬಾಯ್ ಮುಖ್ಯಸ್ಥ ಹಗ್ ಹೆಫ್ನರ್ ಕೂಡ ಒಮ್ಮೆ ವಯಾಗ್ರದ ಅತಿಯಾದ ಬಳಕೆಯಿಂದ ಕಿವುಡರಾಗಿದ್ದಾಗಿ ಹೇಳಿಕೊಂಡಿದ್ದಾನೆ. ಅವರು 2017 ರಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ವಯಾಗ್ರ ಸೇವನೆಯಿಂದ ಕೆಲವರು ತಮ್ಮ ಖಾಸಗಿ ಅಂಗಗಳಿಗೆ ಸಮಸ್ಯೆ ಉಂಟಾಗಿದ್ದಾಗಿ ದೂರಿದ್ದಾರೆ. ಮಲಗುವ ಕೋಣೆಯಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಳಸುವ ಔಷಧಿ ಕೆಲವು ನೋವಿಗೂ ಕಾರಣವಾಗಿದೆ.


ವಯಾಗ್ರ ತೆಗೆದುಕೊಳ್ಳುವವರಲ್ಲಿ ಇನ್ನೂ ಕೆಲವು ಅಡ್ಡ ಪರಿಣಾಮಗಳು ಕಂಡುಬರುತ್ತವೆ. ವಾಂತಿ, ಮೂರ್ಛೆ, ಬೆನ್ನು ನೋವು, ಗೊಂದಲ ಮತ್ತು ಜ್ಞಾಪಕ ಶಕ್ತಿ ನಷ್ಟದಂತಹ ಅಡ್ಡ ಪರಿಣಾಮಗಳನ್ನು ಉಂಟಾಗುತ್ತವೆ. ಒಬ್ಬ ಬಳಕೆದಾರ ದೃಷ್ಟಿದೋಷ ಸಮಸ್ಯೆ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ತಜ್ಞರ ಮೇಲ್ವಿಚಾರಣೆಯಲ್ಲಿ ವಯಾಗ್ರವನ್ನು ಬಳಸುವಂತೆ ವೈದ್ಯರು ಹೇಳುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.