Vinegar Onion: ಈರುಳ್ಳಿಯನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಆಹಾರದಲ್ಲಿ ಸೇರಿಸುವುದರಿಂದ ನಿಮಗೆ ಹಲವು ರೀತಿಯಲ್ಲಿ ಲಾಭವಾಗುತ್ತದೆ. ಮತ್ತೊಂದೆಡೆ, ಈರುಳ್ಳಿಯನ್ನು ವಿನೆಗರ್ ನಲ್ಲಿ ಅದ್ದಿ ತಿನ್ನುವುದರಿಂದಲೂ ನಿಮಗೆ ಹಲವು ಪ್ರಯೋಜನಗಳಿವೆ. ನೀವು ಹೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ವಿನೆಗರ್ ಅದ್ದಿ ನೀಡಲಾದ ಈರುಳ್ಳಿಯನ್ನು ಸೇವಿಸಿರಬಹುದು. ಆದರೆ ನೀವು ಅದನ್ನು ಮನೆಯಲ್ಲಿಯೂ ಪ್ರಯತ್ನಿಸಬಹುದು. ಇದರಿಂದ ರುಚಿ ಮಾತ್ರವಲ್ಲ ನಿಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ. 


COMMERCIAL BREAK
SCROLL TO CONTINUE READING

ಜೀರ್ಣಕ್ರಿಯೆಗೆ ಸಹಕಾರಿ (Helpful For Digestion): 
ವಿನೆಗರ್ ನಲ್ಲಿ ಈರುಳ್ಳಿ ಹಾಕುವುದರಿಂದ ಅದರ ಪೌಷ್ಟಿಕತೆ ಹೆಚ್ಚುತ್ತದೆ. ಈರುಳ್ಳಿಯನ್ನು ಬಿಳಿ ವಿನೆಗರ್ (Onion With White Vinegar) ಜೊತೆಗೆ ಬೆರೆಸುವ ಮೂಲಕ, ಇದು ವಿಟಮಿನ್ ಬಿ 9, ಫೋಲೇಟ್ ನಂತಹ ಅನೇಕ ವಿಧದ ವಿಟಮಿನ್ ಗಳು ಮತ್ತು ಖನಿಜಗಳಿಂದ ಸಮೃದ್ಧವಾಗುತ್ತದೆ. ವಿನೆಗರ್ ನೊಂದಿಗೆ ಈರುಳ್ಳಿ ಸೇವನೆಯು ನಿಮ್ಮ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದ್ದು, ಇದರಿಂದ ನಿಮ್ಮ ಹೊಟ್ಟೆಯಲ್ಲಿ ಆರೋಗ್ಯಕರ ಕಿಣ್ವಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- Soaking Almonds Benefits: ಹಸಿ, ಹುರಿದ ಅಥವಾ ನೆನೆಸಿದ ಬಾದಾಮಿ, ಇವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ?


ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ (Helpful in reducing cholesterol level):
ವಿನೆಗರ್ ನಲ್ಲಿ ಅದ್ದಿದ ಈರುಳ್ಳಿಯನ್ನು ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಂಗ್ ಕಾಂಗ್ ನ ಚೀನೀ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ ಈರುಳ್ಳಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ವಿನೆಗರ್ ನೊಂದಿಗೆ ಈರುಳ್ಳಿ ತಿನ್ನುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ (Good Colesterol) ಕೂಡ ಹೆಚ್ಚಾಗುತ್ತದೆ.


ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವಲ್ಲಿ ಪ್ರಯೋಜನಕಾರಿ (Balancing blood sugar level) :
ಈರುಳ್ಳಿಯಲ್ಲಿ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಇದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ವಿನೆಗರ್ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರದ ಅಧ್ಯಯನದ ಪ್ರಕಾರ, ಬಿಳಿ ವಿನೆಗರ್ ಸಕ್ಕರೆಯನ್ನು ನಿಯಂತ್ರಿಸಲು (Blood Sugar) ಕೆಲಸ ಮಾಡುತ್ತದೆ.


ಇದನ್ನೂ ಓದಿ- Green Vegetables Juice: ಆರೋಗ್ಯಕ್ಕೆ ವರದಾನವಾದ ಈ ಗ್ರೀನ್ ಜ್ಯೂಸ್ ಜೊತೆ ದಿನ ಆರಂಭಿಸಿ, ಪಡೆಯಿರಿ ಹಲವು ಲಾಭ


ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ (Cancer risk will be reduced) :
ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ (Cancer) ಅಪಾಯವನ್ನು ಕಡಿಮೆ ಮಾಡುತ್ತದೆ. ಇನ್ನೊಂದು ಅಧ್ಯಯನವು ಈರುಳ್ಳಿ ತಿನ್ನುವುದರಿಂದ ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. 


(ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಕೆಲವು ಅಧ್ಯಯನಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.