Peepal Tree Religious Importance - ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ಕೆಲ ಮರಗಳನ್ನು ದಿವ್ಯ ಮರಗಳೆಂದು ಬಣ್ಣಿಸಲಾಗಿದೆ. ಈ ಮರಗಳಲ್ಲಿ ಅಶ್ವಸ್ಥ ಮರ ಕೂಡ ಒಂದು . ಔಷಧಿ ವಿಜ್ಞಾನ ದೃಷ್ಟಿಕೋನದಿಂದ ಈ ಮರ ಎಷ್ಟು ಮಹತ್ವದ್ದಾಗಿದೆಯೋ ಅಷ್ಟೇ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪಡೆದಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ,' ವೃಕ್ಷಗಳಲ್ಲಿ ಸರ್ವೋತ್ತಮ ವೃಕ್ಷ ಅಶ್ವತ್ಥ ವೃಕ್ಷ ನಾನಾಗಿದ್ದೇನೆ' ಎಂದು ಹೇಳುತ್ತಾರೆ. ಋಗ್ವೇದದಲ್ಲಿ ಈ ವೃಕ್ಷವನ್ನು ದೇವ ವೃಕ್ಷ ಎಂದು ಕರೆಯಲಾಗಿದೆ. ಇದು ಸಂಸಾರಕ್ಕೆ ಎಲ್ಲವನ್ನು ನೀಡುತ್ತದೆ. ಹಗಲು ರಾತ್ರಿ ಪ್ರಾಣವಾಯು ನೀಡುವ  ಅಶ್ವತ್ಥ ಮರದ ಸಕಾರಾತ್ಮಕ ಊರ್ಜೆಯಿಂದ ಗೌತಮ ಬುದ್ಧ ಸೇರಿದಂತೆ ಋಷಿ ಮುನಿಗಳು ಕೂಡ ಈ ವೃಕ್ಷದ ಕೆಳಗೆ  ಜ್ಞಾನಾರ್ಜನೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-Vastu Tips:ಈ ಸಣ್ಣಪುಟ್ಟ ತಪ್ಪುಗಳು ದಾರಿದ್ರ್ಯಕ್ಕೆ ಕಾರಣ... ಎಚ್ಚರ!


ಈ ಮರದಲ್ಲಿ ಅಡಗಿರುವ ಔಷಧೀಯ ಗುಣಗಳಿಂದಾಗಿ ಇದಕ್ಕೆ ಕಲ್ಪವೃಕ್ಷ ಎಂದೂ ಕೂಡ ಕರೆಯಲಾಗುತ್ತದೆ. ಯಜುರ್ವೇದದಲ್ಲಿ ಈ ಮರವನ್ನು ಪ್ರತಿ ಯಜ್ಞದ ಆವಶ್ಯಕತೆ ಎಂದು ಹೇಳಲಾಗಿದ್ದರೆ. ಅಥರ್ವವೇದದಲ್ಲಿ ಈ ಮರವನ್ನು ದೇವರ ವಾಸಸ್ಥಾನ ಎಂದು ವರ್ಣಿಸಲಾಗಿದೆ. ಈ ವೃಕ್ಷದ ಮೂಲದಲ್ಲಿ ವಿಷ್ಣು, ಕಾಂಡದಲ್ಲಿ ಕೇಶವ, ಕೊಂಬೆಗಳಲ್ಲಿ ನಾರಾಯಣ, ಎಲೆಗಳಲ್ಲಿ ಹರಿ ಮತ್ತು ಇದರ ಹಣ್ಣುಗಳಲ್ಲಿ ಸಮಸ್ತ ದೇವ ದೇವತೆಗಳು ವಾಸವಾಗಿದ್ದಾರೆ ಎಂದು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಮರ (Bodhi Tree) ದೇವರ ವಿಶ್ವರೂಪದ ಆಧ್ಯಾತ್ಮಿಕ ದರ್ಶನ ಮಾಡಿಸುತ್ತದೆ. ಏಕೆಂದರೆ ಶಾಸ್ತ್ರಗಳಲ್ಲಿ ಬ್ರಹ್ಮಾಂಡದ ಬುಡಮೇಲು ರೂಪ ಈ ವೃಕ್ಷ ಎಂದು ಹೇಳಲಾಗಿದೆ. ಈ ಬುಡಮೇಲು ಸ್ವರೂಪಿ ಸೃಷ್ಟಿ ರೂಪದ ವೃಕ್ಷದ ಊರ್ಧ್ವ ಭಾಗದಲ್ಲಿ ದಿವ್ಯ ಜೋತಿರ್ಬಿಂದು ಸ್ವರೂಪಿ ದೇವಾದಿದೇವ ಶಿವನಿದ್ದಾನೆ. ದ್ವಾಪಾರ ಯುಗದಲ್ಲಿ ಪರಮಧಾಮಕ್ಕೆ ತೆರಳುವ ಮುನ್ನ ತಪಸ್ವಿ ರೂಪದಲ್ಲಿ ಶ್ರೀ ಕೃಷ್ಣ , ಈ ಅಶ್ವತ್ಥ ಮರದ ಕೆಳೆಗೆ ಕುಳಿತು ಶ್ರೀಹರಿಯ ಧ್ಯಾನ ನಡೆಸಿದ್ದಾರೆಂದು ಶ್ರೀಮದ್ಭಾಗವತ್ ದಲ್ಲಿ ಉಲ್ಲೇಖವಿದೆ.  ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಕಲ್ಪನೆಯ ಅಂತ್ಯದಲ್ಲಿರುವ ಪ್ರಳಯಕಾಲದಲ್ಲಿ ಈ ಸೃಷ್ಟಿ ಜಲಮಯವಾದಾಗ ಅಶ್ವತ್ಥ ಮರದ ಎಲೆಯ ಮೇಲೆ ಹೆಬ್ಬೆರಳು ಚೀಪುವ ನವಜಾತ ಕೃಷ್ಣನ ಅವಿರ್ಭಾವ ಮೂಡಿಬಂದಿತ್ತು. ಅಶ್ವಸ್ಥ ಮರದ ಎಳೆಗಳ ಆಕೃತಿ ಗರ್ಭಾಶಯಕ್ಕೆ ಹೋಲುತ್ತದೆ ಎಂಬುದೇ ಇದರ ಆಧ್ಯಾತ್ಮಿಕ ಅರ್ಥ. ಅದರ ಮೇಲೆ ಮಲಗಿ ಬಂದ ಬಾಲಕೃಷ್ಣ ಸದ್ಗುಣಿ ಸೃಷ್ಟಿಯ ಶುಭಾರಂಭದ ಸೂಚನೆ.


ಇದನ್ನು ಓದಿ-ASTROLOGY : ನಿಮಗಂಟಿದ ದಟ್ಟ ದಾರಿದ್ರ್ಯ ತೊಲಗಬೇಕಾ..? ನಿಷ್ಠೆಯಿಂದ ಹೀಗೆ ಮಾಡಿ.!


'ಮೂಲತಃ  ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರೂಪಿಣಃ, ಅಗ್ರತಃ ಶಿವ ರೂಪಾಯ, ಅಶ್ವತ್ಥಾಯ ನಮೋ ನಮಃ' ಎಂದು ಅಶ್ವಸ್ಥ ಮರದ ಶ್ರೇಷ್ಠತೆ ಕುರಿತು ಗ್ರಂಥಗಳಲ್ಲಿ ಹೇಳಲಾಗಿದೆ. ಅರ್ಥಾತ್ ಈ ವೃಕ್ಷದ ಮೂಲದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು ಹಾಗೂ ಆಗ್ರಭಾಗದಲ್ಲಿ ಶಿವನ ವಾಸವಿದೆ. ಶಾಸ್ತ್ರಗಳ ಪ್ರಕಾರ ಒಂದು ವೇಳೆ ಯಾವುದೇ ಓರ್ವ ವ್ಯಕ್ತಿ ಅಶ್ವತ್ಥ ಮರದ ಕೆಳಗೆ ಶಿವಲಿಂಗ ಸ್ಥಾಪಿಸಿ ಅದಕ್ಕೆ ಪೂಜೆ ಸಲ್ಲಿಸಿದರೆ ಆ ವ್ಯಕ್ತಿಗೆ ಇಷ್ಟಾರ್ಥಗಳು ಲಭಿಸುತ್ತವೆ.


ಇದನ್ನು ಓದಿ-Religious Belief: ಈ ದಿನ ಹಾಗೂ ಈ ತಾರೀಖಿಗೆ ಸಾಲ ಪಡೆಯುವುದು ಬೇಡ... ಯಾಕೆ?


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.