ಬೆಂಗಳೂರು: Vitamin D Rich Foods- ಪ್ರತಿಯೊಂದು ವಿಟಮಿನ್ ದೇಹಕ್ಕೆ ತನ್ನದೇ ಆದ ಪಾತ್ರವನ್ನು ಹೊಂದಿದೆ. ಇತರ ವಿಟಮಿನ್‌ಗಳು ದೇಹಕ್ಕೆ ಹೇಗೆ ಅಗತ್ಯವೋ, ಅದೇ ರೀತಿಯಲ್ಲಿ ವಿಟಮಿನ್ ಡಿ ಕೂಡ ದೇಹಕ್ಕೆ ಹಲವು ರೀತಿಯಲ್ಲಿ ಮುಖ್ಯವೆಂದು ಪರಿಗಣಿಸಲಾಗಿದೆ. ಆರೋಗ್ಯ ತಜ್ಞರ ಪ್ರಕಾರ, ವಿಟಮಿನ್ ಡಿ ಕೊರತೆಯು ಮೂಳೆಗಳು ದುರ್ಬಲಗೊಳ್ಳುವುದು, ಕೀಲು ನೋವು, ಬೆನ್ನು ನೋವು ಮತ್ತು ಸ್ನಾಯು ನೋವುಗಳಿಗೆ ಕಾರಣವಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ಸಂಧಿವಾತ, ರಿಕೆಟ್ಸ್ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವಿರಬಹುದು. ಆದ್ದರಿಂದ, ದೇಹದಲ್ಲಿ ವಿಟಮಿನ್ ಡಿ ಕೊರತೆ ಆಗದಂತೆ ನಿಗಾವಹಿಸಿ.


COMMERCIAL BREAK
SCROLL TO CONTINUE READING

ವಿಟಮಿನ್ ಡಿ ಕೊರತೆಗೆ ಕಾರಣವೇನು?
ಆಹಾರ ತಜ್ಞರಾದ ಡಾ. ರಂಜನಾ ಸಿಂಗ್ ಅವರ ಪ್ರಕಾರ, ನೇರ ಆಹಾರ ಮತ್ತು ತಪ್ಪು ಜೀವನಶೈಲಿಯಿಂದ ವಿಟಮಿನ್ ಡಿ ಕೊರತೆ (Vitamin D Deficiency) ಉಂಟಾಗುವ ಸಾಧ್ಯತೆ ಇದೆ.  ವಿಟಮಿನ್ ಡಿ ಅನ್ನು ಸನ್ಶೈನ್ ವಿಟಮಿನ್ (Sunshine Vitamin) ಎಂದೂ ಕರೆಯುತ್ತಾರೆ, ಆದರೆ ಸೂರ್ಯನು ವಿಟಮಿನ್ ಡಿ ಯ ಏಕೈಕ ಮೂಲವಲ್ಲ. ವಿಟಮಿನ್ ಡಿ ಯ ಅತ್ಯುತ್ತಮ ಮೂಲಗಳೆಂದು ಪರಿಗಣಿಸಲ್ಪಡುವ ಕೆಲವು ಆಹಾರ ಪದಾರ್ಥಗಳೂ ಇವೆ. ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳು (Vitamin D Rich Foods) ಮಧುಮೇಹದ ಅಪಾಯದಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತವೆ.


ಇದನ್ನೂ ಓದಿ- Green Vegetables Juice: ಆರೋಗ್ಯಕ್ಕೆ ವರದಾನವಾದ ಈ ಗ್ರೀನ್ ಜ್ಯೂಸ್ ಜೊತೆ ದಿನ ಆರಂಭಿಸಿ, ಪಡೆಯಿರಿ ಹಲವು ಲಾಭ


ವಿಟಮಿನ್ ಡಿ ಕೊರತೆಯ ಲಕ್ಷಣಗಳು (Vitamin D Deficiency Symptoms) :
* ದೇಹ ಯಾವಾಗಲೂ ದಣಿದಂತೆ ಭಾಸವಾಗುವುದು
* ತೀವ್ರ ತರವಾದ ಮೂಳೆ ಮತ್ತು ಬೆನ್ನು ನೋವು
* ಗಾಯ ಬೇಗನ ವಾಸಿಯಾಗದಿರುವುದು
* ಒತ್ತಡ 
* ಅತಿಯಾಗಿ ಕೂದಲು ಉದುರುವುದು


ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳು (Vitamin D Rich Foods):
ಮೊಟ್ಟೆ ಬಳಕೆ:

ಮೊಟ್ಟೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅವು ಪ್ರೋಟೀನ್, ವಿಟಮಿನ್ ಡಿ (Vitamin D), ಕ್ಯಾಲ್ಸಿಯಂ ಮತ್ತು ಹಲವು ಬಗೆಯ ಖನಿಜಗಳನ್ನು ಹೊಂದಿರುತ್ತವೆ. ವಿಟಮಿನ್ ಡಿ ಕೊರತೆಯನ್ನು ನೀಗಿಸಲು, ನೀವು ನಿಮ್ಮ ಬೆಳಗಿನ ಉಪಹಾರದಲ್ಲಿ ಮೊಟ್ಟೆಯನ್ನು ಸೇರಿಸಬಹುದು ಮತ್ತು ಅವುಗಳನ್ನು ನಿಮ್ಮ ಆಹಾರದ ಭಾಗವನ್ನಾಗಿ ಮಾಡಬಹುದು.


ಹಾಲಿನ ಬಳಕೆ:
ಸಾಮಾನ್ಯವಾಗಿ ಬಾಲ್ಯದಿಂದಲೂ ಹಾಲು ಕುಡಿಯಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಹಾಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- Benefits Of Sweet Potato: ಸಿಹಿಗೆಣಸಿನ ಸೇವನೆ ಆರೋಗ್ಯಕ್ಕೆ ಎಷ್ಟು ಆರೋಗ್ಯಕರ? ಅದಕ್ಕೆ ಸಂಬಂಧಿಸಿದ ಪ್ರಮುಖ ವಿಷಯವನ್ನು ತಿಳಿಯಿರಿ


ಪಾಲಕ್ ಬಳಕೆ:
ಪಾಲಕ್ ಸೊಪ್ಪಿನಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಡಿ (Vitamin D Rich Food) ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ, ದೇಹದಲ್ಲಿ ವಿಟಮಿನ್ ಡಿ ಜೊತೆಗೆ ಇತರ ಅನೇಕ ಪೋಷಕಾಂಶಗಳ ಕೊರತೆಯೂ ಸಹ ಪೂರೈಸಲ್ಪಡುತ್ತದೆ. ನೀವು ಇದನ್ನು ನಿಯಮಿತವಾಗಿ ಸೇವಿಸಬೇಕು.


ಪನೀರ್ ಬಳಕೆ:
ಚೀಸ್ ಪನೀರ್ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ. ಇದರ ಸೇವನೆಯು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಇದರ ನಿಯಮಿತ ಸೇವನೆಯಿಂದ, ನೀವು ಅನೇಕ ರೋಗಗಳನ್ನು ತಪ್ಪಿಸಬಹುದು.


ಸೋಯಾಬೀನ್ ಸೇವನೆ:
ಸೋಯಾಬೀನ್ ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ, ಒಮೆಗಾ -3 ಕೊಬ್ಬಿನಾಮ್ಲಗಳು, ಕಬ್ಬಿಣ, ವಿಟಮಿನ್ ಬಿ, ಸತು, ಫೋಲೇಟ್, ಸೆಲೆನಿಯಂ ಇತ್ಯಾದಿ ಅನೇಕ ಪೋಷಕಾಂಶಗಳಿವೆ. ಸೋಯಾಬೀನ್ ಸೇವನೆಯು  ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.