ಬೆಂಗಳೂರು  : ದೇಹದಲ್ಲಿ ವಿಟಮಿನ್ ಡಿ ಕೊರತೆ ಎದುರಾದರೆ,  ಬಿಸಿಲಿನಲ್ಲಿ ನಿಂತು ಅಗತ್ಯವಾದ  ವಿಟಮಿನ್ ಡಿ  ಪಡೆಯುವಂತೆ ಸೂಚಿಸಲಾಗುತ್ತದೆ.  ಆದರೆ ಕೆಲವು ಆಹಾರಗಳನ್ನು ತಿನ್ನುವ ಮೂಲಕವೂ ಈ ಪೋಷಕಾಂಶವನ್ನು ಪಡೆಯಬಹುದು. ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯು ನಮ್ಮ ಆರೋಗ್ಯಕ್ಕೆ ಅನೇಕ ಹಾನಿಯನ್ನು ಉಂಟು ಮಾಡುತ್ತದೆ. 


COMMERCIAL BREAK
SCROLL TO CONTINUE READING

ವಿಟಮಿನ್ ಡಿ ಕೊರತೆಯ ಅಪಾಯಗಳು :
1. ಅಧಿಕ ರಕ್ತದೊತ್ತಡ : 
ವಿಟಮಿನ್ ಡಿ ನಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.  ಅಧಿಕ ರಕ್ತದೊತ್ತಡದಿಂದ ಹೃದಯಾಘಾತವು ಉಂಟಾಗುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ವಿಟಮಿನ್ ಡಿ ಅಗತ್ಯ. 


2. ದೌರ್ಬಲ್ಯ : 
ದೇಹಕ್ಕೆ ಅಗತ್ಯ ವಿಟಮಿನ್ ಡಿ ಸಿಗದೇ ಹೋದರೆ ಸ್ನಾಯುಗಳು ದುರ್ಬಲವಾಗುತ್ತವೆ. ಹೀಗಾದಾಗ ಭಾರವಾದ ವಸ್ತುಗಳನ್ನು ಎತ್ತುವ ಕೆಲಸಗಳನ್ನು ಮಾಡುವುದು ಕಷ್ಟವಾಗುತ್ತದೆ.


ಇದನ್ನೂ ಓದಿ : ಪುರುಷರೇ, ನಿಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡಿ


3. ಹಗಲಿನಲ್ಲಿ ಆಯಾಸ ಮತ್ತು ನಿದ್ರೆ :
ಕೆಲವರಿಗೆ ಹಗಲಿನಲ್ಲಿಯೂ ನಿದ್ದೆಗೆ ಜಾರುತ್ತಾರೆ. ಏನೂ ಕೆಲಸ ಮಾಡದೇ ಹೋದರೂ ಸುಸ್ತಾಗುತ್ತಿರುತ್ತದೆ.  ಇದು  ವಿಟಮಿನ್ ಡಿ ಕೊರತೆಯಿಂದ ಉಂಟಾಗುತ್ತದೆ.


4 .  ಸಣ್ಣ ಸಣ್ಣ ವಿಷಯಗಳಿಗೂ ಕಿರಿ ಕಿರಿ :
ತಮ್ಮ ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಇರದೇ ಹೋದರೆ ಸಣ್ಣ ಸಣ್ಣ ವಿಷಯಗಳಿಗೂ ಇರಿಸು ಮುರಿಸಾಗುವುದು, ತಾಳ್ಮೆ ಕಳೆದುಕೊಳ್ಳುವುದು ಇಂಥಹ ಸಮಸ್ಯೆಯನ್ನು ಎದುರಿಸುತ್ತಾರೆ.  


5. ಮೂಡ್ ಸರಿಯಿಲ್ಲದೇ ಇರುವುದು : 
ಯವಾಗಾಲೂ ಮನಸ್ಥಿತಿ ಸಾಮಾನ್ಯವಾಗಿರದಿದ್ದರೆ, ವಿಟಮಿನ್ ಡಿ ಕೊರತೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಪೋಷಕಾಂಶಗಳನ್ನು ಒಳಗೊಂಡಿರುವ ಕೆಲವು ಆಹಾರಗಳನ್ನು ತಿನ್ನುವುದು ಮುಖ್ಯ.


ಇದನ್ನೂ ಓದಿ :  Toothache Problem: ಹಲ್ಲು ನೋವಿನಿಂದ ಕ್ಷಣಾರ್ಧದಲ್ಲಿ ಪರಿಹಾರ ಪಡೆಯಲು ಮನೆಮದ್ದು


 ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ : 


-ಮೀನು
-ಮೀನಿನ ಮೊಟ್ಟೆಗಳು
-ಅಣಬೆಗಳು
-ಹಾಲು
-ಧಾನ್ಯಗಳು -
-ಕೋಳಿ ಮೊಟ್ಟೆಗಳು
-ಚೀಸ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.