Weight Loss Tips: ವಾಕಿಂಗ್ ಪ್ರಪಂಚದಾದ್ಯಂತ ಜನರು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ.. ಆದರೆ, ಯೋಗ ಕಲೆ ಹಾಗಲ್ಲ. ಭಾರತದಲ್ಲಿ ಹುಟ್ಟಿಕೊಂಡ ಈ ಕಲೆಗೆ ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆ ಮಾನ್ಯತೆ ನೀಡಿದೆ. ಅದೇ ಮನ್ನಣೆಯೊಂದಿಗೆ, ಇಂದು ಪ್ರಪಂಚದಾದ್ಯಂತ ಹರಡುತ್ತಿದೆ. 


COMMERCIAL BREAK
SCROLL TO CONTINUE READING

ವಾಕಿಂಗ್ ಎಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು. ಆದರೆ ಯೋಗ ಸ್ಥಳದಲ್ಲೇ ಮಾಡಲಾಗುತ್ತದೆ. ನಮ್ಮ ದೇಹದ ತೂಕವನ್ನು ಕಳೆದುಕೊಳ್ಳಲು ನಾವು ವಿವಿಧ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಈ ವೆಟ್‌ ಲಾಸ್‌ ಮಾಡಿಕೊಳ್ಳಲು ವಾಕಿಂಗ್ ಅಥವಾ ಯೋಗ ಮಾಡುವವರೂ ಇದ್ದಾರೆ. ಈ ಎರಡರಲ್ಲಿ ಯಾವುದು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದನ್ನು ಈಗ ನೋಡೋಣ.


ಇದನ್ನೂ ಓದಿ-ಬೆಳಗಿನ ಉಪಾಹಾರದಲ್ಲಿ ಪಪ್ಪಾಯಿಯನ್ನು ತಿನ್ನಿ, ಈ 5 ಅದ್ಭುತ ಪ್ರಯೋಜನ ಪಡೆಯಿರಿ


ನಡಿಗೆಯ ಪ್ರಯೋಜನಗಳು: ನಾವು ದಿನನಿತ್ಯ ಒಂದಷ್ಟು ದೂರ ನಡೆದರೆ ಸಾಕು.. ಇದು ನಮ್ಮ ಹೃದಯ ಬಡಿತವನ್ನು ಹೆಚ್ಚಿಸಿ, ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡುತ್ತದೆ. ಇದರಿಂದ ತೂಕ ಕಳೆದುಕೊಳ್ಳಬಹುದಾಗಿದೆ..  ಎಲ್ಲಾ ವಯಸ್ಸಿನ ಜನರು ಇದನ್ನು ಸುಲಭವಾಗಿ ಮಾಡಬಹುದು. 


ಯೋಗಾಸನಗಳ ಪ್ರಯೋಜನಗಳು: ಈ ಅಭ್ಯಾಸವು ನಮ್ಮ ದೇಹದ ಉಸಿರಾಟವನ್ನು ಸುಧಾರಿಸುವುದಲ್ಲದೇ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.. ಅಲ್ಲದೇ ಇದು ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ-ಕೂದಲು ಉದುರುವುದನ್ನು ತಕ್ಷಣವೇ ನಿಲ್ಲಿಸಲು ಈ ಬೀಜವೊಂದೇ ಪರಿಹಾರ


ಈ ಎರಡನ್ನು ಹೋಲಿಕೆ ಮಾಡಿದಾಗ ವಾಕಿಂಗ್ ಯೋಗಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. ಅಲ್ಲದೇ ಯೋಗ ವ್ಯಾಯಾಮಗಳನ್ನು ಮಾಡುವಾಗ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ನಾವು ದೇಹವನ್ನು ಸುಲಭವಾಗಿ ದಂಡಿಸಬಹುದಾಗಿದೆ.. 


ಯೋಗ ಮತ್ತು ವಾಕಿಂಗ್ ಎರಡೂ ತೂಕ ಇಳಿಕೆಗೆ ಸಹಾಯಕವಾಗಿವೆ. ವಾಕಿಂಗ್ ನೇರ ಪ್ರಯೋಜನಗಳನ್ನು ನೀಡಿದರೇ ಯೋಗದ ಮೂಲಕ ನಾವು ಸತತ ಪ್ರಯೋಜನಗಳನ್ನು ಪಡೆಯಬಹುದು. ಯಾವುದು ಉತ್ತಮ ಎಂಬುದು ವೈಯಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ