Lip Care Tips: ಸಾಮಾನ್ಯವಾಗಿ ತುಟಿಯನ್ನ ತೊಂಡೆ ಹಣ್ಣಿಗೆ ಹೋಲಿಕೆ ಮಾಡ್ತಾರೆ.  ತೊಂಡೆಹಣ್ಣಿನಂತಹ ತುಟಿ ಇರಬೇಕು ನಿಜ, ಆದರೆ ಅದರ ಬಣ್ಣ ಮಾತ್ರ ಗುಲಾಬಿ ಹೂವಿನಂತಿರಬೇಕು ಅನ್ನೋದು ಎಲ್ಲಾ ಮಹಿಳೆಯರ ಆಸೆ. ಹಾಗಾದರೆ ಕೇವಲ ಒಂದೇ ವಾರದಲ್ಲಿ ಈ ಗುಲಾಬಿ ಬಣ್ಣದ ತುಟಿಗಳನ್ನ ನಿಮ್ಮದಾಗಿಸಿಕೊಳ್ಳೋಕೆ ಇಲ್ಲಿದೆ ಸೂಪರ್‌ ಟಿಪ್ಸ್..


COMMERCIAL BREAK
SCROLL TO CONTINUE READING

ತುಟಿಗಳ ಬಣ್ಣ ಕಳೆಗುಂದಲು ಕಾರಣ : 
ಲಿಪ್‌ ಬಾಮ್‌ ಹಾಗೆ ವ್ಯಾಸಲಿನ್‌ ಅನ್ನು ನಿತ್ಯ ಬಳಸಿದರೂ ಯಾಕೆ ನಮ್ಮ ತುಟಿಗಳು ಕಳೆಗುಂದತ್ತೆ ಅನ್ನೋ ಪ್ರಶ್ನೆ ಬಹುತೇಕ ಜನರಲ್ಲಿದೆ. ಇದಕ್ಕೆ  ಸೂರ್ಯನ ಕಿರಣಗಳಿಗೆ ತರೆದುಕೊಳ್ಳುವುದು, ಧೂಮಪಾನ,  ಹಾರ್ಮೋನಿನ ಬದಲಾವಣೆಗಳು, ಕಬ್ಬಿಣದ ಕೊರತೆ  ಸೇರಿದಂತೆ ಹಲವು ಕಾರಣಗಳಿರಬಹುದು.  ಆದರೆ, ನಿಮ್ಮ ದೈನಂದಿನ ಜೀವನದಲ್ಲಿ ಕೆಲವು ಸರಳ ಸಲಹೆಗಳನ್ನು ಅನುಸರಿಸುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೋಮಲವಾದ ತುಟಿಗಳನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಬಹುದು. 


ಇದನ್ನೂ ಓದಿ- ಚಳಿಗಾಲದಲ್ಲಿ ಗ್ಲಿಸರಿನ್ ಅನ್ನು ಈ 3 ವಿಧಾನಗಳಲ್ಲಿ ಬಳಸುವುದರಿಂದ ಆಗುವ ಲಾಭವೇನು ಗೊತ್ತೇ?.


ಕೆಂದುಟಿಗಾಗಿ‌ ಇಲ್ಲಿದೆ ಹೊಮ್‌ಮೇಡ್‌ ಟಿಪ್ಸ್...
ಸಾಕಷ್ಟು ನೀರು ಕುಡಿಯುವುದು :
 
ನಮ್ಮ ದೇಹದಂತೆ ಚರ್ಮವೂ ಕೂಡ ನಿರ್ಜಲೀಕರಣವಾಗುವುದು. ಇವುಗಳನ್ನ ತಡೆಯಲು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯುದು ಬಹಳ ಅವಶ್ಯಕ. ಇದು  ತುಟಿ ಹಾಗೂ ಚರ್ಮದ ಕಾಂತಿಯನ್ನ ಹೆಚ್ಚಿಸುತ್ತದೆ.‌


ಬೀಟ್‌ ರೂಟ್‌ ಸ್ಕ್ರಬ್‌: 
ಬೀಟ್ ರೂಟ್ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ  ತುಟಿಗಳನ್ನು ಕೆಂಪಾಗಿ ಮತ್ತು ಆಕರ್ಷಕವಾಗಿ ಕಾಣುವಂತೆಯೂ ಮಾಡುತ್ತದೆ. ಬೀಟ್ ರೂಟ್ ತುಂಡುಗಳಿಂದ ವಾರಕ್ಕೆ 3-4 ಬಾರಿ ಐದು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಜೊತೆ-ಜೊತೆಗೆ ಬೀಟ್‌ ರೂಟ್‌ ರಸದ ಸೇವನೆ ಹೆಚ್ಚಿನ ಧನಾತ್ಮಕ ಫಲಿತಾಂಶಗಳನ್ನು ಸಿಗುತ್ತದೆ.‌


ಆರೋಗ್ಯಕರ ಆಹಾರ : 
ತುಟಿಗಳ ಆರೈಕೆಗೆ ಲಿಪ್‌ ಬಾಮ್‌ಗಳು ಹಾಗೆಯೇ ಸ್ಕ್ರಬ್‌ಗಳು ಎಷ್ಟು ಮುಖ್ಯವೋ ಹಾಗೆ ಪೌಷ್ಟಿಕಾಂಶದಿಂದ ಕೂಡಿದ ಆಹಾರ ಸೇವನೆಯೂ ಕೂಡ ತುಟಿಯ ರಂಗನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- ಕೇವಲ ಅಡುಗೆ ರುಚಿ ಹೆಚ್ಚಿಸಲು ಮಾತ್ರವಲ್ಲ, ನಿಮ್ಮ ಚರ್ಮ, ಕೂದಲ ಆರೋಗ್ಯಕ್ಕೂ ರಾಮಬಾಣ ಈರುಳ್ಳಿ


ನೈಸರ್ಗಿಕ ಮಾಯಿಶ್ಚರೈಸರ್:
ನಿತ್ಯ ರಾತ್ರಿ  ಮಲಗುವ ಮೊದಲು ಅಲೋವೆರಾ ಜೆಲ್ ಅಥವಾ ತೆಂಗಿನ ಎಣ್ಣೆಯಂತಹ ನೈಸರ್ಗಿಕ ಮಾಯಿಶ್ಚರೈಸರ್ ಅನ್ನು ತುಟಿಗಳಿಗೆ ಬಳಸಿ. ಇದರಿಂದ ತುಟಿ ಒಡೆಯುವುದನ್ನು ತಪ್ಪಿಸಬಹುದು. ಜೊತೆಗೆ ತುಟಿ ನೈಸರ್ಗಿಕವಾಗಿ ಗುಲಾಬಿ ಬಣ್ಣಕ್ಕೆ ತಿರುಗಲು ಸಹಾಯಕವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.