ನಿಮ್ಮ ಲವ್ ಲೈಫ್ ಕುರಿತು ತಿಳಿದುಕೊಳ್ಳಬೇಕೆ? ಅಂಗೈಯಲ್ಲಿ ಈ ರೇಖೆ ಇದೆಯಾ ನೋಡಿ!
Palmistry: ಜೋತಿಷ್ಯ ಶಾಸ್ತ್ರದಂತೆ ಅಂಗಯಲ್ಲಿರುವ ರೇಖೆಗಳು ಕೂಡ ವ್ಯಕ್ತಿಗಳ ಜೀವನದ ಕುರಿತು ಹಲವಾರು ರಹಸ್ಯಗಳನ್ನು ಹೇಳುತ್ತವೆ. ಇದರಲ್ಲಿ ಭವಿಷ್ಯದಿಂದ ಹಿಡಿದು ಸ್ವಭಾವದವರೆಗೆ ಎಲ್ಲಾ ಸಂಗತಿಗಳನ್ನು ನೀವು ತಿಳಿದುಕೊಳ್ಳಬಹುದು. ಇಂದು ನಾವು ವ್ಯಕ್ತಿಯ ಲವ್ ಲೈಫ್ ಕುರಿತು ತಿಳಿದುಕೊಳ್ಳೋಣ ಬನ್ನಿ
ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಿಜವಾದ ಪ್ರೀತಿ ಸಿಗಬೇಕು ಎಂದು ಹಂಬಲಿಸುತ್ತಾನೆ. ಈ ಪ್ರೀತಿಯು ತಂದೆ-ತಾಯಿಯಿಂದ ಸಿಗಲಿ ಅಥವಾ ಸಂಗಾತಿಯಿಂದ ಸಿಗಲಿ. ಇದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಕೆಲವು ಚಿಹ್ನೆಗಳು ಮತ್ತು ರೆಖೆಗಳಿರುತ್ತವೆ, ಈ ರೇಖೆ ಮತ್ತು ಚಿಹ್ನೆಗಳು ವ್ಯಕ್ತಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳುತ್ತವೆ ವೈವಾಹಿಕ ಜೀವನದ ಯಶಸ್ಸನ್ನು ಸೂಚಿಸುವ ಅಂಗೈಯಲ್ಲಿನ ಈ ರೇಖೆಗಳ ಬಗ್ಗೆ ಇಂದು ನಾವು ಅರಿತುಕೊಳ್ಳೋಣ.
ಈ ರೇಖೆಗಳು ಪ್ರೀತಿಯ ಜೀವನದ ಬಗ್ಗೆ ಹೇಳುತ್ತವೆ
>> ಗುರು ಪರ್ವತದ ಮೇಲಿರುವ ಕ್ರಾಸ್ ಚಿಹ್ನೆಯು ಪ್ರೇಮ ವಿವಾಹವನ್ನು ಬಿಂಬಿಸುತ್ತದೆ. ಅಂದರೆ, ಒಬ್ಬ ವ್ಯಕ್ತಿಯ ಕೈಯಲ್ಲಿ ಗುರು ಪರ್ವದ ಮೇಲೆ ಕ್ರಾಸ್ ಗುರುತು ಇದ್ದರೆ, ಅದು ಅವನ ಪ್ರೇಮ ವಿವಾಹವನ್ನು ಸಂಕೇತಿಸುತ್ತದೆ. ಇಂತಹ ಚಿಹ್ನೆ ಹೊಂದಿದ ಜನರ ವೈವಾಹಿಕ ಜೀವನವು ಯಶಸ್ವಿಯಾಗುತ್ತದೆ ಮತ್ತು ಈ ಸಂಬಂಧವು ಜೀವನದುದ್ದಕ್ಕೂ ಮುಂದುವರೆಯುತ್ತದೆ.
>> ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಕೈಯಲ್ಲಿ ಗುರುಪರ್ವದತ ಮೇಲೆ ಸ್ವಸ್ತಿಕ್ ಚಿಹ್ನೆ ಇದ್ದರೆ, ಆ ವ್ಯಕ್ತಿಯು ಪ್ರೇಮ ವಿವಾಹದ ಬಗ್ಗೆ ಪ್ರಾಮಾಣಿಕವಾಗಿರುತ್ತಾನೆ. ತೋರ್ಪಡಿಕೆಗಾಗಿ ಇವರು ಪ್ರೀತಿಯನ್ನು ಮಾಡುವುದಿಲ್ಲ.ಬದಲಿಗೆ ಸಂಗಾತಿಯ ಮೇಲೆ ನಿಜವಾದ ಪ್ರೀತಿಯನ್ನು ಹೊಂದಿರುತ್ತಾರೆ..
>> ಮೇಲಕ್ಕೆದ್ದಿರುವ ಗುರು ಪರ್ವತ ಮತ್ತು ಹೃದಯ ರೇಖೆ ಗುರು ಪರ್ವತವನ್ನು ತಲುಪಿದ್ದರೆ, ಅಂತಹ ಜನರು ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾರೆ. ಇದರೊಂದಿಗೆ ದಾಂಪತ್ಯದಲ್ಲಿ ಯಶಸ್ಸನ್ನೂ ಪಡೆಯುತ್ತಾರೆ. ಇಷ್ಟೇ ಅಲ್ಲ, ಅರೇಂಜ್ಡ್ ಮ್ಯಾರೇಜ್‌ಗಳಲ್ಲಿಯೂ ಈ ಜನರು ಸಂಬಂಧವನ್ನು ಮನಃಪೂರ್ವಕವಾಗಿ ನಿಭಾಯಿಸುತ್ತಾರೆ..
>> ವ್ಯಕ್ತಿಯ ಕೈಯಲ್ಲಿ ವಿವಾಹ ರೇಖೆಯ ಅಡಿಯಲ್ಲಿ ಹಲವು ರೇಖೆಗಳು ಶಾಖೆಗಳಾಗಿ ವಿಭಜಿಸುತ್ತಿದ್ದರೆ, ಅಂತಹ ಜನರು ಸಹ ಪ್ರೇಮ ವಿವಾಹದ ಭಾಗ್ಯ ಹೊಂದಿರುತ್ತಾರೆ.
ಇದನ್ನೂ ಓದಿ-ಕೆಟ್ಟ ಕಾಲವೂ ಕೂಡ ಒಳ್ಳೆಯ ದಿನಗಳಲ್ಲಿ ಬದಲಾಗುತ್ತದೆ ಆಚಾರ್ಯ ಚಾಣಕ್ಯರ ಈ ನೀತಿಗಳು!
>> ಹೃದಯ ರೇಖೆಯಿಂದ ಹೋರಟ ಒಂದು ರೇಖೆಯು ಸೂರ್ಯ ರೇಖೆಯನ್ನು ತಲುಪಿದ್ದರೆ, ಅಂತಹ ವ್ಯಕ್ತಿಯೂ ಕೂಡ ವ್ಯಕ್ತಿಯ ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ. ಅಂತಹ ಜನರು ಅನೇಕ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ವಿವಾಹಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ-ತನ್ನ ಉಚ್ಛ ಭಾವದಲ್ಲಿ ಜಾಗ್ರತನಾದ ಶನಿ, ಧನಕುಬೇರನ ಕೃಪೆಯಿಂದ 4 ರಾಶಿಗಳ ಜನರ ಜೀವನದಲ್ಲಿ ಝಣಝಣಿಸಲಿದೆ ಕಾಂಚಾಣದ ಸದ್ದು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.