Wedding Tips: ಸಾಮಾನ್ಯವಾಗಿ ನಮ್ಮ ಭಾರತದಂತಹ ದೇಶದಲ್ಲಿ ಮರುವೆಯನ್ನು ಒಂದು ಪವಿತ್ರ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಅದು ಚಿರಕಾಲ ಉಳಿಯಬೇಕಾದ ಸಂಬಂಧ, ತರಾತುರಿಯಲ್ಲಿ ಮದುವೆಯಾಗುವುದು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಯೆಸ್ ಎಂದು ಹೇಳುವುದು ಸರಿಯಲ್ಲ. ಮತ್ತೊಂದೆಡೆ, ಮದುವೆ, ಅದು ಪ್ರೇಮ ವಿವಾಹವಾಗಿರಲಿ ಅಥವಾ ಅರೆಂಜ್ ಮ್ಯಾರೇಜ್ ಆಗಿರಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು ಮತ್ತು ಮುಂಚಿತವಾಗಿ ಎಲ್ಲವನ್ನೂ ಚರ್ಚಿಸಬೇಕು. ಮದುವೆಗೆ ಮುನ್ನ ನೀವು ನಿಮ್ಮ ಭಾವಿ ಸಂಗಾತಿಯ ಜೊತೆಗೆ ಯಾವ ವಿಷಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)


COMMERCIAL BREAK
SCROLL TO CONTINUE READING

ಮದುವೆಯಾಗುವ ಮೊದಲು ನಿಮ್ಮ  ಭಾವಿ ಸಂಗಾತಿಗೆ ನೀವು ಕೇಳಲೇಬೇಕಾದ 5 ವಿಷಯಗಳು ಇಲ್ಲಿವೆ
ಸಂಪ್ರದಾಯದ ಬಗ್ಗೆ ಚರ್ಚಿಸಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಆದರೆ ಮದುವೆಗೆ ಮೊದಲು ಇಬ್ಬರೂ ಪರಸ್ಪರರ ಮನೆಯ ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಚರ್ಚಿಸಬೇಕು. ಏಕೆಂದರೆ, ಇಬ್ಬರೂ ಪರಸ್ಪರರ ಕುಟುಂಬದ ನಂಬಿಕೆಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ.

ವೃತ್ತಿ ಮತ್ತು ಹಣದ ಬಗ್ಗೆ ಚರ್ಚಿಸಿ
ನೀವು ಮದುವೆಯಾಗಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಹಣಕಾಸಿನ ವಿಷಯಗಳ ಬಗ್ಗೆ ಮಾತನಾಡಿ. ಇದಲ್ಲದೆ, ವೃತ್ತಿಜೀವನದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ.

ಕುಟುಂಬ ಯೋಜನೆ ಕುರಿತು ಚರ್ಚಿಸಿ
ವಿವಾಹದ ಮೊದಲು ನಿಮ್ಮ ಸಂಗಾತಿಯೊಂದಿಗೆ ಕುಟುಂಬ ಯೋಜನೆಯ ಕುರಿತು  ಚರ್ಚಿಸುವುದು ತುಂಬಾ ಮುಖ್ಯ ಮತ್ತು ಇದು ನಾಚಿಕೆಪಟ್ಟುಕೊಳ್ಳುವ ವಿಷಯ ಅಲ್ಲ. ಎಷ್ಟು ಮಕ್ಕಳು ಬೇಕು, ಅವರನ್ನು ಹೇಗೆ ಬೆಳೆಸಬೇಕು, ಮಕ್ಕಳ ನಡುವೆ ಎಷ್ಟು ಅಂತರವಿರಬೇಕು ಇತ್ಯಾದಿಗಳನ್ನು ಚರ್ಚಿಸುವುದು ಯಾವುದಕ್ಕೂ ಉತ್ತಮ.


ಇದನ್ನೂ ಓದಿ-Benefits Of Yog Mudra: ಧಾವಂತದ ಬದುಕಿನಲ್ಲಿ ನಿಮ್ಮನ್ನು ನೀವು ಫಿಟ್ ಆಗಿಡಲು, ನಿತ್ಯ ಈ 5 ಹಸ್ತ ಮುದ್ರೆಗಳ ಅಭ್ಯಾಸ ಮಾಡಿ!

ಸ್ವಭಾವ-ಪ್ರಕೃತಿಯ ಬಗ್ಗೆ ಚರ್ಚಿಸಿ
ಮದುವೆಗೆ ಮೊದಲು ಪರಸ್ಪರರ ಪ್ರಕೃತಿ ಮತ್ತು ಸ್ವಭಾವದ ಬಗ್ಗೆ ಚರ್ಚೆ ನಡೆಯಬೇಕು. ಏಕೆಂದರೆ ಮದುವೆಯ ನಂತರ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಸಂಗಾತಿಯ ಅಭ್ಯಾಸಗಳನ್ನು ನೀವು ತಿಳಿದಿದ್ದರೆ, ನಂತರ ಸಂಬಂಧವು ಉತ್ತಮವಾಗಿರುತ್ತದೆ.


ಇದನ್ನೂ ಓದಿ-Weight Loss Foods: ಸೊಂಟದ ಸುತ್ತಲಿನ ಕೊಬ್ಬು ಕರಗಲು, ಈ 4 ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ!

ಕೆಲಸ ಮತ್ತು ಸಮಯದ ಬಗ್ಗೆ ಚರ್ಚಿಸಿ
ಮದುವೆಯ ನಂತರ ಉದ್ಯೋಗ ಮತ್ತು ಸಮಯದ ಸಮಸ್ಯೆ ಬಂದಾಗಲೆಲ್ಲಾ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು, ನಿಮ್ಮ ಭಾವಿ ಸಂಗಾತಿಯ ಕೆಲಸ, ಶಿಫ್ಟ್ ಮತ್ತು ಸಮಯದ ಬಗ್ಗೆ ಮುಂಚಿತವಾಗಿ ಚರ್ಚಿಸಿಕೊಳ್ಳುವುದು ಯಾವುದಕ್ಕೂ ಉತ್ತಮ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.