ಜೀವನದಲ್ಲಿ ಯಶಸ್ಸು ಪಡೆಯಲು ಬುಧವಾರದ ಉಪಾಯ: ಹಿಂದೂ ಧರ್ಮ ಮತ್ತು ಧರ್ಮಗ್ರಂಥಗಳ ಪ್ರಕಾರ, ವಾರದ 7 ದಿನಗಳನ್ನು ವಿವಿಧ ದೇವರುಗಳಿಗೆ ಸಮರ್ಪಿಸಲಾಗಿದೆ. ಇಂದು ಅಂದರೆ ಬುಧವಾರ ಗಣೇಶನಿಗೆ ಸಮರ್ಪಿಸಲಾಗಿದೆ. ಬುಧವಾರದಂದು ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ವಿಘ್ನಗಳಿಂದ ಪರಿಹಾರ ಪಡೆಯಬಹುದು ಎಂಬುದು ನಂಬಿಕೆ. 


COMMERCIAL BREAK
SCROLL TO CONTINUE READING

ಹಿಂದೂ ಧರ್ಮದಲ್ಲಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ವಿಘ್ನ ವಿನಾಶಕ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕೈ ಹಾಕುವ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂಬುದು ನಂಬಿಕೆ ಆಗಿದೆ.  ಹಾಗಾಗಿಯೇ, ಜೀವನದಲ್ಲಿ ಸುಖ-ಶಾಂತಿಯಿಂದ ಇರಲು, ಕೆಲಸಗಳಲ್ಲಿ ನಿರೀಕ್ಷಿತ ಫಲ ಪಡೆಯಲು ಗಣೇಶನನ್ನು ಮೆಚ್ಚಿಸುವುದು ಮುಖ್ಯ ಎನ್ನಲಾಗುತ್ತದೆ. ಗಣೇಶನನ್ನು ಮೆಚ್ಚಿಸಲು ಬುಧವಾರ ಪ್ರಶಸ್ತವಾದ ದಿನವಾಗಿದೆ. ಈ ದಿನ ಕೆಲವು ವಿಶೇಷ ಕ್ರಮ ಕೈಗೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ- Vastu Tips For Broom: ಈ ಹೊತ್ತಿನಲ್ಲಿ ತಪ್ಪಿಯೂ ಮನೆಯಿಂದ ಕಸ ಹೊರ ಹಾಕಬೇಡಿ ಎದುರಾಗುತ್ತದೆ ಆರ್ಥಿಕ ಸಮಸ್ಯೆ


ಬುಧವಾರದಂದು ಗಣಪತಿಯನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ. ನೀವು ಆರ್ಥಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನೀವು ಬುಧವಾರದಂದು ನಿಯಮಗಳ ಪ್ರಕಾರ ಗಣಪತಿಯನ್ನು ಪೂಜಿಸಬೇಕು. ಗಣಪತಿಗೆ ಹಳದಿ ಬಣ್ಣವು ತುಂಬಾ ಪ್ರಿಯವಾಗಿದೆ ಮತ್ತು ಈ ದಿನ ಪೂಜೆ ಮಾಡುವಾಗ ಹಳದಿ ಹೂವುಗಳನ್ನು ಅರ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ.  ಬುಧವಾರದಂದು ಯಾವ ಕೆಲಸ ಮಾಡುವುದರಿಂದ ಒಳ್ಳೆಯದಾಗಲಿದೆ ಎಂದು ತಿಳಿಯೋಣ...


ಜೀವನದಲ್ಲಿ ಯಶಸ್ಸನ್ನು ಪಡೆಯಲು ಬುಧವಾರದಂದು ಈ ಕೆಲಸವನ್ನು ಮಾಡಿ:
ನಿಮ್ಮ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇಂದು ಅಂದರೆ ಬುಧವಾರದಂದು ನೀವು ಹಸುವಿಗೆ ಹಸಿರು ಮೇವನ್ನು ತಿನ್ನಿಸಬೇಕು. ವಾಸ್ತವವಾಗಿ, ಗೋಮಾತೆ ಎಂದು ಪೂಜಿಸಲ್ಪಡುವ ಹಸುವಿನಲ್ಲಿ 36 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹಾಗಾಗಿ ಗೋವಿನ ಸೇವೆ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬುಧವಾರದಂದು ಹಸುವಿಗೆ ಹಸಿರು ಮೇವು ತಿನ್ನಿಸಲು ಪ್ರಯತ್ನಿಸಿ. ಸಾಧ್ಯವಾದರೆ ದನದ ಕೊಟ್ಟಿಗೆಗೆ ಹೋಗಿ ಮೇವು ಕೊಡಿ.  


ಇದನ್ನೂ ಓದಿ- Office Tips: ಕಚೇರಿಯಲ್ಲಿ ಮರೆತೂ ಈ ತಪ್ಪುಗಳನ್ನು ಮಾಡಬೇಡಿ


ಇದಲ್ಲದೆ, ಬುಧವಾರದಂದು ಈ ಮಂತ್ರದಿಂದ ಗಣಪತಿಯನ್ನು ಪೂಜಿಸುವುದರಿಂದ ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಗಣಪತಿಯನ್ನು ಪೂಜಿಸುವಾಗ, 'ಓಂ ಗಣಪತಯೇ ನಮಃ' ಅಥವಾ 'ಶ್ರೀ ಗಣೇಶಾಯ ನಮಃ' ಎಂಬ ಮಂತ್ರವನ್ನು ಪಠಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.