Saptahik Rashifal: ಮುಂದಿನ ವಾರ ಮಿಥುನ ರಾಶಿಯ ಜಾತಕದವರಿಗೆ ವೃತ್ತಿಜೀವನದಲ್ಲಿ ಬಡ್ತಿ ನೀಡಲಿದೆ. ಇನ್ನೊಂದೆಡೆ ವೃಷಭ ಹಾಗೂ ಮಕರ ರಾಶಿಯ ಜಾತಕದವರಿಗೆ ಲೈಫ್ ಪಾರ್ಟ್ನರ್ ಸಾಥ್ ಸಿಗಲಿದೆ. ಆಸ್ಟ್ರೋ ಗುರು ಬೇಜಾನ್ ದಾರುವಾಲಾ ಅವರ ಪುತ್ರ ಚಿರಾಗ್ ದಾರುವಾಲಾ ನೀಡಿರುವ ಸಾಪ್ತಾಹಿಕ ರಾಶಿಫಲ (Astrology) ಕೆಳಗಿನಂತಿದೆ

COMMERCIAL BREAK
SCROLL TO CONTINUE READING

ಮೇಷ: ಆರೋಗ್ಯ ಉತ್ತಮವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಳಗಿರುವ ಉದ್ಯೋಗಿಗಳಿಂದ ಉತ್ತಮ ಸಾಥ್ ಸಿಗಲಿದೆ. ಧನ-ಲಾಭ ಪ್ರಾಪ್ತಿಯ ಅವಕಾಶಗಳು ಕೂಡಿ ಬರಲಿವೆ. ವ್ಯಾಪಾರದಲ್ಲಿ ಭಾಗ್ಯದ ಸಾಥ್ ಸಿಗಲಿದೆ. ದೇವರ ಪ್ರತಿ ನಿಮ್ಮ ಶ್ರದ್ಧೆ ಹೆಚ್ಚಾಗಲಿದೆ. ಶತ್ರುಗಳ ಮೇಲೆ ವಿಜಯ. ಕುಟುಂಬ ಸದಸ್ಯರು ಹಾಗೂ ಮಿತ್ರ ವರ್ಗದ ನೆರವು ಲಭಿಸಲಿದೆ.



ವೃಷಭ: ಈ ವಾರ ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಲಾಭವನ್ನು ಪಡೆಯುತ್ತೀರಿ. ಆರೋಗ್ಯವು ಉತ್ತಮವಾಗಿರಲಿದೆ. ನಿಮ್ಮ ವೈವಾಹಿಕ ಸಂತೋಷ ಹೆಚ್ಚಾಗಲಿದೆ, ಸಂಗಾತಿ ಮತ್ತು ಮಕ್ಕಳ ಕಡೆಯಿಂದ ಮನಸ್ಸು ಸಂತೋಷ ಪ್ರಾಪ್ತಿಯಾಗಲಿದೆ. ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ನೀವು ಅವಿವಾಹಿತರಾಗಿದ್ದರೆ, ಈ ವಾರ ವಿವಾಹದ ಸಾಧ್ಯತೆಗಳು ಗೋಚರಿಸುತ್ತಿವೆ. ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ.

ಮಿಥುನ: ಈ ವಾರ ಕಾನೂನು ವಿವಾದಗಳು ಮತ್ತು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗಲಿದೆ. ಕಾಮಗಾರಿ ಪ್ರಗತಿಯಲ್ಲಿ ಸಾಗಲಿದೆ. ಪ್ರತಿಕೂಲತೆಯನ್ನು ಎದುರಿಸಲು ನೀವು ಯಾವಾಗಲೂ ನಿಮ್ಮ ಧೈರ್ಯ ಮತ್ತು ತಾಳ್ಮೆಯನ್ನು ಸೂಕ್ತವಾಗಿ ಬಳಸುತ್ತೀರಿ. ಪಾರ್ಟ್ನರ್ ಶಿಪ್ ನಲ್ಲಿ ಮಾಡಿದ ಕೆಲಸವು ನಿಮಗೆ ಯಶಸ್ಸನ್ನು ನೀಡಲಿದೆ. ಹಣ ಗಳಿಸಲು ಕಷ್ಟಪಡಬೇಕಾಗಿಲ್ಲ. ದೈವಿಕ ಸಾಥ್ ಸಿಗಲಿದೆ.

ಕರ್ಕ: ಈ ವಾರ ಸರ್ಕಾರಿ ವಲಯದಲ್ಲಿ ನಿಮಗೆ ಅನುಕೂಲಕರ ಫಲಿತಾಂಶಗಳು ದೊರೆಯಲಿವೆ. ವ್ಯಾಪಾರ ಪ್ರವಾಸಗಳು ಇರಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ವ್ಯಯವಾಗಲಿದೆ. ಮಕ್ಕಳ ಸಂತೋಷ ಉತ್ತಮವಾಗಿರುತ್ತದೆ, ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಈ ವಾರ, ವ್ಯಾಪಾರ, ವ್ಯವಹಾರ ಅಥವಾ ಉದ್ಯೋಗದಲ್ಲಿ ಗೌರವ ಹೆಚ್ಚಾಗಲಿದೆ. ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ನೀವು ಸಂಬಂಧವನ್ನು ಬೆಳೆಸುವಿರಿ.

ಸಿಂಹ: ಈ ವಾರ ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು. ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಎದುರಾಳಿಗಳನ್ನು ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ. ದೇವರಲ್ಲಿ ನಿಮ್ಮ ನಂಬಿಕೆ ಹೆಚ್ಚಾಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನೀವು ಉತ್ತಮ ಕುಟುಂಬ ಸಂತೋಷವನ್ನು ಪಡೆಯುವಿರಿ. ಸಹೋದರ ಸಹೋದರಿಯರ ಚಿಂತೆ ಕಾಡಲಿದೆ. ಈ ವಾರ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಮತ್ತು ಉತ್ಸಾಹವನ್ನು ಕಾಣಬಹುದು, ಇದು  ನಿಮ್ಮ ಪಾಲಿಗೆ ಒಳ್ಳೆಯ ಸಂಕೇತವಾಗಿದೆ.

ಕನ್ಯಾ: ಈ ವಾರ ನೀವು ರಾಜಕೀಯದಲ್ಲಿ ಯಶಸ್ಸು ಸಾಧಿಸಲು ಅವಕಾಶಗಳನ್ನು ಪಡೆಯಬಹುದು ಮತ್ತು ರಾಜ್ಯ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೊಂದಿಗೆ ನೀವು ಸ್ನೇಹ ಬೆಳೆಸುವಿರಿ. ಪರೋಪಕಾರಿ ಸ್ವಭಾವದವರಾಗಿರುವ ನೀವು ಇತರರ ಒಳಿತಿಗಾಗಿ ಕೆಲಸ ಮಾಡುವಿರಿ. ಸರಕಾರದಿಂದ ಹಣ ಬರಲಿದೆ. ಈ ವಾರ ನಿಮಗೆ ಎಲ್ಲಾ ಸೌಲಭ್ಯಗಳು ಸಿಗಲಿವೆ. ನೀವು ನೀಡುವ ಸಲಹೆಗಳು ಇತರರಿಗೆ ಉಪಯುಕ್ತ ಸಾಬೀತಾಗಲಿವೆ. ನಿಮ್ಮ ಆರೋಗ್ಯವು ಸಾಮಾನ್ಯವಾಗಿ ಉತ್ತಮವಾಗಿರಲಿದೆ.

ತುಲಾ: ಈ ವಾರ ಮಿಶ್ರಫಲದಿಂದ ಕೂಡಿರುತ್ತದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ನಿಮ್ಮ ಸ್ವಭಾವ ಮತ್ತು ನಡವಳಿಕೆಯಲ್ಲಿ ಪ್ರಬುದ್ಧತೆ ಕಂಡುಬರಲಿದೆ. ದಾಂಪತ್ಯ ಜೀವನ ಉತ್ತಮವಾಗಿರಲಿದೆ. ನಿಮ್ಮ ಮಾತಿನಲ್ಲಿ ಮಾಧುರ್ಯತೆ ಇರಲಿದೆ. ಇದರಿಂದಾಗಿ ನೀವು ಇತರರನ್ನು ನಿಮ್ಮ ಕಡೆಗೆ ಆಕರ್ಷಿಸಲು ಸಾಧ್ಯವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕ: ಈ ವಾರ ನಿಮಗೆ ತುಂಬಾ ಶುಭಕರವಾಗಿರುತ್ತದೆ ಮತ್ತು ಎಲ್ಲೆಡೆಯಿಂದ ಒಳ್ಳೆಯ ಸುದ್ದಿಗಳು ಬರಲಿವೆ. ಉನ್ನತ ಶ್ರೇಣಿಯ ಜನರೊಂದಿಗೆ ಸಂಬಂಧವನ್ನು ಸ್ಥಾಪಿಸುವಿರಿ. ನೀವು ವ್ಯವಹಾರದಲ್ಲಿ ಲಾಭದ ಆನಂದವನ್ನು ಪಡೆಯುವಿರಿ, ಆದರೆ ಹೆಚ್ಚುತ್ತಿರುವ ಕೆಲಸದ ಒತ್ತಡದಿಂದಾಗಿ ನೀವು ಒತ್ತಡವನ್ನು ಅನುಭವಿಸುವಿರಿ. ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಿರಿ.

ಧನು: ಈ ವಾರ ನಿಮಗೆ ವ್ಯಾಪಾರದಲ್ಲಿ ಯಶಸ್ಸು ಸಿಗುವುದಿಲ್ಲ. ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವಿರಿ. ಕೌಟುಂಬಿಕ ಸಂತೋಷ ಪ್ರಾಪ್ತಿಯಾಗಲಿದೆ. ಈ ವಾರ ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ಉತ್ತಮ ಸಂಬಂಧ ಹೊಂದುವಿರಿ. ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಒಳ್ಳೆಯ ಸುದ್ದಿಯನ್ನು ಪಡೆಯುವ ಮೂಲಕ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಪ್ರತಿಭೆ ಮತ್ತು ಸಂಭಾಷಣೆಯ ಕೌಶಲ್ಯದಿಂದಾಗಿ ನೀವು ಇತರರ ನಡುವೆ ಚರ್ಚೆ ಹುಟ್ಟುಹಾಕುವಿರಿ.

ಮಕರ: ಈ ವಾರ ಕುಟುಂಬದಲ್ಲಿ ಯಾವುದೇ ಒಂದು ಸದಸ್ಯನ ಆರೋಗ್ಯ ಹದಗೆಡಲಿದ್ದು, ಮಾನಸಿಕ ಒತ್ತಡ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ಖ್ಯಾತಿ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯಗಳು ಮತ್ತು ಉದಾತ್ತ ಕಾರ್ಯಗಳಲ್ಲಿ ಸಂಪೂರ್ಣ ಭಕ್ತಿಯಿಂದ ನೆರವೆರಿಸುವಿರಿ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆಗಳಿವೆ. ಖ್ಯಾತಿ ಪಡೆಯುವ ಸಾಧ್ಯತೆಗಳಿವೆ. ಜನರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದೆ.

ಕುಂಭ: ಈ ವಾರ ನೀವು ಕುಟುಂಬ ಸದಸ್ಯರೊಂದಿಗೆ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ಹಣಕಾಸಿನ ಅಗತ್ಯ ಬೀಳಲಿದೆ, ಹೀಗಾಗಿ ನೀವು ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಬಹುದು. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳನ್ನು ತಲೆದೂರಬಹುದು. ಈ ವಾರ ಕೆಲವು ಒಳ್ಳೆಯ ಸುದ್ದಿಗಳು ಸಿಗಲಿವೆ. ನ್ಯಾಯಾಲಯದಲ್ಲಿ ಜಯ ಸಿಗಲಿದೆ. ಉದ್ಯೋಗ-ವ್ಯವಹಾರದಲ್ಲಿ ಗೌರವ ಮತ್ತು ಘನತೆ ಪ್ರಾಪ್ತಿಯಾಗಲಿದೆ.


ಇದನ್ನೂ ಓದಿ-Vastu Tips: ವಾಸ್ತುಶಾಸ್ತ್ರದ ಈ ನಿಯಮಗಳ ಅನುಸರಣೆ ಮನೆಯಲ್ಲಿ ಸುಖ-ಸಮೃದ್ಧಿಗೆ ಕಾರಣ, ವಿಶೇಷ ಗಮನ ಹರಿಸಿ

ಮೀನ: ಈ ವಾರ ನಿಮ್ಮ ಹಣವನ್ನು ಉದಾತ್ತ ಕಾರ್ಯಗಳು ಮತ್ತು ದಾನಗಳಲ್ಲಿ ಖರ್ಚಾಗುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀವು ಪಡೆಯುವಿರಿ. ನೀವು ಚಾತುರ್ಯದಿಂದ ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗಲಿದೆ. ಈ ವಾರ ನೀವು ಧಾರ್ಮಿಕ ಚಟುವಟಿಕೆಗಳಿಗೆ ಒಲವು ತೋರುತ್ತೀರಿ. ಕುಟುಂಬದಿಂದ ಸಂತೋಷ ಮತ್ತು ಬೆಂಬಲ ಪ್ರಾಪ್ತಿಯಾಗಲಿದೆ.


ಇದನ್ನೂ ಓದಿ-Palmistry: ನಿಮ್ಮ ಅಂಗೈಯಲ್ಲೂ ಈ 3 ಸಂಗತಿಗಳಿವೆಯಾ? ಹಾಗಾದ್ರೆ, ನಿಮ್ಮ ಸಿರಿವಂತಿಕೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.