ನವದೆಹಲಿ: ಜ್ಯೋತಿಷ್ಯದಂತೆ ಭವಿಷ್ಯವನ್ನು ಲೆಕ್ಕಾಚಾರ ಮಾಡಲು ಸಂಖ್ಯಾಶಾಸ್ತ್ರವನ್ನು ಬಳಸಲಾಗುತ್ತದೆ. ಜನ್ಮ ದಿನಾಂಕದ ಅನುಸಾರ ಯಾವುದೇ ವ್ಯಕ್ತಿಯ ಮುಂದಿನ ಜೀವನ ಕುರಿತು ಲೆಕ್ಕಾಚಾರ ನಡೆಸಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿ ರಾಡಿಕ್ಸ್​​​ನ ಜನರು ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ರಾಡಿಕ್ಸ್ ಅಂದರೆ ಒಬ್ಬ ವ್ಯಕ್ತಿಯ ಜನ್ಮ ದಿನಾಂಕವು 31 ಆಗಿದ್ದರೆ, ಆತನ ರಾಡಿಕ್ಸ್ 3+1=4 ಆಗುತ್ತದೆ.


COMMERCIAL BREAK
SCROLL TO CONTINUE READING

ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ಆರಂಭವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಜನರಿಗೆ ವರದಾನವಾಗಿದೆ. ವಾರದ ಸಂಖ್ಯಾಶಾಸ್ತ್ರದ ಪ್ರಕಾರ ಈ ಜನರು ಸಾಕಷ್ಟು ಸುಖ-ಸಂಪತ್ತು ಮತ್ತು ಹಣವನ್ನು ಪಡೆಯುತ್ತಾರೆ. ಇವರ ವೃತ್ತಿಜೀವನದಲ್ಲಿ ಪ್ರಗತಿಯನ್ನು ಸಹ ಇರುತ್ತದೆ. ರಾಡಿಕ್ಸ್ 1 ರಿಂದ 9ರ ಎಲ್ಲಾ ಸ್ಥಳೀಯರಿಗೆ 27 ನವೆಂಬರ್ 2022ರಿಂದ 3 ಡಿಸೆಂಬರ್ 2022ರ ಸಮಯ ಹೇಗಿರುತ್ತದೆ ಎಂದು ತಿಳಿಯಿರಿ.


ರಾಡಿಕ್ಸ್ 1- ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಪ್ರಮುಖ ಕೆಲಸವನ್ನು ಪೂರ್ಣಗೊಳಿಸಿದ ನಂತರ ನೀವು ನಿರಾಳರಾಗುತ್ತೀರಿ. ಸಾಕಷ್ಟು ಕಾರ್ಯನಿರತತೆ ಇದ್ದರೂ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ವ್ಯಾಪಾರ-ವಹಿವಾಟು ಸಾಮಾನ್ಯವಾಗಿರುತ್ತದೆ.


ರಾಡಿಕ್ಸ್ 2- ನೀವು ಪರೀಕ್ಷೆ-ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಬಹುದು. ವಿವಾದದಲ್ಲಿ ಸಿಲುಕಿಕೊಳ್ಳುವ ಸಂಭವವಿದ್ದು, ನ್ಯಾಯಾಲಯದ ಹೊರಗೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ: Rakta Chandana Remedies: ಎಷ್ಟೇ ಕಷ್ಟಪಟ್ಟರು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗುತ್ತಿಲ್ಲವೇ? ಈ ಉಪಾಯ ಟ್ರೈ ಮಾಡಿ


ರಾಡಿಕ್ಸ್ 3- ಈ ವಾರ ತುಂಬಾ ಒಳ್ಳೆಯದು. ವೃತ್ತಿಪರ, ವೈಯಕ್ತಿಕ ಜೀವನ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಮಯ ಮೀಸಲಿಡುವಿರಿ. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಸಮಯ. ನಕಾರಾತ್ಮಕ ಕೆಲಸಗಳಿಂದ ದೂರವಿರಿ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು.


ರಾಡಿಕ್ಸ್ 4- ಧನಲಾಭವಿರುತ್ತದೆ. ಆದರೆ ಹೂಡಿಕೆ ಮಾಡುವ ಮೊದಲು ನಿಮ್ಮ ಸಂಶೋಧನೆಯನ್ನು ಸಂಪೂರ್ಣವಾಗಿ ಮಾಡಿ. ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಿರಿ. ಜೀವನ ಸಂಗಾತಿ ಚೆನ್ನಾಗಿರುತ್ತಾರೆ. ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಿರಿ.


ರಾಡಿಕ್ಸ್ 5- ಈ ವಾರವು ನಿಮಗೆ ಉತ್ತಮವಾಗಿರುತ್ತದೆ. ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಆದರೆ ಅನಗತ್ಯ ವೆಚ್ಚಗಳು ನಿಮ್ಮನ್ನು ಕಾಡಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಪ್ರಭಾವಿ ವ್ಯಕ್ತಿಯನ್ನು ಸಂಪರ್ಕಿಸಬಹುದು.


ರಾಡಿಕ್ಸ್ 6- ಸಂಬಂಧಗಳಿಗೆ ಗಮನ ಕೊಡಿ, ಹಾಳಾದ ಸಂಬಂಧಗಳು ನಿಮ್ಮ ಇಮೇಜ್ ಅನ್ನು ಹಾಳುಮಾಡಬಹುದು. ನಿಮ್ಮ ಕೆಲಸಗಳಿಗೆ ಸಂಪೂರ್ಣ ಗಮನ ಕೊಡಿ. ಅನಗತ್ಯ ವಿಷಯಗಳಲ್ಲಿ  ಬಗ್ಗೆ ಗಮನ ಹರಿಸಬೇಡಿ.


ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಧನಲಾಭವಾಗಲಿದೆ


ರಾಡಿಕ್ಸ್ 7- ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ. ಉದ್ವಿಗ್ನತೆ ಹೆಚ್ಚಾಗಿರುತ್ತದೆ. ಇತರರ ವ್ಯವಹಾರಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ರಕ್ತದೊತ್ತಡ ಹೆಚ್ಚಾಗಬಹುದು.


ರಾಡಿಕ್ಸ್ 9- ಕುಟುಂಬದ ಸದಸ್ಯರ ಸಹಾಯದಿಂದ ಉತ್ತಮ ಯಶಸ್ಸನ್ನು ಸಾಧಿಸಬಹುದು. ನಿಮ್ಮ ಉದಾರ ಸ್ವಭಾವದ ಲಾಭವನ್ನು ಯಾರಾದರೂ ಪಡೆಯಬಹುದು, ಹೀಗಾಗಿ ಜಾಗರೂಕರಾಗಿರಿ. ಜೀವನ ಸಂಗಾತಿಯೊಂದಿಗೆ ನಿಮ್ಮ ಜೀವನ ಉತ್ತಮವಾಗಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.