Weight Loss Diet: ತ್ವರಿತ ತೂಕ ನಷ್ಟಕ್ಕಾಗಿ ಈ ಆಹಾರಗಳಿಂದ ಇರಲಿ ಅಂತರ
Weight Loss: ತ್ವರಿತವಾಗಿ ತೂಕ ಇಳಿಸಿಕೊಳ್ಳಬೇಕು ಎಂಬುದು ದಪ್ಪಗಿರುವ ಪ್ರತಿಯೊಬ್ಬರ ಆಸೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಈ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.
Foods To Avoid For Weight Loss: ಆರೋಗ್ಯವಂತ ಶರೀರಕ್ಕಾಗಿ ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಬಹುತೇಕ ಜನರ ಸಾಮಾನ್ಯ. ಆದರೆ, ಎಷ್ಟೇ ಕಠಿಣ ಜೀವನಶೈಲಿಯನ್ನು ಅನುಸರಿಸಿದರೂ ತೂಕ ಇಳಿಕೆ ಅಷ್ಟು ಸುಲಭವಲ್ಲ. ಆರೋಗ್ಯ ತಜ್ಞರ ಪ್ರಕಾರ, ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕೆಲವು ಆಹಾರಗಳಿಂದ ದೂರ ಉಳಿಯುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಆ ಆಹಾರಗಳು ಯಾವುವು? ಯಾವ ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದರಿಂದ ತೂಕ ಇಳಿಕೆಗೆ ಸಹಕಾರಿ ಎಂದು ತಿಳಿಯೋಣ...
ವೇಗವಾಗಿ ತೂಕ ಇಳಿಸಿಕೊಳ್ಳಬೇಕೇ? ಈ ಆಹಾರಗಳನ್ನು ಸೇವಿಸಬೇಡಿ:-
* ವೈಟ್ ರೈಸ್:
ಭಾರತೀಯ ಖಾದ್ಯಗಳಲ್ಲಿ ಅನ್ನಕ್ಕೆ ಬಹಳ ಪ್ರಾಮುಖ್ಯತೆ ಇದೆ. ದೈನಂದಿನ ಆಹಾರದಲ್ಲಿ ಅತಿಯಾದ ವೈಟ್ ರೈಸ್ ಸೇವನೆಯು ಕಾರ್ಬೋಹೈಡ್ರೆಟ್ ಸೇವನೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ತೂಕ ಇಳಿಕೆಗೆ ಅಡ್ಡಿಯಾಗಬಹುದು.
* ಪರಾಠ:
ಭಾರತದ ಕೆಲವು ಭಾಗಗಳಲ್ಲಿ ಪರಾಠ ಪ್ರಮುಖ ದೈನಂದಿನ ಖಾದ್ಯ. ಆದರೆ, ಈ ಖಾದ್ಯ ತಯಾರಿಕೆಗೆ ಮೈದಾ ಮತ್ತು ಎಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಅಡ್ಡಿಯುಂಟುಮಾಡಬಲ್ಲದು. ಮಾತ್ರವಲ್ಲ, ನಿಮ್ಮ ತೂಕ ಇಳಿಕೆ ಪ್ರಕ್ರಿಯೆಗೂ ತೊಡಕುಂಟು ಮಾಡುತ್ತದೆ.
ಇದನ್ನೂ ಓದಿ- ಈ ಆರೋಗ್ಯ ಸಮಸ್ಯೆಗಳಿಗೂ ಮುಕ್ತಿ ನೀಡುತ್ತೆ ಪರಂಗಿ ಬೀಜಗಳು
* ಕರಿದ ಆಹಾರಗಳು:
ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದರೆ ಯಾವುದೇ ಕಾರಣಕ್ಕೂ ಕರಿದ ಆಹಾರಗಳನ್ನು ಸೇವಿಸಲೇಬಾರದು.
* ಸಿಹಿ ತಿನಿಸುಗಳು:
ತೂಕ ಇಳಿಸಿಕೊಳ್ಳಲು ಬಯಸುವವರು ಯಾವುದೇ ಕಾರಣಕ್ಕೂ ಸಿಹಿ ತಿನಿಸುಗಳನ್ನು ಸೇವಿಸುವುದನ್ನು ತಪ್ಪಿಸಿ. ಅದರಲ್ಲೂ ಸಂಸ್ಕರಿಸಿದ ಸಕ್ಕರೆಯಿಂದ ತಯಾರಿಸಿದ ಖಾದ್ಯಗಳನ್ನು ತಿನ್ನದೇ ಇರುವುದು ಒಳಿತು.
ಇದನ್ನೂ ಓದಿ- ನಿಂಬೆ ಹಣ್ಣಿಗೆ ಈ ಮೂರು ವಸ್ತು ಬೆರೆಸಿ ಹಚ್ಚಿದರೆಸಾಕು ! ಪಾರ್ಲರ್, ಕ್ರೀಂ ಲೋಶನ್ ಅಗತ್ಯವೇ ಇಲ್ಲ
* ಕುರುಕುಲು:
ಭಾರತೀಯದಲ್ಲಿ ಸಂಜೆ ಟೀ, ಕಾಫಿ ಕುಡಿಯುವ ವೇಳೆ ಏನಾದರೂ ಕುರುಕುಲು ತಿನಿಸುಗಳನ್ನು ಸೇವಿಸುವ ಅಭ್ಯಾಸವಿರುತ್ತದೆ. ಆದರೆ, ನಿಮ್ಮ ಈ ಅಭ್ಯಾಸವು ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು.
* ಸ್ಟ್ರೀಟ್ ಫುಡ್:
ಭಾರತದಲ್ಲಿ ಸ್ಟ್ರೀಟ್ ಫುಡ್ಸ್ ತುಂಬಾ ಪ್ರಸಿದ್ದಿ. ಆದರೆ, ತೂಕ ಇಳಿಸಲು ಬಯಸುವವರು ಇವುಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.