Weight Loss: ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಆಯುರ್ವೇದದ ಕೆಲವು ಮೂಲಿಕೆಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆಯುರ್ವೇದ ತಜ್ಞರ ಪ್ರಕಾರ, ಈ ಗಿಡಮೂಲಿಕೆಗಳ ಬಳಕೆಯಿಂದ ಕೇವಲ 30 ದಿನಗಳಲ್ಲಿ ಎಂದರೆ ಒಂದೇ ಒಂದು ತಿಂಗಳಿನಲ್ಲಿ ಹೊಟ್ಟೆಯ ಸುತ್ತಲೂ ಶೇಖರಣೆ ಆಗಿರುವ ಕೊಬ್ಬನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಕರಗಿಸಬಹುದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಹೌದು, ಅತಿಯಾದ ತೂಕ, ಹೊಟ್ಟೆಯ ಸುತ್ತಲೂ ಸಂಗ್ರಹವಾದ ಕೊಬ್ಬಿನಿಂದಾಗಿ ನೀವು ತೊಂದರೆಗೊಳಗಾಗಿದ್ದರೆ, ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿಮ್ಮ ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಕೆಲವು ಆಯುರ್ವೇದ ಗಿಡಮೂಲಿಕೆಗಳು ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲವು. ಅದರಲ್ಲೂ ಒಂದೇ ಒಂದು ಸೊಪ್ಪು ಕೇವಲ ಒಂದೇ ಒಂದು ತಿಂಗಳಿನಲ್ಲಿ ಬೆಲ್ಲಿ ಫ್ಯಾಟ್ ಮಾಯವಾಗಿಸಬಲ್ಲ ಸಾರ್ಥ್ಯವನ್ನು ಹೊಂದಿದೆ ಎನ್ನಲಾಗುತ್ತದೆ. ಯಾವುದಾ ಎಲೆ? ಅದರಲ್ಲಿರುವ ಗುಣಗಳೇನು ಎಂದು ತಿಳಿಯೋಣ... 


ಒಂದು ತಿಂಗಳಲ್ಲಿ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ರಾಮಬಾಣ ಆಯುರ್ವೇದದ ಈ ಮೂಲಿಕೆ: 
ಒಂದೆಲಗ: 

ಒಂದೆಲಗ ಸೊಪ್ಪು, ನೋಡಲು ತುಂಬಾ ಚಿಕ್ಕದಾಗಿದ್ದರೂ ಸಹ ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಒಂದೆಲಗ ಸೊಪ್ಪನ್ನು ಸೇವಿಸುವುದರಿಂದ, ಇಲ್ಲವೇ ಅದರ ರಸವನ್ನು ಕುಡಿಯುವುದರಿಂದ ದೇಹದಲ್ಲಿ ಶೇಖರಣೆ ಆಗಿರುವ ಕೊಬ್ಬು ಕರಗುತ್ತದೆ. ಒಂದೆಲಗ ಸೊಪ್ಪಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡುವುದಾದರೆ... 


ಇದನ್ನೂ ಓದಿ- ಜೇನು ತುಪ್ಪ ಮತ್ತು ನಿಂಬೆ ರಸ ಬಳಸಿದರೆ ತೂಕದ ಇಳಿಕೆ ಸಾಧ್ಯ


ಕೊಬ್ಬನ್ನು ಕರಗಿಸಬಲ್ಲ ಶಕ್ತಿ: 
ಆಯುರ್ವೇದ ತಜ್ಞರ ಪ್ರಕಾರ, ಒಂದೆಲಗ ಸೊಪ್ಪುನಲ್ಲಿ ಬೊಜ್ಜು ನಿವಾರಕ ಗುಣಗಳಿದ್ದು ಇದು ದೇಹದಲ್ಲಿ ಅಡಕವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚುವರಿ ಕೊಬ್ಬನ್ನು ಕರಗಿಸಬಲ್ಲ ಶಕ್ತಿಯನ್ನು ಹೊಂದಿದೆ. 


ನಿದ್ರಾಹೀನತೆ ಸಮಸ್ಯೆಗೆ ಪರಿಹಾರ: 
ತೂಕ ಇಳಿಕೆಯಲ್ಲಿ ಪ್ರಯೋಜನಕಾರಿ ಎಂದು ನಂಬಲಾಗಿರುವ ಒಂದೆಲಗ ಸೊಪ್ಪಿನ ಬಳಕೆಯಿಂದ ಆತಂಕ, ಒತ್ತಡ, ಖಿನ್ನತೆಯಂತಹ ಸಮಸ್ಯೆಗಳಿಂದಲೂ ಪರಿಹಾರ ದೊರೆಯಲಿದೆ. ಮಾತ್ರವಲ್ಲ, ಇದು ನಿದ್ರಾಹೀನತೆ ಸಮಸ್ಯೆಗೂ ರಾಮಬಾಣವಿದ್ದಂತೆ. 


ಇದನ್ನೂ ಓದಿ- ಪ್ರತಿದಿನ ತುಳಸಿ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?


ತೂಕ ಇಳಿಕೆಗಾಗಿ ಒಂದೆಲಗ ಸೊಪ್ಪನ್ನು ಹೇಗೆ ಬಳಸಬೇಕು? 
>> ನೀವು ತೂಕ ಇಳಿಕೆಗಾಗಿ ಒಂದೆಲಗ ಸೊಪ್ಪನ್ನು ಬಳಸುತ್ತಿದ್ದರೆ ಮೊದಲು ಎಲೆಗಳನ್ನು ಸ್ವಚ್ಛಗೊಳಿಸಿ. 
>> ನಂತರ ಅದನ್ನು ರುಬ್ಬಿ ನುಣ್ಣಗೆ ಪೇಸ್ಟ್ ತಯಾರಿಸಿ. 
>> ಶುಚಿಯಾದ ಬಟ್ಟೆಯಲ್ಲಿ ನುಣ್ಣಗೆ ರುಬ್ಬಿದ ಪೇಸ್ಟ್ ಹಾಕಿ, ಅದರ ರಸ ಹಿಂಡಿಕೊಳ್ಳಿ. 
>> ನಂತರ ರಸವನ್ನು ಹಾಗೇ ನೇರವಾಗಿ ಕುಡಿಯಬಹುದು. ನಿಮಗೆ ನೇರವಾಗಿ ರಸ ಕುಡಿಯಲು ಇಷ್ಟವಿಲ್ಲದಿದ್ದರೆ, ಅದನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕೂಡ ಸೇವಿಸಬಹುದು. 


ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಒಂದೆಲಗ ಸೊಪ್ಪಿನ ರಸ ಸೇವಿಸುತ್ತಾ ಬಂದರೆ, ಕೆಲವೇ ದಿನಗಳಲ್ಲಿ ಆರೋಗ್ಯಕರವಾಗಿ ತೂಕ ಇಳಿಸಲು ಪ್ರಯೋಜನಕಾರಿ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.