ಬೆಂಗಳೂರು : Weight Loss Food : ಹೆಚ್ಚುತ್ತಿರುವ ತೂಕವನ್ನು ಕಳೆದುಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಇದಕ್ಕಾಗಿ ವ್ಯಾಯಾಮದ ಜೊತೆಗೆ, ಸೇವಿಸುವ ಆಹಾರ ಮತ್ತು ಪಾನೀಯದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಏನು ತಿನ್ನುತ್ತೇವೆ ಏನು ಕುಡಿಯುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಜಂಕ್ ಫುಡ್, ಎಣ್ಣೆಯುಕ್ತ ಆಹಾರ, ಮಸಾಲೆಯುಕ್ತ ಆಹಾರ, ಫಾಸ್ಟ್ ಫುಡ್ ಮುಂತಾದ ಆರೋಗ್ಯವನ್ನು ಹದಗೆಡಿಸುವುದು ಆಹಾರಗಳನ್ನು ಆಗಾಗ ಸೇವಿಸುತ್ತಿರುತ್ತೇವೆ. ಅಲ್ಲದೆ, ಬಿಡುವಿಲ್ಲದ ಜೀವನಶೈಲಿಯಿಂದ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡಾ ಸಾಧ್ಯವಾಗುವುದಿಲ್ಲ.  ಈ ಕೆಳಗೆ ಹೇಳುವ ನಾಲ್ಕು ಆಹಾರಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ, ತೂಕವು ವೇಗವಾಗಿ ಕಡಿಮೆಯಾಗುತ್ತದೆ. 


COMMERCIAL BREAK
SCROLL TO CONTINUE READING

ಮೊಸರು ತಿನ್ನುವುದರಿಂದ ಆಗುವ ಪ್ರಯೋಜನಗಳು :
ರಾತ್ರಿಯ ವೇಳೆ ಊಟ ಮಾಡಿದ ನಂತರ ಮೊಸರು ತಿನ್ನಬೇಕು. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಪ್ರೋಟೀನ್ ಕಂಡುಬರುತ್ತದೆ. ಇದು ಸ್ನಾಯುಗಳಿಗೆ ಬಲವನ್ನು ನೀಡುತ್ತದೆ. ಇದರೊಂದಿಗೆ, ಮೊಸರಿನಲ್ಲಿ ಇರುವ ಸೂಕ್ಷ್ಮ ಪೋಷಕಾಂಶವು ಜೀರ್ಣಕ್ರಿಯೆಯನ್ನು ಸರಿಯಾಗಿ ಇರಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ : Moringa Leaves: ನುಗ್ಗೆ ಸೊಪ್ಪನ್ನು ಈ ರೀತಿ ಬಳಸಿದರೆ ಸಿಗುತ್ತೆ ಹಲವು ಪ್ರಯೋಜನ


ಹೋಲ್ ಗ್ರೇನ್ ಬ್ರೆಡ್ನೊಂದಿಗೆ  ಪೀನಟ್ ಬಟರ್ : 
ರಾತ್ರಿಯ ವೇಳೆ ಹಸಿವು ಅನಿಸಿದರೆ, ಪೀನಟ್ ಬಟರ್ ಹಚ್ಚಿ ಹೋಲ್ ಗ್ರೇನ್ ಬ್ರೆಡ್   ತಿನ್ನಬಹುದು. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಬಾಳೆ ಹಣ್ಣು ಕೂಡಾ ತೂಕ ನಷ್ಟಕ್ಕೆ ಸಹಕಾರಿ : 
ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ತೂಕವನ್ನು ಕಡಿಮೆ ಮಾಡಲು ಕೆಲಸ ಮಾಡುವ ಅನೇಕ ಪೋಷಕಾಂಶಗಳು ಅದರಲ್ಲಿ ಕಂಡುಬರುತ್ತವೆ. ಈ ಹಣ್ಣಿನಲ್ಲಿರುವ ಫೈಬರ್‌ನಿಂದಾಗಿ, ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ.  ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಇದನ್ನೂ ಓದಿ : Pulse: ರಾತ್ರಿ ಹೊತ್ತು ಈ ಕಾಳುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಅಪಾಯ ಗ್ಯಾರೆಂಟಿ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.