Fruits For Weight Loss: ಫಿಟ್ನೆಸ್ ಕಾಯ್ದುಕೊಳ್ಳಲು ತೂಕ ಇಳಿಕೆ ಮಾಡಿಕೊಳ್ಳುವುದು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಧಾವಂತದ ಇಂದಿನ ಜೀವನಶೈಲಿಯಲ್ಲಿ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯ ಸಿಗುತ್ತಿಲ್ಲ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತವಾಗಿರುವ ಜೀವನಶೈಲಿಯಿಂದಾಗಿ, ಜನರು ಹೊಟ್ಟೆಯ ಕೊಬ್ಬನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ಅವರ ದೇಹದ ತೂಕ ಹೆಚ್ಚಾಗಲು ಆರಂಭಿಸುತ್ತದೆ. ಸ್ಥೂಲಕಾಯದ ಸಮಸ್ಯೆಯು ಬಹಳ ವೇಗವಾಗಿ ಹೆಚ್ಚುತ್ತಿದೆ ಮತ್ತು ಬೊಜ್ಜಿಗೆ ಸಂಬಂಧಿಸಿದ ಇತರ ಕಾಯಿಲೆಗಳು ಸಹ ಅಷ್ಟೇ ವೇಗವಾಗಿ ಜನರನ್ನು ಕಾಡುತ್ತಿವೆ. ಇದಕ್ಕಾಗಿ ಜನರು ತೂಕವನ್ನು ಕಳೆದುಕೊಳ್ಳುವ ಮೂಲಕ ತಮ್ಮನ್ನು ತಾವು ಫಿಟ್ ಮತ್ತು ಆರೋಗ್ಯಕರವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. (Lifestyle News In Kananda)


COMMERCIAL BREAK
SCROLL TO CONTINUE READING

ತೂಕವನ್ನು ಇಳಿಸಿಕೊಳ್ಳಲು, ಆಹಾರ ಮತ್ತು ವ್ಯಾಯಾಮದ ಜೊತೆಗೆ ಆರೋಗ್ಯಕರ ಜೀವನಶೈಲಿಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಹೆಚ್ಚಾದ ತೂಕವನ್ನು ಕಡಿಮೆ ಮಾಡಲು ಜನರು ಜ್ಯೂಸ್ ಕುಡಿಯುವ ನಿಯಮವನ್ನು ಸಹ ಅಳವಡಿಸಿಕೊಳ್ಳುತ್ತಾರೆ. ಅಡುಗೆಮನೆಯಲ್ಲಿ ಬಳಸುವ ಮಸಾಲೆಗಳು ಮತ್ತು ಆಯುರ್ವೇದ ಗಿಡಮೂಲಿಕೆಗಳ ಜೊತೆಗೆ ಹಣ್ಣುಗಳು, ತರಕಾರಿಗಳು ಮತ್ತು ಗಿಡಮೂಲಿಕೆಗಳನ್ನು ಬೆರೆಸಿ ಅನೇಕ ರೀತಿಯ ತೂಕ ಇಳಿಕೆಯ ಜ್ಯೂಸ್ ಗಳನ್ನು ತಯಾರಿಸಲಾಗುತ್ತದೆ. ಆದರೆ, ಹಣ್ಣಿನ ರಸವನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡಬಹುದು ಎಂದು ನೀವು ಭಾವಿಸಿದರೆ, ಅದು ನಿಮ್ಮ ತಪ್ಪು ಕಲ್ಪನೆ ಎಂದು ಸಾಬೀತಾಗಬಹುದು. ಹೌದು, ಹಣ್ಣಿನ ರಸವನ್ನು ಕುಡಿಯುವುದು ತೂಕ ಇಳಿಕೆಗೆ ಸಹಾಯ ಮಾಡುವ ಬದಲು ನಿಮಗೆ ಹಾನಿಕಾರಕವೆಂದು ಸಾಬೀತಾಗಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ


ಹಣ್ಣಿನ ರಸವನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುವುದಿಲ್ಲ ಏಕೆ?
ಹಣ್ಣಿನ ರಸವನ್ನು ಕುಡಿಯುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂದು ಕೆಲವು ಅಧ್ಯಯನಗಳಲ್ಲಿ ಹೇಳಲಾಗಿದೆ. ಇದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಬಹುದು. ಅಧ್ಯಯನಗಳ ಪ್ರಕಾರ, ದ್ರವ ಆಹಾರವನ್ನು ಸೇವಿಸುವ ಅಥವಾ ಹಣ್ಣಿನ ರಸವನ್ನು ಮಾತ್ರ ಕುಡಿಯುವ ಜನರು ಸ್ವಲ್ಪ ಸಮಯದ ನಂತರ ಸ್ಥೂಲಕಾಯತೆಯಿಂದ ಬಳಳುತ್ತಾರೆ ಎನ್ನಲಾಗುತ್ತದೆ. ಈ ರೀತಿಯ ಸ್ಥೂಲಕಾಯದ ಅಪಾಯವು ಮಕ್ಕಳಲ್ಲಿ ಹೆಚ್ಚು. ಆದರೆ, ಆರೋಗ್ಯಕರವಾಗಿದ್ದರೂ, ಹಣ್ಣಿನ ರಸವನ್ನು ಕುಡಿಯುವುದು ಏಕೆ ತೂಕವನ್ನು ಹೆಚ್ಚಿಸುತ್ತದೆ? ವಾಸ್ತವದಲ್ಲಿ, ಫ್ರಕ್ಟೋಸ್ ಎಂಬ ನೈಸರ್ಗಿಕ ಸಕ್ಕರೆ ಹಣ್ಣುಗಳಲ್ಲಿ ಕಂಡುಬರುತ್ತದೆ, ಇದು ಹಣ್ಣುಗಳಿಗೆ ಸಿಹಿ ರುಚಿಯನ್ನು ನೀಡುತ್ತದೆ. ಹಣ್ಣನ್ನು ಜ್ಯೂಸ್ ಮಾಡಿದ ನಂತರವೂ, ಈ ನೈಸರ್ಗಿಕ ಸಕ್ಕರೆಯು ರಸದಲ್ಲಿ ಉಳಿಯುತ್ತದೆ ಮತ್ತು ನೀವು ರಸವನ್ನು ಸೇವಿಸಿದಾಗ, ಅದು ರಸದ ಕ್ಯಾಲೋರಿ ಅಂಶವನ್ನು ಹೆಚ್ಚಿಸುತ್ತದೆ. ಈ ಹೆಚ್ಚುವರಿ ಕ್ಯಾಲೋರಿಗಳು ದೇಹದಲ್ಲಿ ಕೊಬ್ಬಿನಂತೆ ಸಂಗ್ರಹವಾಗಲು ಪ್ರಾರಂಭಿಸುತ್ತವೆ ಮತ್ತು ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.


ಇದನ್ನೂ ಓದಿ-Bald Head Tips: ಬೋಳು ತಲೆ ಸಮಸ್ಯೆ ನಿವಾರಣೆಗೆ ಬೆಳ್ಳಂಬೆಳಗ್ಗೆ ಈ ರೀತಿ ಮೆಂತ್ಯ ಬೀಜಗಳನ್ನು ಅಗೆಯಿರಿ!


ತೂಕ ಇಳಿಕೆಗೆ ಹಣ್ಣುಗಳನ್ನು ಹೇಗೆ ಸೇವಿಸಬೇಕು?
ತಜ್ಞರ ಪ್ರಕಾರ, ಹಣ್ಣಿನ ರಸವನ್ನು ಕುಡಿಯುವ ಬದಲು ಹಣ್ಣುಗಳನ್ನು ಕತ್ತರಿಸಿ ತಿನ್ನಿರಿ. ಏಕೆಂದರೆ, ಹಣ್ಣುಗಳನ್ನು ಸ್ಮಾಶ್ ಮಾಡಿದಾಗ ರಸವನ್ನು ಹೊರತೆಗೆಯಲು ಮತ್ತು ರಸವನ್ನು ಫಿಲ್ಟರ್ ಮಾಡುವ ಮೂಲಕ ಬೇರ್ಪಡಿಸಿದಾಗ, ಹಣ್ಣುಗಳಲ್ಲಿರುವ ಫೈಬರ್ ಅನ್ನು ಸಹ ಬೇರ್ಪಡಿಸಲಾಗುತ್ತದೆ. ಆಹಾರದ ಫೈಬರ್ ದೇಹದ ಚಯಾಪಚಯವನ್ನು ಹೆಚ್ಚಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ ನೀವು ಜ್ಯೂಸ್ ಕುಡಿಯುವುದರಿಂದ ಫೈಬರ್‌ನ ಪ್ರಯೋಜನಗಳನ್ನು ಪಡೆಯುವುದಿಲ್ಲ.


ಇದನ್ನೂ ಓದಿ-Bad Cholesterol ನಿರ್ಮೂಲನೆಗೆ ಬೆಳ್ಳಂಬೆಳಗ್ಗೆ ಈ 3 ಪದಾರ್ಥಗಳಿಂದ ತಯಾರಿಸಿದ ಟೀ ಸೇವಿಸಿ ನೋಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ