Weight Loss Tips: ತೂಕ ಇಳಿಕೆಗೆ ರಾತ್ರಿ ಮಲಗುವ ಮುನ್ನ ಈ ಐದು ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಶೀಘ್ರವೇ ಸಿಗುತ್ತೆ ಪಾಸಿಟಿವ್ ರಿಜಲ್ಟ್!
Weight Loss Tips: ನೀವು ಕೂಡ ವೇಗವಾಗಿ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಅವು ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತ್ವರಿತವಾಗಿ ಸುಡಲು ಸಹಾಯ ಮಾಡುತ್ತವೆ. (Lifestyle News In Kannada)
Weight Loss Tips: ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತೂಕ ಇಳಿಕೆಗಾಗಿ ನೀವೂ ಕೂಡ ಬಹುತೇಕ ಎಲ್ಲಾ ಪರಿಹಾರಗಳನ್ನು ಪ್ರಯತ್ನಿಸಿ. ಔಷಧಿ ತೆಗೆದುಕೊಂಡು, ವಿವಿಧ ಆಹಾರ ಕ್ರಮಗಳನ್ನು ಅನುಸರಿದಿ, ಜಿಮ್ಮ್ ಕೂಡ ಮುಗಿದಿದ್ದು, ತೂಕ ಇನ್ನೂ ಇಳಿಕೆಯಾಗದೆ ಇದ್ದಲ್ಲಿ ಇಂದು ನಾವು ನಿಮಗಾಗಿ ಐದು ಅಭ್ಯಾಸಗಳನ್ನು ತಂದಿದ್ದು, ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ತಜ್ಣರು ಹೇಳಿರುವ ಈ ಎಲ್ಲಾ ಅಭ್ಯಾಸಗಳು ಮಲಗುವ ಸಮಯಕ್ಕೆ ಸಂಬಂಧಿಸಿವೆ. ಈ 5 ಅಭ್ಯಾಸಗಳನ್ನು ಅನುಸರಿಸುವ ಮೂಲಕ ಯಾರು ಬೇಕಾದರೂ ತೂಕವನ್ನು ಕಳೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ಬನ್ನಿ ತೂಕ ಇಳಿಕೆಗಾಗಿ ಇರುವ ಆ ಐದು ಅಭ್ಯಾಸಗಳು ಯಾವುವು ಮತ್ತು ಅವು ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತವೆ ತಿಳಿದುಕೊಳ್ಳೋಣವೇ? (Lifestyle News In Kannada)
1. ಆರಾಮದಾಯಕ ವಾತಾವರಣದಲ್ಲಿ ಮಲಗಿಕೊಳ್ಳಿ
ತೂಕವನ್ನು ಕಳೆದುಕೊಳ್ಳಲು, ಉತ್ತಮ ನಿದ್ರೆ ಪಡೆಯುವುದು ತುಂಭಾ ಮುಖ್ಯ. ಹೀಗಾಗಿ ನಿಮ್ಮ ಸುಖ ನಿದ್ರೆಗಾಗಿ ಆರಾಮದಾಯಕ ವಾತಾವರಣವನ್ನು ರಚಿಸಿ. ಮೃದುವಾದ ಹಾಸಿಗೆ ಮತ್ತು ದಿಂಬುಗಳನ್ನು ಬಳಸಿ, ಕೋಣೆಯನ್ನು ಮಂದ ಮತ್ತು ಶಾಂತಿಯುತ ಬೆಳಕಿನ ದೀಪದಿಂದ ಹಾಗೂ ಪರಿಮಳಯುಕ್ತ ಮೇಣದಬತ್ತಿಗಳು ಮತ್ತು ಡಿಫ್ಯೂಸರ್‌ಗಳನ್ನು ಬಳಸಬಹುದು. ಈ ರೀತಿಯಾಗಿ ನೀವು ಶಾಂತಿಯುತವಾಗಿ ನಿದ್ರಿಸಿದರೆ ಅದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
2. ಮಲಗಲು ಮತ್ತು ಏಳಲು ಸಮಯವನ್ನು ನಿಗದಿಪಡಿಸಿ
ನೀವು ಚೆನ್ನಾಗಿ ನಿದ್ದೆ ಮಾಡಲು ಬಯಸಿದರೆ, ನಂತರ ಮಲಗುವ ಸಮಯವನ್ನು ಮತ್ತು ಏಳುವ ಸಮಯವನ್ನು ನಿಗದಿಪಡಿಸಿ. ನಮ್ಮ ಫಿಟ್ನೆಸ್ ಹೆಚ್ಚಾಗಿ ನಮ್ಮ ನಿದ್ರೆಗೆ ಸಂಬಂಧಿಸಿದೆ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಮೂಲಕ ನೀವು ಆರೋಗ್ಯವಂತರಾಗಬಹುದು. ಇದರೊಂದಿಗೆ, ನಿಮ್ಮ ದೇಹದ ಜೈವಿಕ ಗಡಿಯಾರವು ಸರಿಯಾಗಿ ಉಳಿಯುತ್ತದೆ ಮತ್ತು ನೀವು ವ್ಯಾಯಾಮ ಮಾಡಲು ಶಕ್ತಿಯನ್ನು ಪಡೆಯುವಿರಿ. ನೀವು ಅತಿಯಾಗಿ ತಿನ್ನುವುದು ಅಥವಾ ತಿನ್ನುವ ಅಸ್ವಸ್ಥತೆಗಳು ಮತ್ತು ಆಹಾರದ ಕಡುಬಯಕೆಗಳನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ.
3. ಸ್ಕ್ರೀನ್ ಟೈಮ್ ಕಡಿಮೆ ಮಾಡಿ
ರಾತ್ರಿ ಮಲಗುವ ಮುನ್ನ ಸ್ಕ್ರೀನ್ ಟೈಮ್ ಕಡಿಮೆ ಮಾಡಿ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಟಿವಿಯಂತಹ ಸಾಧನಗಳನ್ನು ನಿಮ್ಮ ಸುತ್ತಲೂ ಇಟ್ಟುಕೊಳ್ಳಬೇಡಿ. ಈ ಗ್ಯಾಜೆಟ್‌ಗಳಿಂದ ಹೊರಸೂಸುವ ನೀಲಿ ಬೆಳಕು ನಿದ್ರಾಹೀನತೆಗೆ ಕಾರಣವಾಗುತ್ತದೆ. ಈ ಬೆಳಕು ಮೆಲಟೋನಿನ್ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ, ಇದು ನಿದ್ರೆಯಲ್ಲಿ ತೊಂದರೆ ಉಂಟುಮಾಡುತ್ತದೆ ಮತ್ತು ಚಯಾಪಚಯ ದರವನ್ನು ದುರ್ಬಲಗೊಳಿಸುತ್ತದೆ, ಇದರಿಂದ ನಿಮಗೆ ತೂಕವನ್ನು ಕಳೆದುಕೊಳ್ಳಲು ಕಷ್ಟವಾಗಬಹುದು.
4. ತಡರಾತ್ರಿಯ ತಿಂಡಿಗಳಿಂದ ದೂರವಿರಿ
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ತಡರಾತ್ರಿಯಲ್ಲಿ ಏನನ್ನೂ ತಿನ್ನುವುದನ್ನು ತಪ್ಪಿಸಿ. ನೀವು ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿಸಲು ಬಯಸಿದರೆ, ಮಲಗುವ 2 ರಿಂದ 3 ಗಂಟೆಗಳ ಮೊದಲು ಆಹಾರವನ್ನು ಸೇವಿಸಿ ಮತ್ತು ಮಲಗಿದ ನಂತರ ಏನನ್ನೂ ತಿನ್ನಬೇಡಿ. ಹಸಿವಿನಿಂದಾಗಿ ನಿಮಗೆ ಚಡಪಡಿಕೆ ಮತ್ತು ನಿದ್ರಿಸಲು ಸಾಧ್ಯವಾಗದಿದ್ದರೆ, ನೀವು ರಾತ್ರಿಯಲ್ಲಿ ಹಣ್ಣುಗಳು, ಮೊಸರು ಅಥವಾ ಸೀಡ್ಸ್ ಗಳನ್ನು ತಿನ್ನಬಹುದು.
ಇದನ್ನೂ ಓದಿ-White Hair Remedy: ಕೂದಲು ಈ 3 ಕಾರಣಗಳಿಂದ ಬಿಳಿಯಾಗುತ್ತವೆ, ನೈಸರ್ಗಿಕವಾಗಿ ಹೇಗೆ ಸರಿಪಡಿಸಬೇಕು ಇಲ್ಲಿ ತಿಳಿಯಿರಿ!
5. ರಾತ್ರಿಯಲ್ಲಿ ಕೆಫೀನ್ ಸೇವಿಸಬೇಡಿ
ನೀವು ಸಹ ರಾತ್ರಿಯಲ್ಲಿ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ, ಈ ಅಭ್ಯಾಸವನ್ನು ಬದಲಾಯಿಸಬೇಕಾಗುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲು, ಗ್ರೀನ್ ಟೀ ಅಥವಾ ಹರ್ಬಲ್ ಟೀ ಕುಡಿಯಬಹುದು. ರಾತ್ರಿ ಮಲಗುವ ಮುನ್ನ ಮದ್ಯ, ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಬೇಕು. ಕೆಫೀನ್ ಸೇವನೆಯು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೀವು 7 ರಿಂದ 8 ಗಂಟೆಗಳ ನಿದ್ದೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ನಿಮಗೆ ದಿನವಿಡೀ ದಣಿವಿನ ಅನುಭವ ಉಂಟಾಗುತ್ತದೆ ಮತ್ತು ನಿಮ್ಮ ವ್ಯಾಯಾಮದ ದಿನಚರಿಯು ಅಪೂರ್ಣವಾಗಿರುತ್ತದೆ, ಆದ್ದರಿಂದ ಕೆಫೀನ್ ಅನ್ನು ಆದಶೂ ತಪ್ಪಿಸಿ.
ಇದನ್ನೂ ಓದಿ-Hing Water Benefits: ಖಾಲಿ ಹೊಟ್ಟೆ ಇಂಗು ನೀರು ಸೇವಿಸಿ, ತೂಕ ಇಳಿಕೆಯ ಜೊತೆಗೆ ಸಿಗುತ್ತವೆ ಈ ನಾಲ್ಕು ಲಾಭಗಳು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.