ಬೆಂಗಳೂರು: ಜನರು ತೂಕ ಹೆಚ್ಚಾಗುತ್ತಿದ್ದಂತೆ, ಕೊಬ್ಬು ಮೊದಲಿಗೆ, ಅವರ ಹೊಟ್ಟೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಅವರ ಹೊಟ್ಟೆ ಹೊರಬರಲು ಪ್ರಾರಂಭಿಸುತ್ತದೆ. ಹೊರಕ್ಕೆ ಚಾಚಿಕೊಂಡ ಹೊಟ್ಟೆ ಅಥವಾ ಹೊಟ್ಟೆಯ ಕೊಬ್ಬು ದೇಹದ ಆಕಾರವನ್ನು ಹಾಳುಮಾಡುವುದು ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆದಾಗ್ಯೂ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಕಷ್ಟದ ಕೆಲಸವಾಗಿದೆ. ಏಕೆಂದರೆ ದೇಹದ ಈ ಭಾಗದಲ್ಲಿ ಶೇಖರಣೆಯಾದ ಕೊಬ್ಬು ಸುಲಭವಾಗಿ ಕಡಿಮೆಯಾಗುವುದಿಲ್ಲ. ಆದರೆ, ಕೆಲವು ಆರೋಗ್ಯಕರ ಅಭ್ಯಾಸಗಳ ಸಹಾಯದಿಂದ, ನಿಮ್ಮ ಚಾಚಿಕೊಂಡಿರುವ ಹೊಟ್ಟೆಯನ್ನು ನೀವು ಸುಲಭವಾಗಿ ಕಡಿಮೆ ಮಾಡಬಹುದು. ಅಂತಹ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಇಂದು ನಾವು ನಿಮಗೆ ಹೇಳುತ್ತಿದ್ದು, ಪ್ರತಿದಿನ ಬೆಳಗ್ಗೆ ಅವುಗಳನ್ನು ಪುನರಾವರ್ತಿಸಿದರೆ, ಹೊರಕ್ಕೆ ಚಾಚಿಕೊಂಡಿರುವ ಹೊಟ್ಟೆ ಕೆಲವೇ ದಿನಗಳಲ್ಲಿ ನಿವಾರಣೆಯಾಗಲಿದೆ. (Lifestyle News In Kannada)


COMMERCIAL BREAK
SCROLL TO CONTINUE READING

ಪ್ರತಿದಿನ ತೂಕವನ್ನು ಪರಿಶೀಲಿಸಿ
ನಿಮ್ಮ ತೂಕವನ್ನು ನಿಯಮಿತವಾಗಿ ಪರಿಶೀಲಿಸಿ. ಇದು ತೂಕದಲ್ಲಿನ ಏರಿಳಿತಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಇದರೊಂದಿಗೆ ನಿಮ್ಮ ತೂಕ ಇಳಿಕೆಗೆ ಸರಿಯಾಗಿ ಯೋಜನೆ ರೂಪಿಸಲು ನಿಮಗೆ ಸಾಧ್ಯವಾಗುತ್ತದೆ.


ದೈಹಿಕವಾಗಿ ಸಕ್ರಿಯರಾಗಿರಿ
ಬೆಳಗ್ಗೆ ಸ್ವಲ್ಪ ವ್ಯಾಯಾಮ ಮತ್ತು ಓಟವನ್ನು ಮಾಡಿ. ಬೆಳಗ್ಗೆ ಓಡುವುದರಿಂದ ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆಯಾಗುತ್ತದೆ.


ಎಚ್ಚರಿಕೆಯಿಂದ ತಿನ್ನಿರಿ
ಹೆಚ್ಚಿದ ತೂಕ ಮತ್ತು ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ನಿಮ್ಮ ಆಹಾರಕ್ರಮದ ಕಡೆಗೆ ನೀವು ಗಮನ ಹಾರಿಸಬೇಕು. ಹೊಟ್ಟೆ ಮತ್ತು ಸೊಂಟದ ಸುತ್ತ ಕೊಬ್ಬಿನ ಶೇಖರಣೆಯ ಅಪಾಯವನ್ನು ಹೆಚ್ಚಿಸುವ ಅಂತಹ ವಸ್ತುಗಳನ್ನು ಸೇವಿಸಬೇಡಿ. ಹಾಗೆಯೇ ಆಹಾರ ಸೇವಿಸುವಾಗ ಅಗತ್ಯಕ್ಕಿಂತ ಹೆಚ್ಚಿಗೆ ಏನನ್ನೂ ಸೇವಿಸುತಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ, ಸೀಮಿತ ಪ್ರಮಾಣದಲ್ಲಿ ತಿನ್ನಿರಿ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.


ಹೈಡ್ರೇಟೆಡ್ ಆಗಿರಿ
ಬೆಳಗ್ಗೆ ಎದ್ದ ನಂತರ ಸಾಕಷ್ಟು ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ದೇಹದ ಮೆಟಬಾಲಿಕ್ ರೇಟ್ ಹೆಚ್ಚುತ್ತದೆ ಮತ್ತು ನಿಮ್ಮ ತೂಕ ಇಳಿಕೆಯೂ ವೇಗವಾಗಿ ಆಗುತ್ತದೆ.


ಇದನ್ನೂ ಓದಿ-Bad Cholesterol: ಈ ಕೆಂಪು ತರಕಾರಿಯ ಜೂಸ್ ರಕ್ತ ನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕ್ಷಣಾರ್ಧದಲ್ಲಿ ಹೊರಹಾಕುತ್ತೆ!


ಹೆಚ್ಚಿನ ಪ್ರೋಟೀನ್ ಉಪಹಾರವನ್ನು ಸೇವಿಸಿ
ಬೆಳಗ್ಗೆ ಆರೋಗ್ಯಕರ, ದೀರ್ಘ ಕಾಲ ಹೊಟ್ಟೆ ತುಂಬಿದ ಅನುಭವ ನೀಡುವ ಮತ್ತು ಪ್ರೋಟೀನ್-ಭರಿತ ಉಪಹಾರವನ್ನು ಸೇವಿಸುವ ಜನರು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ ಮತ್ತು ಅದು ಅವರ ಹೊಟ್ಟೆಯ ಕೊಬ್ಬನ್ನು ಸಹ ಕಡಿಮೆ ಮಾಡುತ್ತಾರೆ ಎಂದು ಅನೇಕ ಅಧ್ಯಯನಗಳಲ್ಲಿ ಕಂಡುಬಂದಿದೆ.


ಇದನ್ನೂ ಓದಿ-Taming Diabetes: ಹಳದಿ ಸಿಪ್ಪೆಯ ಈ ಐದು ಹಣ್ಣುಗಳು ಮಧುಮೇಹ ನಿಯಂತ್ರಣದಲ್ಲಿಡುತ್ತವೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ