Weight Loss Tips: ಜಿಮ್ ಗೆ ಹೋಗದೆ ತೂಕ ಇಳಿಸಿಕೊಳ್ಳಬೇಕೆ? ನಿತ್ಯ ಬೆಳಗ್ಗೆ ಈ ಕೆಲಸ ಮಾಡಿ ಸಾಕು!
Weight Loss Healty Practices: ಜಿಮ್ ಗೆ ಹೋಗದೆ ನೀವೂ ಕೂಡ ವೇಗವಾಗಿ ನಿಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಬೆಳಗ್ಗೆ ಕೆಲ ಕೆಲಸಗಳನ್ನು ಮಾಡಲು ಇಂದಿನಿಂದಲೇ ಪ್ರಾರಂಭಿಸಿ. ಇದು ಬೊಜ್ಜು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಬನ್ನಿ, ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ (Lifestyle News In Kannada)
Healthy Practices For Weight Loss: ಇತ್ತೀಚಿಗೆ ಬೊಜ್ಜು ಒಂದು ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಹೆಚ್ಚುತ್ತಿರುವ ತೂಕದಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಸ್ಥೂಲಕಾಯತೆಯಿಂದ ನಮ್ಮ ಲುಕ್ ಹಾಳಾಗುವುದು ಮಾತ್ರವಲ್ಲದೆ, ಮಧುಮೇಹ, ಥೈರಾಯ್ಡ್, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಜನರು ತೂಕವನ್ನು ಕಳೆದುಕೊಳ್ಳಲು ಹಲವು ರೀತಿಯ ಕ್ರಮಗಳನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಅನೇಕ ಜನರು ಡಯಟ್‌ನಿಂದ ಹಿಡಿದು ಜಿಮ್‌ನಲ್ಲಿ ಗಂಟೆಗಟ್ಟಲೆ ವರ್ಕ್‌ಔಟ್ ಮಾಡುವವರೆಗೆ ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಇಷ್ಟು ಕಷ್ಟಪಟ್ಟರೂ ತೂಕ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ನೀವೂ ಕೂಡ ತೂಕವನ್ನು ಕಳೆದುಕೊಳ್ಳಲು ಎಲ್ಲವನ್ನೂ ಪ್ರಯತ್ನಿಸಿ ಸುಸ್ತಾಗಿದ್ದರೆ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಹೊರತಾಗಿ, ನಿಮ್ಮ ಜೀವನಶೈಲಿಯಲ್ಲಿಯೂ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ತೂಕವನ್ನು ಕಳೆದುಕೊಳ್ಳಲು ನೀವು ಆರೋಗ್ಯಕರ ಬೆಳಗಿನ ದಿನಚರಿಯನ್ನು ಅನುಸರಿಸಬೇಕು. ಈ ಲೇಖನದಲ್ಲಿ ನಾವು ನಿಮಗೆ ಅಂತಹ ಕೆಲವು ಬೆಳಗಿನ ಅಭ್ಯಾಸಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತವೆ.(Lifestyle News In Kannada)
ಬೆಳಗ್ಗೆ ಎದ್ದಾಕ್ಷಣ ನೀರು ಕುಡಿಯಿರಿ
ತೂಕ ಇಳಿಕೆಗೆ ದೇಹ ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ. ನೀವು ಬೆಳಗ್ಗೆ ಎದ್ದಾಕ್ಷಣ 1-2 ಗ್ಲಾಸ್ ಉಗುರು ಬೆಚ್ಚಗಿನ ನೀರು ಅಥವಾ ರೂಮ್ ಟೆಂಪರೇಚರ್ ನಲ್ಲಿರುವ ನೀರನ್ನು ಕುಡಿಯಬೇಕು. ನೀವು ಬೇಕಾದರೆ, ನೀವು ಉಗುರು ಬೆಚ್ಚಗಿನ ನಿಂಬೆ ನೀರನ್ನು ಸಹ ಸೇವಿಸಬಹುದು. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಬೆಳಗ್ಗೆ ನೀರು ಕುಡಿಯುವುದು ಚಯಾಪಚಯ ದರವನ್ನು ಹೆಚ್ಚಿಸುತ್ತದೆ, ಇದು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತುಕೊಳ್ಳಿ
ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಸಂಗತಿಯಾಗಿದೆ. ಮುಂಜಾವಿನಲ್ಲಿ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದು ದೇಹಕ್ಕೆ ವಿಟಮಿನ್ ಡಿ ಅನ್ನು ಒದಗಿಸುತ್ತದೆ, ಇದು ತೂಕವನ್ನು ಕಳೆದುಕೊಳ್ಳಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯುವುದು ಕೇವಲ ತೂಕ ಇಳಿಕೆ ಅಷ್ಟೇ ಅಲ್ಲ, ಅನೇಕ ರೋಗಗಳನ್ನು ಕೂಡ ಗುಣಪಡಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.
ವ್ಯಾಯಾಮ ಮಾಡಿ
ಬೆಳಗ್ಗೆ ಎದ್ದ ನಂತರ ವ್ಯಾಯಾಮ ಮಾಡುವುದು ತೂಕ ಇಳಿಕೆಯ ಉತ್ತಮ ಅಭ್ಯಾಸಗಳಲ್ಲಿ ಒಂದಾಗಿದೆ. ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದಲ್ಲದೆ, ಮುಂಜಾವಿನ ವ್ಯಾಯಾಮವು ಚಯಾಪಚಯ ದರವನ್ನು ಸುಧಾರಿಸುತ್ತದೆ, ಇದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Work Place Health Tips: ನೀವೂ ವರ್ಕ್ ಪ್ಲೇಸ್ ನಲ್ಲಿ ಸತತ ಕೆಲಸ ಮಾಡುತ್ತೀರಾ? ಈ ಸಲಹೆ ಅನುಸರಿಸಿ!
ಆರೋಗ್ಯಕರ ಉಪಹಾರ ಸೇವಿಸಿ
ಬೆಳಗಿನ ತಿಂಡಿ ದಿನದ ಪ್ರಮುಖ ಅಂಶವಾಗಿದೆ. ಬೆಳಗ್ಗಿನ ತಿಂಡಿಗೆ ನಾವು ಏನು ತಿಂದರೂ, ಕುಡಿದರೂ ದಿನವಿಡೀ ದೇಹಕ್ಕೆ ಬೇಕಾಗುವ ಶಕ್ತಿಯನ್ನು ನೀಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಪ್ರೋಟೀನ್ ಮತ್ತು ಫೈಬರ್ ಭರಿತ ಉಪಹಾರವನ್ನು ಸೇವಿಸಬೇಕು. ವಾಸ್ತವದಲ್ಲಿ, ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ, ಹೀಗಾಗಿ ಅದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ನಿಮ್ಮ ಬೆಳಗಿನ ಉಪಾಹಾರದಲ್ಲಿ ನೀವು ಮೊಟ್ಟೆ, ಚೀಸ್, ಮೊಳಕೆಯೊಡೆದ ಕಾಳುಗಳು, ಮೊಸರು, ಸ್ಮೂಥಿ, ಸಲಾಡ್, ಚೀಸ್ ಮತ್ತು ಸೀಡ್ಸ್ ಗಳನ್ನು ಸೇರಿಸಿಕೊಳ್ಳಬಹುದು.
(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ