ನವದೆಹಲಿ: ಈ ಬಾರಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನದಂದು ಆಚರಿಸುವ ಅಕ್ಷಯ ತೃತೀಯ ದಿನಾಂಕದ ಬಗ್ಗೆ ಜನರಲ್ಲಿ ಗೊಂದಲವಿದೆ. ಅಕ್ಷಯ ತೃತೀಯವನ್ನು ಏಪ್ರಿಲ್ 22ರಂದು ಆಚರಿಸಲಾಗುತ್ತದೆಯೇ ಅಥವಾ ಏಪ್ರಿಲ್ 23ರಂದು ಆಚರಿಸಲಾಗುತ್ತದೆಯೇ ಎಂಬ ಗೊಂದಲ ಜನರ ಮನಸ್ಸಿನಲ್ಲಿದೆ. ಅಕ್ಷಯ ತೃತೀಯ ಆಚರಿಸಲು ಸರಿಯಾದ ದಿನಾಂಕ ಯಾವುದು ಮತ್ತು ಚಿನ್ನ ಖರೀದಿಸಲು ಶುಭ ಸಮಯ ಯಾವುದು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಅಕ್ಷಯ ತೃತೀಯ 2023 ಯಾವಾಗ?


ಹಿಂದೂ ಕ್ಯಾಲೆಂಡರ್ ಪ್ರಕಾರ ಅಕ್ಷಯ ತೃತೀಯ ಅಂದರೆ ವೈಶಾಖ ಶುಕ್ಲ ತೃತೀಯ ತಿಥಿಯು ಏಪ್ರಿಲ್ 22ರಂದು ಬೆಳಗ್ಗೆ 7:49ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 23ರ ಬೆಳಗ್ಗೆ 7:47ರವರೆಗೆ ಇರುತ್ತದೆ. ಉದಯತಿಥಿಯ ಪ್ರಕಾರ ಏಪ್ರಿಲ್ 22ರಂದು ಅಕ್ಷಯ ತೃತೀಯ ಆಚರಿಸಲಾಗುತ್ತದೆ. ಅಂದು ಇಡೀ ದಿನ ತೃತೀಯ ತಿಥಿ ಇರುತ್ತದೆ.


ಇದನ್ನೂ ಓದಿ: Akshaya Tritiya 2023: ಆರು ಶುಭ ಮಹಾಯೋಗಗಳ ನಿರ್ಮಾಣ, ಮಹತ್ವ ಆರು ನೂರು ಪಟ್ಟು ಹೆಚ್ಚು, ಇಲ್ಲಿದೆ ಕಂಪ್ಲೇಟ್ ಮಾಹಿತಿ!


ಚಿನ್ನ ಖರೀದಿಸಲು ಶುಭ ಸಮಯ


ಏಪ್ರಿಲ್ 22ರಂದು ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಲು ಶುಭ ಮುಹೂರ್ತವು ಬೆಳಗ್ಗೆ 7:49ರಿಂದ ಪ್ರಾರಂಭವಾಗಲಿದೆ ಮತ್ತು ಇಡೀ ದಿನ ಚಿನ್ನ-ಬೆಳ್ಳಿ, ಗೃಹ-ವಾಹನ ಖರೀದಿಸಲು ಶುಭ ಸಮಯವಾಗಿರುತ್ತದೆ. ಅದೇ ರೀತಿ ಏಪ್ರಿಲ್ 23ರ ಬೆಳಗ್ಗೆ 5:48ರವರೆಗೆ ಚಿನ್ನ ಖರೀದಿಸಲು ಮಂಗಳಕರ ಸಮಯವಿರುತ್ತದೆ.


ಚಿನ್ನ ಖರೀದಿಸುವುದು ಶುಭ ಏಕೆ?


ಅಕ್ಷಯ ತೃತೀಯ ದಿನದಂದು ಮಾಡುವ ಕೆಲಸವು ಶಾಶ್ವತ ಫಲಿತಾಂಶ ನೀಡುತ್ತದೆ, ಆದ್ದರಿಂದ ಈ ದಿನ ಶುಭ ಕಾರ್ಯ ಮಾಡಲಾಗುತ್ತದೆ. ಹೀಗಾಗಿಯೇ ಚಿನ್ನ ಖರೀದಿ, ಮನೆ-ಕಾರು ಖರೀದಿ, ಹೊಸ ಕೆಲಸ ಆರಂಭಿಸುವುದು ಶುಭಕರವೆಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಅವರು ಸಂತೋಷ ಮತ್ತು ಸಮೃದ್ಧಿ ನೀಡುತ್ತಾರೆ. ಅಕ್ಷಯ ತೃತೀಯ ದಿನವು ಧನಲಕ್ಷ್ಮಿಯನ್ನು ಪ್ರಸನ್ನಗೊಳಿಸುವ ದಿನವಾಗಿದೆ. ಅಕ್ಷಯ ತೃತೀಯ ದಿನದಂದು ಪಡೆದ ಹಣ ಅಥವಾ ಚಿನ್ನವು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದು ನಂಬಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಹೊರತಾಗಿ ಅಕ್ಷಯ ತೃತೀಯ ದಿನದಂದು ಬಾರ್ಲಿಯನ್ನು ಖರೀದಿಸುವುದು ತುಂಬಾ ಮಂಗಳಕರ.


ಇದನ್ನೂ ಓದಿ: Chanakya Niti: ಲಕ್ಷ್ಮಿದೇವಿಯ ಆಶೀರ್ವಾದ ಬೇಕಾದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿರಿ


ಅಕ್ಷಯ ತೃತೀಯದಲ್ಲಿ ಪಂಚಗ್ರಾಹಿ ಯೋಗ


ಈ ಬಾರಿಯ ಅಕ್ಷಯ ತೃತೀಯ ದಿನದಂದು ಸಂತೋಷ, ಅದೃಷ್ಟ ಮತ್ತು ದಾಂಪತ್ಯ ಸುಖ ನೀಡುವ ಗುರು ಮೇಷ ರಾಶಿಯಲ್ಲಿ ಸಾಗುತ್ತಿದೆ. 12 ವರ್ಷಗಳ ನಂತರ ಮೇಷ ರಾಶಿಗೆ ಗುರುವಿನ ಪ್ರವೇಶವು ಮೇಷ ರಾಶಿಯಲ್ಲಿ ಪಂಚಗ್ರಾಹಿ ಯೋಗವನ್ನು ಉಂಟುಮಾಡುತ್ತದೆ, ಇದು ತುಂಬಾ ಶುಭಕರವಾಗಿದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.