ನವದೆಹಲಿ: ಧನತ್ರಯೋದಶಿ ಅಥವಾ ಧನ್ವಂತರಿ ತ್ರಯೋದಶಿ ಎಂದೂ ಕರೆಯಲ್ಪಡುವ ದಂತೇರಸ್ ದೀಪಾವಳಿ ಹಬ್ಬದ ಮೊದಲ ದಿನವಾಗಿದೆ. ಈ ವರ್ಷ ಧಂತೇರಸ್ (Dhanteras) ಹಬ್ಬವನ್ನು ನವೆಂಬರ್ 13 ರಂದು ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಜನರು ಹೊಸ ಪಾತ್ರೆಗಳು ಮತ್ತು ಚಿನ್ನ (Gold) ಬೆಳ್ಳಿಯ ಆಭರಣಗಳನ್ನು ಖರೀದಿಸುವುದರಿಂದ ಅವರ ಜೀವನದಲ್ಲಿ ಅದೃಷ್ಟ ಬರುತ್ತದೆ ಎಂದು ನಂಬುತ್ತಾರೆ.  ಈ ದಿನದಂದು ಏನೇ ಖರೀದಿಸಿದರು ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. 


COMMERCIAL BREAK
SCROLL TO CONTINUE READING

ಧನ್ ಎಂಬ ಪದವು ಸಂಪತ್ತನ್ನು ಪ್ರತಿನಿಧಿಸುತ್ತದೆ ಮತ್ತು ಈ ದಿನ ಹಿಂದೂಗಳು ಸಂಪತ್ತಿನ ದೇವರು ಮತ್ತು ದೇವತೆ, ಭಗವಾನ್ ಕುಬೇರ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.


Dhanteras 2020: ಪೂಜೆ ಹಾಗೂ ಖರೀದಿಯ ಶುಭ ಮುಹೂರ್ತ, ಈ ದಿನ ದಾನಕ್ಕು ವಿಶೇಷ ಮಹತ್ವ


Dhanteras 2020: ಧನತ್ರಯೋದಶಿಯಲ್ಲಿ ವಸ್ತುಗಳನ್ನು ಖರೀದಿಸುವುದು ಶುಭವಾಗಿದ್ದರೂ ಜ್ಯೋತಿಷಿಗಳ ಪ್ರಕಾರ ಈ ದಿನದಲ್ಲಿ ಕೆಲವು ವಸ್ತುಗಳನ್ನು ಖರೀದಿಸಲೇಬಾರದು.


ಈ ಬಾರಿಯ ಧನತ್ರಯೋದಶಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಖರೀದಿ ಮಾಡಿ, ಸಿಗಲಿದೆ ಶುಭ ಲಾಭ


  • ಧನತ್ರಯೋದಶಿ ದಿನದಂದು ಅನೇಕ ಜನರು ಉಕ್ಕಿನ ಪಾತ್ರೆಗಳನ್ನು ಮನೆಗೆ ಖರೀದಿಸುತ್ತಾರೆ. ಸ್ಟೀಲ್ ಲೋಹವಲ್ಲ ಮತ್ತು ರಾಹು ಇದರ ಮೇಲೆ ಹೆಚ್ಚು ಪ್ರಭಾವ ಬೀರುತ್ತಾನೆ. ಆದ್ದರಿಂದ ಇದನ್ನು ತಪ್ಪಿಸಬೇಕು. ನೈಸರ್ಗಿಕ ಲೋಹಗಳನ್ನು ಮಾತ್ರ ಖರೀದಿಸಬೇಕು. 

  • ಅಲ್ಯೂಮಿನಿಯಂನಿಂದ ಮಾಡಿದ ಯಾವುದೇ ವಸ್ತುಗಳನ್ನು ಕೆಟ್ಟ ಅದೃಷ್ಟದ ಸೂಚಕವಾಗಿ ಪರಿಗಣಿಸುವುದರಿಂದ ಧನತ್ರಯೋದಶಿ ದಿನ ಅಲ್ಯೂಮಿನಿಯಂ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು.

  • ಧಂತೇರಾಸ್‌ನಲ್ಲಿ ಯಾವುದೇ ತೀಕ್ಷ್ಣವಾದ ವಸ್ತುಗಳನ್ನು ಖರೀದಿಸುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಚಾಕು, ಕತ್ತರಿ ಅಥವಾ ಯಾವುದೇ ತೀಕ್ಷ್ಣವಾದ ಆಯುಧವನ್ನು ಧನತ್ರಯೋದಶಿಯಲ್ಲಿ ಖರೀದಿಸಬೇಡಿ.

  • ಯಾವುದೇ ಅದೃಷ್ಟವನ್ನು ತರದ ಕಾರಣ ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುಗಳನ್ನು ಈ ದಿನ ಮನೆಗೆ ತರುವುದನ್ನು ತಪ್ಪಿಸಿ

  • ಯಾವುದೇ ರೀತಿಯ ಕಪ್ಪು ವಸ್ತುವನ್ನು ಮನೆಗೆ ತರಬೇಡಿ. ಜ್ಯೋತಿಷಿಗಳ ಪ್ರಕಾರ ಧನತ್ರಯೋದಶಿಯಂದು ಕಪ್ಪು ದುರದೃಷ್ಟವನ್ನು ತರುತ್ತದೆ.

  • ಧಂತೇರಸ್ ದಿನದಂದು ನೀವು ಎಣ್ಣೆ ಅಥವಾ ತುಪ್ಪದಂತಹ ವಸ್ತುಗಳನ್ನು ಖರೀದಿಸಲು ಹೋದರೆ, ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಇವುಗಳಲ್ಲಿ ಕಲಬೆರಕೆ ಮಾಡಬಹುದಾದ ಸಾಧ್ಯತೆ ಇರುವುದರಿಂದ ಧನತ್ರಯೋದಶಿ ದಿನ ಅಶುದ್ಧ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.