How to Solve Matters between Your Mother & Wife?: ʼಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೊಳ ಮರಿಬೇಡ.. ಆಟೋ ಲಾರಿ ಹಿಂದೆ ಬರೆದೊನೆ, ತತ್ವಜ್ಞಾನಿ ಅಂತಾ ತಿಳಿಬೇಡ.. ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ ಬಾಳಿಲ್ಲ...ʼ ಅನ್ನೋ ಹಾಡನ್ನ ನೀವು ಕೇಳಿಯೇ ಇರ್ತೀರಿ. ಇಂದು ಬಹುತೇಕ ಮನೆಗಳಲ್ಲಿ ಅತ್ತೆ-ಸೊಸೆ ಜಗಳ ಕಾಮನ್‌ ಆಗಿದೆ. ಆದರೆ ಇವರಿಬ್ಬರ ಜಗಳದಲ್ಲಿ ಬಲಿಪಶುವಾಗುತ್ತಿರುವುದು ಮಾತ್ರ ಗಂಡುಮಕ್ಕಳು. ಅತ್ತ ತಾಯಿಯನ್ನೂ ಬಿಟ್ಟುಕೊಡದೇ, ಇತ್ತ ಹೆಂಡತಿಯನ್ನೂ ಬಿಟ್ಟುಕೊಡದೆ ಅಡಕತ್ತರಿಯಲ್ಲಿ ಸಿಲುಕಿ ನಲುಗಿ ಹೋಗಿರುತ್ತಾರೆ. ಒಂದು ವೇಳೆ ಹೆಂಡತಿ ನಿಮ್ಮ ತಾಯಿಯನ್ನ ಹೊರಗೆ ಹಾಕಲು ಹೇಳಿದಾಗ ನೀವು ಏನು ಮಾಡಬೇಕು..? ಈ ಪ್ರಶ್ನೆ ನಿಮಗೆ ಕಸಿವಿಸಿ ಎನಿಸಿದರೂ ಇಂದು ಅನೇಕರಿಗೆ ಇದಕ್ಕೆ ಉತ್ತರ ಬೇಕಿರುತ್ತದೆ. ಆ ಉತ್ತರ ಸಿಗದೆ ಅವರು ಪರಿತಪಿಸುತ್ತಿರುತ್ತಾರೆ. 


COMMERCIAL BREAK
SCROLL TO CONTINUE READING

ಒಂದು ವೇಳೆ ಹೆಂಡತಿ ನಿಮ್ಮ ತಾಯಿಯ ವಿರುದ್ಧ ತಿರುಗಿ ನಿಂತರೆ, ನೀವು ಹೆಂಡತಿ ಪರವಾಗಿಯೂ ಮಾತನಾಡಲು ಸಾಧ್ಯವಿಲ್ಲ, ತಾಯಿಯನ್ನ ಬಿಟ್ಟುಕೊಡಲು ಸಾಧ್ಯವಿಲ್ಲ. ನಿಮಗೆ ಸಾಧ್ಯವಾದರೆ ನಿಮ್ಮ ತಂದೆ-ತಾಯಿಯನ್ನು ಒಂದು ಮನೆಯಲ್ಲಿರಿಸಿ, ನೀವು ನಿಮ್ಮ ಹೆಂಡತಿ ಬೇರೆ ಮನೆಯಲ್ಲಿರಬಹುದು. ನಿಮ್ಮ ತಂದೆ-ತಾಯಿಗೆ ಊಟ, ವೆಚ್ಚಗಳ ವ್ಯವಸ್ಥೆ ಮಾಡಿಕೊಟ್ಟು ಆದಷ್ಟು ಅವರು ನೆಮ್ಮದಿಯಾಗಿರಲು ಅಣು ಮಾಡಿಕೊಡಿ. ನಾವು ಜಗತ್ತಿನಲ್ಲಿ ಏನನ್ನು ಬೇಕಾದರೂ ಸಂಪಾದನೆ ಮಾಡಬಹುದು. ಆದರೆ ಹೊಸ ತಂದೆ-ತಾಯಿ ಅಥವಾ ಅವರ ಪ್ರೀತಿಯನ್ನು ಸಂಪಾದನೆ ಮಾಡಲು ಸಾಧ್ಯವಿಲ್ಲ.


ಇದನ್ನೂ ಓದಿ: ಮನೆಯ ಮುಖ್ಯ ದ್ವಾರದಲ್ಲಿ ಈ 5 ವಸ್ತುಗಳನ್ನು ಇಡಬೇಡಿ, ಅವು ನಿಮ್ಮ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ


ಈ ರೀತಿ ಬೇರೆ ವ್ಯವಸ್ಥೆ ಸಾಧ್ಯವಾಗದಿದ್ದರೆ ನೀವು ನಿಮ್ಮ ತಂದೆ-ತಾಯಿಯನ್ನು ಅವರ ಕೊನೆಗಾಲದಲ್ಲಿ ಸರಿಯಾಗಿ ನೋಡಿಕೊಳ್ಳಲೇಬೇಕಾದ್ದು ನಿಮ್ಮ ಕರ್ತವ್ಯ. ಈಗಿನ ಕಾಲದ ಹೆಣ್ಣು ಮಕ್ಕಳಿಗೆ ತಂದೆ-ತಾಯಿ ಇಲ್ಲದ ವರ ಬೇಕೆಂದು ಕೇಳುವವರು, ನಿಮ್ಮ ತಂದೆ-ತಾಯಿಯ ಬಗ್ಗೆ ಒಲವು ತೋರುವವರು ಸಿಗುವುದೇ ಕಷ್ಟವಾಗಿದೆ. ಆದ್ದರಿಂದ ಮದುವೆ ಆಗುವ ಮುನ್ನವೇ ಇದನ್ನೆಲ್ಲವನ್ನೂ ಅರಿತು, ಕುಳಿತು ಮಾತಾಡಿ ಆಮೇಲೆ ಮದುವೆ ಆಗುವುದು ಒಳಿತು.


ಆದರೆ ಹೆಂಡತಿಯನ್ನು ಬಿಟ್ಟುಕೊಡಲಾಗುವುದಿಲ್ಲ, ತಂದೆ-ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂತಾದರೆ, ಕೆಲವಷ್ಟು ದಿನ ನಿಮ್ಮ ಊರಿನಲ್ಲಿ, ಇಬ್ಬರಿಂದಲೂ ದೂರ ಇರಬೇಕಾಗುತ್ತದೆ. ನಿಮ್ಮ ಹೆಂಡತಿ ಹಾಗೂ ತಾಯಿಯವರ ವೈಮನಸ್ಯ ಜಾಸ್ತಿಯಾದರೆ ಕೊನೆಗೆ ಇಬ್ಬರನ್ನು ಕೂಡಿಸಿ, ಇಬ್ಬರಿಗೂ ಸಂತೋಷವಾಗುವಂತೆ ಒಂದು ಒಪ್ಪಂದಕ್ಕೆ ನೀವು ಬರಬೇಕು. ಯಾವಾಗಲೂ ತಿಳಿದುಕೊಳ್ಳಿ ಗಂಡಸರು ಮನೆಯ ತಕ್ಕಡಿ ತೂಗುವ ವ್ಯಾಪಾರಿಯ ತರ. ಕೆಲವು ಬಾರಿ ತಕ್ಕಡಿ ತಾಯಿಯ ಕಡೆ, ಕೆಲವು ಬಾರಿ ತಕ್ಕಡಿ ಹೆಂಡತಿಯ ಕಡೆ ವಾಲುತ್ತದೆ. ಆದರೆ ಎರಡು ಬದಿಗಳಲ್ಲಿ ಸರಿಯಾದ ತೂಕ ಇರುವಂತೆ ನೋಡಿಕೊಳ್ಳುವುದೇ ಗಂಡಸರ ಕೆಲಸ.


ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನದಿಂದ ಈ 3 ರಾಶಿಗಳಿಗೆ ಇರಲಿದೆ ಅದ್ಭುತ ಯಶಸ್ಸಿನ ಯೋಗ..!


ಮಾತಿನಿಂದ ಬಗೆಹರಿಯದ್ದು ಈ ಜಗತ್ತಿನಲ್ಲಿ ಏನೂ ಇಲ್ಲ. ಆದ್ದರಿಂದ ನಿಮ್ಮ ಬುದ್ಧಿ, ಚಾಕಚಕ್ಯತೆಯನ್ನ ಉಪಯೋಗಿಸಿ ನಿಮ್ಮ ತಾಯಿ ಹಾಗೂ ಹೆಂಡತಿಯನ್ನು ಜೊತೆಯಲ್ಲಿಟ್ಟುಕೊಳ್ಳುವುದು ನಿಮ್ಮ ಕೈಯಲ್ಲೇ ಇರುತ್ತದೆ. ಒಂದು ಅಣುವಿನಲ್ಲಿ ಬಾಂಡಿಂಗ್ ಫೋರ್ಸ್ ಇಲ್ಲದೆ ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಜೊತೆ ಇರಲು ಸಾಧ್ಯವಿಲ್ಲ. ಅದೇ ರೀತಿ ನಿಮ್ಮ ಬದುಕಿನಲ್ಲಿ ಆ ಬಾಂಡಿಂಗ್ ಫೋರ್ಸ್ ಇರಬೇಕು. ಗಂಡಸರಾದ ನೀವು ಎಲ್ಲರ ಜೊತೆ ಹೇಗೆ ಇಡುತ್ತೀರಿ ಎನ್ನುವುದು ಅರಿತು ನಂತರ ಮದುವೆ ಆಗುವುದು ಎಲ್ಲರಿಗೂ ಒಳ್ಳೆಯದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.