cracked lips remedy: ಚಳಿಗಾಲದಲ್ಲಿ ಹಿಮ್ಮಡಿ ಅಷ್ಟೇ ಅಲ್ಲ.. ತುಟಿಗಳೂ ಒಡೆದು ಹೋಗುತ್ತವೆ. ಹಿಮ್ಮಡಿಗಳಂತೆ, ತುಟಿಗಳು ಕೆಟ್ಟದಾಗಿ ಬಿರುಕು ಬಿಟ್ಟರೆ ರಕ್ತಸ್ರಾವವಾಗುತ್ತದೆ. ಆದರೆ ನೀವು ಕೆಲವು ಸಲಹೆಗಳನ್ನು ಅನುಸರಿಸಿದರೆ, ಚಳಿಗಾಲದಲ್ಲಿಯೂ ತುಟಿಗಳು ಒಡೆಯುವುದನ್ನು ತಡೆಯಬಹುದು. ಒಡೆದ ತುಟಿಗಳು ಬೇಗನೆ ಗುಣವಾಗುತ್ತವೆ.


COMMERCIAL BREAK
SCROLL TO CONTINUE READING

ಚಳಿಗಾಲದಲ್ಲಿ ತುಟಿಗಳು ಒಡಯುವುದು ದೊಡ್ಡ ಸಮಸ್ಯೆಯಾಗಿದೆ. ತುಟಿಗಳು ಉರಿಯುತ್ತವೆ. ಇದರಿಂದ ಎಲ್ಲರಿಗೂ ಅನಾನುಕೂಲವಾಗುತ್ತದೆ. ಚಳಿಗಾಲದಲ್ಲಿ ತುಟಿಗಳು ಒಡೆದುಹೋಗುವುದರಿಂದ, ಕೆಲವೊಮ್ಮೆ ಅವುಗಳಿಂದ ರಕ್ತವೂ ಒಸರುತ್ತದೆ. ಇದು ತುಂಬಾ ನೋವನ್ನು ಉಂಟುಮಾಡುತ್ತದೆ. ಆದರೆ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಚಳಿಗಾಲದಲ್ಲಿಯೂ ತುಟಿಗಳು ಬಿರುಕು ಬಿಡುವುದಿಲ್ಲ.  


ಇದನ್ನೂ ಓದಿ: ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿಸಲು ಸುರಕ್ಷಿತವಾದ ಮನೆ ಮದ್ದು ಎಂದರೆ ಇದೊಂದೇ ಮಸಾಲೆ !


ತೆಂಗಿನ ಎಣ್ಣೆ ಮತ್ತು ಜೇನುತುಪ್ಪ:


ತೆಂಗಿನೆಣ್ಣೆ ಮತ್ತು ಜೇನುತುಪ್ಪವನ್ನು ಬಳಸುವುದರಿಂದ ಚಳಿಗಾಲದಲ್ಲಿ ತುಟಿಗಳು ಒಡೆಯುವುದನ್ನು ತಡೆಯಬಹುದು. ಇದಕ್ಕಾಗಿ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಒಂದು ಚಮಚ ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿ ಮಲಗುವ ಮುನ್ನ ಇದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಮರುದಿನ ಬೆಳಿಗ್ಗೆ ನೀರಿನಿಂದ ತುಟಿಗಳನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತುಟಿಗಳಲ್ಲಿನ ಬಿರುಕುಗಳು ಕಡಿಮೆಯಾಗುತ್ತವೆ ಮತ್ತು ಅವು ಮೃದುವಾಗುತ್ತವೆ.


ಅಲೋವೆರಾ ತಿರುಳು:


ಒಡೆದ ತುಟಿಗಳನ್ನು ಗುಣಪಡಿಸಲು ಅಲೋವೆರಾ ಜೆಲ್ ಒಳ್ಳೆಯದು. ಇದಕ್ಕಾಗಿ ತಾಜಾ ಅಲೋವೆರಾ ತಿರುಳನ್ನು ತೆಗೆದುಕೊಂಡು ಅದನ್ನು ತುಟಿಗಳ ಮೇಲೆ ಹಚ್ಚಿ. 10 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತುಟಿಗಳನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ತೇವಾಂಶದಿಂದ ಕೂಡಿರುತ್ತವೆ. 


ಸೌತೆಕಾಯಿ


ಸೌತೆಕಾಯಿಯು ಒಣ ತುಟಿಗಳಿಗೆ ತೇವಾಂಶವನ್ನು ನೀಡುತ್ತದೆ. ನಿಮ್ಮ ತುಟಿಗಳು ಬಿರುಕು ಬಿಟ್ಟಿದ್ದರೆ, ಸೌತೆಕಾಯಿಯ ತುಂಡನ್ನು ತೆಗೆದುಕೊಂಡು ಅದನ್ನು ನಿಮ್ಮ ತುಟಿಗಳ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ಇದರಿಂದ ನಿಮ್ಮ ತುಟಿಗಳು ಮೃದುವಾಗುತ್ತದೆ.


ತುಪ್ಪ:


ಒಡೆದ ತುಟಿಗಳನ್ನು ಗುಣಪಡಿಸುವಲ್ಲಿ ತುಪ್ಪವು ತುಂಬಾ ಪರಿಣಾಮಕಾರಿಯಾಗಿದೆ. ತುಪ್ಪವು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಕೋಶಗಳಿಗೆ ತೇವಾಂಶವನ್ನು ಒದಗಿಸುತ್ತವೆ. ಒಡೆದ ತುಟಿಗಳಿಗೆ ತುಪ್ಪವನ್ನು ಆಗಾಗ್ಗೆ ಹಚ್ಚುವುದರಿಂದ ಅವು ಬೇಗನೆ ಗುಣವಾಗುತ್ತವೆ. 


ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.


ಇದನ್ನೂ ಓದಿ: ಒಂದು ತಿಂಗಳು ನಿಯಮಿತವಾಗಿ ವಾಲ್ ನಟ್ಸ್ ತಿಂದರೆ ಏನಾಗುತ್ತೆ ಗೊತ್ತಾ?


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.