ಮದುವೆ ಆಗಿದ್ದರು, ಇಲ್ಲದಿದ್ದರೂ ಈ ದಿನ ಮಾತ್ರ ಮಹಿಳೆಯರು ತಲೆ ಸ್ನಾನ ಮಾಡಬಾರದು..!
Vastu tips : ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ನಿರ್ದಿಷ್ಟ ದಿನಗಳಲ್ಲಿ ತಮ್ಮ ಕೂದಲನ್ನು ತೊಳೆಯಬಾರದು ಅಂತ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಿದ್ರೆ, ಯಾವ ದಿನದಂದು ಮಹಿಳೆಯರು ತಮ್ಮ ತಲೆ ಕೂದಲನ್ನು ತೊಳೆಯಬಾರದು ಅಂತ ತಿಳಿಯೋಣ.. ಬನ್ನಿ.
Vastu tips for head bath : ಸಂತೋಷದ ಜೀವನವನ್ನು ನಡೆಸಲು ಹಿಂದೂ ಧರ್ಮದಲ್ಲಿ ಹಲವಾರು ಕಟ್ಟು ಪಾಡುಗಳು, ನಿಯಮಗಳನ್ನು ಉಲ್ಲೇಖಿಸಲಾಗಿದೆ. ನಮ್ಮ ಹಿರಿಯರು ಸಹ ಮನೆಯಲ್ಲಿ ನಾವು ಮಾಡುವ ತಪ್ಪುಗಳನ್ನು ತಿದ್ದಿ ಹೇಳುತ್ತಿದ್ದರು. ಈ ಪೈಕಿ ಮನೆಯಲ್ಲಿ ಮಹಿಳೆಯರು ಹೇಗೆ ಇರಬೇಕು, ಯಾವ ದಿನ ಸ್ನಾನ ಮಾಡಬೇಕು, ಮನೆಯ ಕಸವನ್ನು ಯಾವಾಗ ಗುಡಿಸಬೇಕು ಅಂತ ಹೇಳಿಕೊಡುತ್ತಿದ್ದರು. ಈ ಪೈಕಿ ಸ್ನಾನದ ಬಗ್ಗೆಯೂ ನಿಯಮಗಳನ್ನು ತಿಳಿಸುತ್ತಿದ್ದರು.
ಹೌದು.. ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಹಲವು ನಿಯಮಗಳಿವೆ. ವಾರದ ಕೆಲವು ದಿನಗಳಲ್ಲಿ ಅವರು ತಲೆ ಸ್ನಾನ ಮಾಡಬಾರದು ಅಂತ ಹೇಳಲಾಗುತ್ತದೆ. ಮಂಗಳವಾರ ಮತ್ತು ಶನಿವಾರ ಮದುವೆಯಾದ ಮಹಿಳೆಯರು ತಲೆ ಸ್ನಾನ ಮಾಡಬಾರದು ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರೂ ಸಹ ನಿರ್ದಿಷ್ಟ ದಿನಗಳಲ್ಲಿ ತಲೆ ಸ್ನಾನ ಮಾಡಬಾರದು. ಈ ಬಗ್ಗೆ ನಿಮಗೆ ಸಂದೇಹವಿದ್ದರೆ ವಾಸ್ತು ನಿಯಮಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ.
ಇದನ್ನು ಓದಿ :ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳಿಗೆ ಸಂಸ್ಕರಿಸಿದ ನೀರು: BWSSB ಮಹತ್ವದ ನಿರ್ಧಾರ
ಹಿಂದೂ ನಂಬಿಕೆಯ ಪ್ರಕಾರ, ವಿವಾಹಿತ ಮಹಿಳೆಯರು ಸೋಮವಾರದಂದು ತಲೆ ಸ್ನಾನ ಮಾಡಬಾರದು. ಹೀಗೆ ಮಾಡುವುದರಿಂದ ಪತಿ ಪತ್ನಿಯರ ನಡುವೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಆದರೆ ಅವಿವಾಹಿತ ಪುರುಷರು ಮತ್ತು ಮಹಿಳೆಯರು ಈ ದಿನ ತಲೆ ಸ್ನಾನ ಮಾಡಬಹುದು. ಇದು ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇನ್ನು ಮಂಗಳವಾರ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡಬಾರದು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅಪಘಾತ ಸಂಭವಿಸಬಹುದು ಎಂದು ವಾಸ್ತುದಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಗುರುವಾರವೂ ತಲೆ ಸ್ನಾನ ಮಾಡಬಾರದು, ಇದು ಮನೆಯಲ್ಲಿ ದಾರಿದ್ರ್ಯವನ್ನು ಉಂಟುಮಾಡುತ್ತದೆ.
ಇದನ್ನು ಓದಿ : Vande bharat express : ಬೆಂಗಳೂರು-ಚೆನ್ನೈ ನಡುವೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ
ಅಲ್ಲದೆ, ಮಹಿಳೆಯರು ಶನಿವಾರದಂದು ತಲೆ ಸ್ನಾನ ಮಾಡಿದರೆ ಶನಿದೇವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಇದರಿಂದಾಗಿ ನಿಮಗೆ ದೈಹಿಕ ಮತ್ತು ಮಾನಸಿಕ ನೋವನ್ನು ಉಂಟಾಗುತ್ತದೆ. ಆದುದರಿಂದ ಈ ದಿನ ತಪ್ಪಾಗಿಯೂ ತಲೆ ಸ್ನಾನ ಮಾಡಬೇಡಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ