ಕೇವಲ ಈ ಒಂದು ಬಿಳಿ ಪದಾರ್ಥ ಬಳಸಿ ಚಿಟಿಕೆ ಹೊಡೆಯೋದ್ರಲ್ಲಿ ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲುಗಳನ್ನು ಕಪ್ಪಾಗಿಸಿ!
White Hair Home Remedies: ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲಿ ಕೂದಲಿಗೆ ನೈಸರ್ಗಿಕವಾಗಿ ಕಪ್ಪು ಬಣ್ಣವನ್ನು ನೀಡುವ ಗುಣವನ್ನು ಹೊಂದಿರುವ ಅನೇಕ ವಸ್ತುಗಳನ್ನು ಬಳಸಲಾಗುತ್ತದೆ. ಅಂತಹುದೇ ಒಂದು ವಸ್ತು ಎಂದರೆ ಅದು ಪಟಕ. (Lifestyle News In Kannada)
ಬೆಂಗಳೂರು: ಸಾಮಾನ್ಯವಾಗಿ ಕೂದಲು ಬಿಳಿಯಾಗುವಿಕೆ ವಯಸ್ಸಾಗುವಿಕೆಯ ಲಕ್ಷಣ ಎಂದು ಹೇಳಲಾಗುತ್ತದೆ, ಆದರೆ ಇಂದಿನ ಕಾಲದಲ್ಲಿ 20 ವರ್ಷ ವಯಸ್ಸಿನವರಲ್ಲಿಯೂ ಕೂಡ ಕೂದಲುಗಳು ಬಿಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಈಗ ಪ್ರತಿ ಐವರಲ್ಲಿ ನಾಲ್ಕು ವ್ಯಕ್ತಿಗಳ ಸಮಸ್ಯೆಯಾಗಿದೆ ಮತ್ತು ಈ ಬಿಳಿ ಕೂದಲಿನ ಕಾರಣ ಜನರು ತೊಂದರೆಗೊಳಗಾಗುತ್ತಾರೆ. ಪ್ರಿ-ಮೆಚ್ಯೂರ್ ಗ್ರೇಯಿಂಗ್ ಆಫ್ ಹೇಯರ್ ಎಂಬ ಅಕಾಲಿಕ ಕೂದಲಿನ ಬಣ್ಣ ಬದಲಾವಣೆ ಇಂದು ದೊಡ್ಡ ಸಮಸ್ಯೆಯಾಗಿ ಮಾರ್ಪತಿದೆ. ಮಾಲಿನ್ಯ, ಅನಾರೋಗ್ಯಕರ ಆಹಾರ ಮತ್ತು ಹೆಚ್ಚುತ್ತಿರುವ ಒತ್ತಡದ ನಡುವೆ, ಜನರ ಕೂದಲಿನ ಮೇಲೂ ಪರಿಣಾಮ ಉಂಟಾಗುತ್ತದೆ. ಇದೇ ವೇಳೆ, ಕೆಲವು ಆನುವಂಶಿಕ ಕಾರಣಗಳಿಂದಲೂ ಕೂಡ, ಕೂದಲಿನ ಬಣ್ಣವು ಅಕಾಲಿಕವಾಗಿ ಬಿಳಿಯಾಗುತ್ತದೆ. (Lifestyle News In Kannada)
ಕೂದಲು ಬಿಳಿಯಾಗಲು ಕಾರಣವೇನು?
ಕೂದಲು ಕಿರುಚೀಲಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮೆಲನಿನ್ ಉತ್ಪತ್ತಿಯಾದಾಗ ಕಪ್ಪು ಕೂದಲು ಬಿಳಿಯಾಗುವ ಪ್ರಕ್ರಿಯೆಯು ವೇಗಗೊಳ್ಳುತ್ತದೆ. ಮೆಲನಿನ್ ಒಂದು ರೀತಿಯ ವರ್ಣದ್ರವ್ಯವಾಗಿದ್ದು ಅದು ಕೂದಲಿಗೆ ಕಪ್ಪು ಬಣ್ಣವನ್ನು ನೀಡುತ್ತದೆ. ಈ ವರ್ಣದ್ರವ್ಯಕ್ಕೆ ಸಂಬಂಧಿಸಿದ ಅಡಚಣೆಗಳಿಂದಾಗಿ, ನಿಮ್ಮ ಕಪ್ಪು ಸುಂದರ ಕೂದಲು ಸಮಯಕ್ಕಿಂತ ಮುಂಚೆಯೇ ಬಿಳಿಯಾಗಲು ಪ್ರಾರಂಭಿಸುತ್ತದೆ. ಕೂದಲು ಒಮ್ಮೆ ಬೆಳ್ಳಗಾದರೆ ಮತ್ತೆ ಕಪ್ಪಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ಆದಾಗ್ಯೂ, ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಲ್ಲಿ, ನೈಸರ್ಗಿಕವಾಗಿ ಕೂದಲಿಗೆ ಕಪ್ಪು ಬಣ್ಣವನ್ನು ನೀಡುವ ಗುಣವನ್ನು ಹೊಂದಿರುವ ಅನೇಕ ವಸ್ತುಗಳನ್ನು ಉಲ್ಲೇಖಿಸಲಾಗಿದೆ.
ಪಟಕದಿಂದ ಕೂದಲನ್ನು ಕಪ್ಪಾಗಿಸುವ ವಿಧಾನ ಮತ್ತು ಅದರ ಬಳಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಈ ಲೇಖನದಲ್ಲಿ ನಾವು ನಿಮಗೆ ಹೇಳಿಕೊಡುತ್ತಿದ್ದು, ನಿಮ್ಮ ಆಯ್ಕೆ ಅಥವಾ ಅಗತ್ಯಕ್ಕೆ ಅನುಗುಣವಾಗಿ ಬಳಸಿ.
ಇದನ್ನೂ ಓದಿ-ದಟ್ಟ-ನೀಳವಾದ ಕೇಶರಾಶಿಗಾಗಿ ಮನೆಯಲ್ಲಿಯೇ ತಯಾರಿಸಿದ ಈ ಜೇಲ್ ಅನ್ನು ತಲೆಗೆ ಅನ್ವಯಿಸಿ ನೋಡಿ!
ಬಿಳಿ ಕೂದಲು ಕಪ್ಪಾಗಿಸಲು ಪಟಕ ಹೇಗೆ ಬಳಸಬೇಕು?
>> ಒಂದು ಪಾತ್ರೆಯಲ್ಲಿ 2 ಗ್ಲಾಸ್ ಅಥವಾ 500 ಮಿಲಿ ನೀರನ್ನು ಕುದಿಸಿ.
>> ನಂತರ, ಈ ನೀರಿಗೆ ಒಂದು ಹಿಡಿ ಒಣ ಆಮ್ಲಾ ತುಂಡುಗಳನ್ನು ಸೇರಿಸಿ.
>> ಈ ನೀರಿನಲ್ಲಿ 2 ನಿಂಬೆಹಣ್ಣುಗಳನ್ನು ಹಿಂಡಿ ಮತ್ತು ಅದರ ಸಿಪ್ಪೆಗಳನ್ನು ಸೇರಿಸಿ ಮತ್ತು ನೀವು ಈ ನೀರಿನಲ್ಲಿ 10-12 ಕರಿಬೇವಿನ ಎಲೆಗಳನ್ನು ಕೂಡ ಸೇರಿಸಬಹುದು.
>> ಈಗ ನೀರು ಕುದಿಯಲು ಬಿಡಿ. ನೀರು ಚೆನ್ನಾಗಿ ಕುದಿಯುವಾಗ ಅರ್ಧ ಬಟ್ಟಲು ಪಟಕವನ್ನು ರುಬ್ಬಿ ಅದರಲ್ಲಿ ಹಾಕಿ.
ಇದನ್ನೂ ಓದಿ-ನಿತ್ಯ ಒಂದು ಚಮಚೆ ಈ ಬ್ರೌನ್ ಸೀಡ್ಸ್ ಸೇವಿಸಿದರೆ ವೇಗವಾಗಿ ತೂಕ ಇಳಿಕೆಯಾಗುತ್ತೆ, ಈ ರೀತಿ ಬಳಸಿ!
> ಮಿಶ್ರಣವನ್ನು ಚೆನ್ನಾಗಿ ಕುದಿಸಿ ಮತ್ತು ದ್ರಾವಣ ಡಪ್ಪಾಗುವವರೆತೇ ಅದನ್ನು ಉರಿಯಲ್ಲಿ ಬಿಡಿ.
>> ನಂತರ ಮಿಶ್ರಣವನ್ನು ಗ್ಯಾಸ್ ಸ್ಟೌನಿಂದ ಕೆಳಗೆ ಇಳಿಸಿ, ಅದನ್ನು ತಣ್ಣಗಾಗಿಸಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.
>>ಈ ಮಿಶ್ರಣವನ್ನು ವಾರಕ್ಕೆ 2-3 ಬಾರಿ ಕೂದಲಿಗೆ ಅನ್ವಯಿಸಿ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.