ಬಿಳಿ ಕೂದಲು ಕೀಳುವುದು ಹಾನಿಕಾರಕವೇ: ಮೊದಲೆಲ್ಲಾ ಬಿಳಿ ಕೂದಲನ್ನು ವ್ರುದ್ಯಾಪ್ಯದ ಸಂಕೇತ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಈ ಬದಲಾದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನವರಲ್ಲೂ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯುವ ಜನರು ಬಿಳಿ ಕೂದಲನ್ನು ನೋಡಿದಾದ ಉದ್ವಿಗ್ನತೆಗೆ ಒಳಗಾಗುತ್ತಾರೆ. ಕೆಲವರಲ್ಲಿ ಬಿಳಿ ಕೂದಲು ಮುಜುಗರಕ್ಕೆ ಕಾರಣವಾದರೆ, ಇನ್ನೂ ಕೆಲವರಿಂದ ಇದರಿಂದ ಆತ್ಮವಿಶ್ವಾಸವೇ ಕಡಿಮೆ ಆಗುತ್ತದೆ. ಈ ಬಿಳಿ ಕೂದಲ ಸಮಸ್ಯೆಯನ್ನು ತೊಡೆದು ಹಾಕಲು ಕೆಲವರು ಕಪ್ಪು ಬಣ್ಣ ಹಚ್ಚಿದರೆ, ಇನ್ನೂ ಕೆಲವರು ಮೆಹಂದಿ ಮೊರೆ ಹೋಗುತ್ತಾರೆ. ಮತ್ತೂ ಕೆಲವರು ಬಿಳಿ ಕೂದಲನ್ನು ಕೀಳುತ್ತಾರೆ. ಆದರೆ, ಬಿಳಿ ಕೂದಲನ್ನು ಕೀಳುವುದು ಒಳ್ಳೆಯದೇ?  ಬಿಳಿ ಕೂದಲನ್ನು ಬೇರಿನಿಂದ ಕಿತ್ತು ಎಸೆಯುವುದರಿಂದ ಯಾವುದೇ ರೀತಿಯ ಹಾನಿ ಆಗುವುದಿಲ್ಲವೇ? 


COMMERCIAL BREAK
SCROLL TO CONTINUE READING

ಬಿಳಿ ಕೂದಲನ್ನು ಕೀಳುವುದು ಎಷ್ಟು ಸರಿ?
ಸಾಮಾನ್ಯವಾಗಿ ಯುವಕರು ಮೊದಲ ಬಾರಿಗೆ ಬಿಳಿ ಕೂದಲನ್ನು ನೋಡಿದಾಗ ಉದ್ವೇಗಕ್ಕೆ ಒಳಗಾಗುತ್ತದೆ. ಕೆಲವರು ಒಂದೇ ಒಂದು ಬಿಳಿ ಕೂದಲು ತಾನೇ ಎಂದು ಅದನ್ನು ಕೀಳುವುದೂ ಉಂಟು. ಆದರೆ, ಹೀಗೆ ಮಾಡುವುದರಿಂದ ಹೆಚ್ಚು ಬುಕು ಜೀದಕಿ ಬೆಳೆಯಲು ಪ್ರಾರಂಭಿಸುತ್ತದೆ ಎಂದು ಹಲವರು ನಂಬುತ್ತಾರೆ. ಆದರಿದು ಸತ್ಯವೇ?


ಇದನ್ನೂ ಓದಿ- White Hair Problem: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸರಳ ಮನೆಮದ್ದು


ಬಿಳಿ ಕೂದಲನ್ನು ಕೀಳುವುದರಿಂದ ಹೆಚ್ಚು ಬಿಳಿ ಕೂದಲು ಬೆಳೆಯುತ್ತದೆಯೇ?
ವಯಸ್ಸಾದಂತೆ, ಕೂದಲಿಗೆ ಬಣ್ಣವನ್ನು ನೀಡುವ ವರ್ಣದ್ರವ್ಯ ಕೋಶಗಳು ನಾಶವಾಗಲು ಪ್ರಾರಂಭಿಸುತ್ತವೆ. ಈ ಕೋಶಗಳು ಕಡಿಮೆಯಾದಾಗ, ನೆತ್ತಿಯಲ್ಲಿ ಮೆಲನಿನ್ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ಕೂದಲು ಬಿಳಿ ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ. ಹಿಂದಿನ ಕಾಲದಲ್ಲಿ, ಒಂದು ಬಿಳಿ ಕೂದಲು ಒಡೆದರೆ ಅಂದರೆ ಕಿತ್ತರೆ 3 ಅಥವಾ 4 ಹೆಚ್ಚುವರಿ ಬಿಳಿ ಕೂದಲು ಬೆಳೆಯುತ್ತದೆ ಎಂದು ಹೇಳುತ್ತಿದ್ದರು. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ.


ಒಂದು ಬಿಳಿ ಕೂದಲು ಕೀಳುವುದರಿಂದ ಹೆಚ್ಚು ಬಿಳಿ ಕೂದಲು ಬೆಳೆಯುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ.  ಏಕೆಂದರೆ ನೀವು ಕೂದಲನ್ನು ಬೇರಿನಿಂದ ಕಿತ್ತಾಗ ನೆತ್ತಿಯ ಅಡಿಯಲ್ಲಿರುವ ಕೋಶಕಕ್ಕೆ ಹಾನಿಯಾಗುತ್ತದೆ ಮತ್ತು ಭವಿಷ್ಯದಲ್ಲಿ ಕೂದಲಿನ ಬೆಳವಣಿಗೆಯಲ್ಲಿ ತೊಂದರೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Hair Care Tips: ಉದ್ದ-ದಪ್ಪ-ಕಪ್ಪು ಕೂದಲಿಗಾಗಿ ಈ 5 ಆಹಾರಗಳನ್ನು ತಪ್ಪದೇ ಸೇವಿಸಿ


ಆರೋಗ್ಯಕರ ಕೂದಲಿಗಾಗಿ ಈ ಸಲಹೆ ಅನುಸರಿಸಿ:
ಮೊದಲಿಗೆ ಬಿಳಿ ಕೂದಲು ಕಂಡರೂ ಗಾಬರಿ ಪಡುವ ಅಗತ್ಯ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕೂದಲು ಕೀಳುವುದರಿಂದ ಕೂದಲು ಬೆಳ್ಳಗಾಗುವುದನ್ನು ಮರೆಮಾಚಲು ಸಹ ಸಾಧ್ಯವಿಲ್ಲ. ಹೇರ್ ಡೈ ಹಚ್ಚುವುದೂ ಕೂಡ ಆರೋಗ್ಯಕರ ಕೂದಲ ಬೆಳವಣಿಗೆಗೆ ಅಷ್ಟು ಸೂಕ್ತವಲ್ಲ. 


ಬಿಳಿ ಕೂದಲು ಕಪ್ಪಾಗಬೇಕೆಂದರೆ ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ದ್ರಾಕ್ಷಿಹಣ್ಣು, ಪೇರಲ, ಜಾಮೂನ್ ಮತ್ತು ಪಪ್ಪಾಯಿಯಂತಹ ಆಹಾರಗಳನ್ನು ಸೇವಿಸಿ. ಇದಲ್ಲದೆ,  ಎಲೆಕೋಸು, ಕೋಸುಗಡ್ಡೆ, ಪಾಲಕ ಮತ್ತು ಟೊಮೆಟೊಗಳನ್ನು ತಿನ್ನುವುದು ಕೂದಲ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.