White Hair To Black Hair: ಬಿಳಿಕೂದಲು ಸಣ್ಣ-ದೊಡ್ಡ ಎಂಬ ಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ವಾಯು ಮಾಲಿನ್ಯ, ಅಪೌಷ್ಟಿಕತೆ, ವಂಶವಾಹಿಗಳಿಂದಾಗಿ ಅನೇಕರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಆದರೆ ಯುವಜನತೆ ತಮ್ಮ ಬಿಳಿ ಕೂದಲು ಕಪ್ಪಾಗಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳ ಹೇರ್ ಡೈ ಬಳಸುತ್ತಿದ್ದಾರೆ. ಅಲ್ಲದೆ, ಕೆಲವರು ದುಬಾರಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇಷ್ಟೆಲ್ಲ ಪ್ರಯತ್ನ ಮಾಡಿದರೂ ಬಿಳಿ ಕೂದಲು ಕಪ್ಪಾಗುವುದು ಅಲ್ಪಾವಧಿಗೆ ಮಾತ್ರ.


COMMERCIAL BREAK
SCROLL TO CONTINUE READING

ಸರಳವಾದ ಆಯುರ್ವೇದ ಸಲಹೆಗಳಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಮಾಡುವುದು ಸುಲಭ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅವರು ಸೂಚಿಸಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಕೂದಲಾಗಿ ಪರಿವರ್ತಿಸಬಹುದು ಎನ್ನುತ್ತಾರೆ. ಆದರೆ ಬಿಳಿ ಕೂದಲನ್ನು ಕಪ್ಪಾಗಿಸಲು ಆಯುರ್ವೇದ ತಜ್ಞರು ಸೂಚಿಸಿರುವ ಸಲಹೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.


ಇದನ್ನೂ ಓದಿ: ಬೊಕ್ಕ ತಲೆ ಸಮಸ್ಯೆಗೆ ರಾಮಬಾಣ ಉಪಾಯ ಈ ನಾಲ್ಕು ಗಿಡಮೂಲಿಕೆಗಳು! 


ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಇರುವ ಉತ್ಪನ್ನಗಳನ್ನು ಬಳಸದಿರುವುದು ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ ಅತಿ ಹೆಚ್ಚು ರಾಸಾಯನಿಕಗಳಿವೆ. ಹಾಗಾಗಿ ಇವುಗಳನ್ನು ಪ್ರತಿದಿನ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗಬಹುದು ಆದರೆ ಭವಿಷ್ಯದಲ್ಲಿ ಕೂದಲಿನ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಇದಲ್ಲದೇ ಈ ರಾಸಾಯನಿಕಗಳಿರುವ ಉತ್ಪನ್ನಗಳ ಬಳಕೆಯಿಂದ ಬೋಳು ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಆಯುರ್ವೇದ ತಜ್ಞರು. 


ಅಂಟುವಾಳ ಕಾಯಿಯಲ್ಲಿರುವ ಆಯುರ್ವೇದ ಗುಣಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳಿಗೆ ಪರಿಣಾಮಕಾರಿ. ವಿಶೇಷವಾಗಿ ತಲೆಹೊಟ್ಟು ನಿವಾರಣೆಯಾಗುವುದು. ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಸ್ನಾನದ ಸಮಯದಲ್ಲಿ ಶಾಂಪೂ ಬದಲಿಗೆ ಇದನ್ನು ಬಳಸುವುದರಿಂದ ಕೂದಲಿನ ಬುಡದಲ್ಲಿರುವ ಕೊಳೆ ಮತ್ತು ತಲೆಹೊಟ್ಟು ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿವೆ.


ಇದನ್ನೂ ಓದಿ: ಹೇರ್ ಕಲರ್ ಮಾಡಿದರೂ ಕೂದಲು ಹಾಳಾಗುವುದಿಲ್ಲ! ಈ ಮೂರು ವಿಧಾನ ಅನುಸರಿಸಿ 


ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಅಂಟುವಾಳ ಕಾಯಿಯನ್ನು ಒಡೆದು, ಒಣಗಿಸಿ. ನಂತರ ಇದನ್ನು ಪುಡಿ ಮಾಡಿ. ಅಂಟುವಾಳ ಕಾಯಿ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಒಣಗಿಸಿ, ನಂತರ ಸ್ನಾನ ಮಾಡಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.