ಬಿಳಿ ಕೂದಲ ಸಮಸ್ಯೆಗೆ ಮನೆಮದ್ದು :  ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರ ಕೂದಲು ಅಕಾಲಿಕವಾಗಿ ಬಿಳಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬಿಳಿ ಕೂದಲನ್ನು ಕಪ್ಪಾಗಿಸಲು  ಮಾರುಕಟ್ಟೆಯಲ್ಲಿ ಹಲವಾರು ವಿಧಾನಗಳಿವೆ. ಆದಾಗ್ಯೂ, ಕೆಲವರು ಮನೆಮದ್ದುಗಳನ್ನು ಹೆಚ್ಚು ಪರಿಗಣಿಸುತ್ತಾರೆ. ನೀವೂ ಸಹ ಬಿಳಿ ಕೂದಲನ್ನು ಕಪ್ಪಾಗಿಸಲು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಬಯಸಿದರೆ ಈ ಲೇಖನದಲ್ಲಿ  ನಾವು ನಿಮಗಾಗಿ ಮೂರು ಮನೆಮದ್ದುಗಳನ್ನು ತಂದಿದ್ದೇವೆ, ಇದು ಬಿಳಿ ಕೂದಲಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಯಾವ ವಸ್ತುಗಳು ಸಹಕಾರಿ, ಅವುಗಳನ್ನು ಹೇಗೆ ಬಳಸುವುದು ತಿಳಿಯೋಣ...


COMMERCIAL BREAK
SCROLL TO CONTINUE READING

ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆ ಮದ್ದುಗಳು ಕೂಡ ಉತ್ತಮವೆಂದು ಪರಿಗಣಿಸಲಾಗಿದೆ. ಇದರಲ್ಲಿ ಕರಿಬೇವು, ಕಾಫಿ ಮತ್ತು ಅಲೋವೆರಾ ಸೇರಿವೆ. ಹಾಗಾದರೆ ಕಾಫಿ, ಅಲೋವೆರಾ ಮತ್ತು ಕರಿಬೇವಿನ ಎಲೆಗಳಿಂದ ಕೂದಲನ್ನು ಕಪ್ಪಾಗಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ. 


ಇದನ್ನೂ ಓದಿ- Diabetes Diet: ಮಧುಮೇಹಿಗಳಿಗೆ ಅಪಾರ ಪ್ರಯೋಜನ ನೀಡಲಿದೆ ಈ ಬೀಜ


ಕೂದಲನ್ನು ಕಪ್ಪಾಗಿಸಲು ಕರಿಬೇವಿನ ಎಲೆಗಳು :
ಕರಿಬೇವಿನ ಎಲೆಗಳು ಕೂಡ ಬಿಳಿ ಕೂದಲಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತವೆ. ಇದಕ್ಕಾಗಿ ಕೆಲವು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಬಳಿಕ ಎರಡು-ಮೂರು ಚಮಚ ಆಮ್ಲಾ ಪೌಡರ್ ಮತ್ತು ಬ್ರಾಹ್ಮಿ ಪುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈಗ ಈ ಪ್ಯಾಕ್ ಅನ್ನು ಬೇರುಗಳಿಂದ ಸಂಪೂರ್ಣ ಕೂದಲಿಗೆ ಅನ್ವಯಿಸಿ. ಒಂದು ಗಂಟೆ ಅದನ್ನು ಹಾಗೆ ಇರಿಸಿ ನಂತರ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಪ್ರಯೋಜನವನ್ನು ನೀವು ನೋಡುತ್ತೀರಿ. ಈ ಪರಿಹಾರವು ನಿಮ್ಮ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲದೆ ಅದನ್ನು ಬಲವಾಗಿಯೂ ಮಾಡುತ್ತದೆ.


ಅಲೋವೆರಾದಿಂದ ಕೂದಲನ್ನು ಕಪ್ಪಾಗಿಸಬಹುದು:
ಅಲೋವೆರಾದಿಂದಲೂ ಕೂದಲನ್ನು ಕಪ್ಪಾಗಿಸಬಹುದು. ಇದನ್ನು ಮಾಡಲು, ನೀವು ವಾರಕ್ಕೆ ಎರಡು ಬಾರಿ ಕೂದಲಿಗೆ ಆಲೋವೆರಾ ಜೆಲ್ ಅನ್ವಯಿಸಬೇಕು. ಈ ಹೇರ್ ಪ್ಯಾಕ್ ಅನ್ನು ತಯಾರಿಸಲು, ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಈ ಪೇಸ್ಟ್ ಅನ್ನು ಬೇರುಗಳಿಂದ ಸಂಪೂರ್ಣ ಕೂದಲಿಗೆ ಅನ್ವಯಿಸಿ. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಕಾರಿ ಆಗಿದೆ. 


ಇದನ್ನೂ ಓದಿ- ಮಧುಮೇಹ ರೋಗಿಗಳು ನಿತ್ಯ ಸೇವಿಸಿದರೆ ಈ ಹಣ್ಣು ಕಡಿಮೆಯಾಗುತ್ತದೆ ಬ್ಲಡ್ ಶುಗರ್


ಕಾಫಿ ಪುಡಿಯಿಂದ ಕೂದಲನ್ನು ಕಪ್ಪಾಗಿಸಿ: 
ತಲೆ ನೋವಿಗೆ ಪರಿಹಾರ ನೀಡಬಲ್ಲ ಕಾಫಿ ಪುಡಿ ಸಹ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಕಾಫಿ ಪುಡಿಯನ್ನು ಆಲೋವೆರ ಜೊತೆಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ