ಬಿಳಿ ಕೂದಲುಗಳು ತಕ್ಷಣ ನೈಸರ್ಗಿಕವಾಗಿ ಕಪ್ಪಾಗುತ್ತವೆ, ಗೋರಂಟಿಯಲ್ಲಿ ಈ ಒಂದು ವಸ್ತು ಬೆರೆಸಿ ಉಪಯೋಗಿಸಿ ನೋಡಿ!
White Hair Natural Remedy: ನಿಮ್ಮ ಕೂದಲನ್ನು ಬಿಳಿ ಬಣ್ಣದಿಂದ ಕಪ್ಪು ಬಣ್ಣಕ್ಕೆ ಬದಲಾಯಿಸಲು ಮತ್ತು ಅದನ್ನು ಬಲಪಡಿಸಲು ನೀವು ಬಯಸುತ್ತಿದ್ದರೆ, ನೀವು ಗೋರಂಟಿ ಅಂದರೆ ಮೆಹಂದಿಯಲ್ಲಿ ಒಂದು ವಿಶೇಷ ಸಂಗತಿಯನ್ನು ಬೆರೆಸಿ ಅದನ್ನು ಕೂದಲಿಗೆ ಅನ್ವಯಿಸಬೇಕು, ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ.
ಬೆಂಗಳೂರು: ಅಕಾಲಿಕವಾಗಿ ಕೂದಲು ಉದುರುವಿಕೆ ಅಥವಾ ಕೂದಲು ಬಿಳಿಯಾಗುವಿಕೆ ಎಂದರೆ ನಿಮ್ಮ ಆಹಾರದ ಬಗ್ಗೆ ನೀವು ಸಾಕಷ್ಟು ನಿಸ್ಕಾಳಜಿಯನ್ನು ಹೊಂದಿರುವಿರಿ ಎಂದರ್ಥ, ಇದರೊಂದಿಗೆ ಮಾಲಿನ್ಯ, ಸೂರ್ಯನ ಬೆಳಕು ಮತ್ತು ಇತರ ಅನೇಕ ಕಾರಣಗಳಿಂದ ಕೂದಲಿನ ಸಮಸ್ಯೆಗಳು ಸಹ ಸಂಭವಿಸುತ್ತವೆ. ಆದ್ದರಿಂದ, ನೀವು ಸರಿಯಾದ ಸಮಯದಲ್ಲಿ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ, ಅದು ನಿಮ್ಮ ಕೂದಲಿಗೆ ಬಹಳಷ್ಟು ಹಾನಿಯನ್ನುಂಟು ಮಾಡಿಕೊಳ್ಳುವಿರಿ. ಬಿಳಿ ಕೂದಲಿನೊಂದಿಗೆ ಬೋಳು ತಲೆ ಸಮಸ್ಯೆಯನ್ನು ಕೂಡ ನೀವು ಎದುರಿಸಬೇಕಾಗಬಹುದು.
ಮನೆಯಲ್ಲಿ ಕೂದಲ ರಕ್ಷಣೆಗೆ ಹಲವಾರು ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು.ಅವುಗಳಲ್ಲಿ ಒಂದು ಗೋರಂಟಿ ಕೂಡ ಒಂದು. ಗೋರಂಟಿ ಕೂದಲು ಬಿಳಿಯಾಗುವುದನ್ನು ಮರೆಮಾಚುತ್ತದೆ ಮತ್ತು ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಹಾಗಾದರೆ ಗೋರಂಟಿ ಪ್ಯಾಕ್‌ಗೆ ಯಾವ ಸಂಗತಿಯನ್ನು ಸೇರಿಸಿದರೆ ಅದು ನಿಮ್ಮ ಕೂದಲನ್ನು ಕಪ್ಪು ಬಣ್ಣಕ್ಕೆ ಬದಲಾಯಿಸುತ್ತದೆ ಮತ್ತು ಗಟ್ಟಿಗೊಳಿಸುತ್ತದೆ ತಿಳಿದುಕೊಳ್ಳೋಣ ಬನ್ನಿ,
ಅಧ್ಯಯನದಲ್ಲಿ ಹೇಳಲಾಗಿರುವ ಗೋರಂಟಿ ಲಾಭಗಳು
ಹೆನ್ನಾ ಎಲೆಗಳು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. 2011 ರ ಅಧ್ಯಯನದ ಪ್ರಕಾರ, ಗೋರಂಟಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ನೆತ್ತಿಯ ಶಿಲೀಂಧ್ರಗಳ ಸೋಂಕನ್ನು ಗುಣಪಡಿಸುತ್ತದೆ. 2017 ರಲ್ಲಿ ಪ್ರಕಟವಾದ ಅಧ್ಯಯನವು ಕೂದಲಿನ ಬೆಳವಣಿಗೆಯಲ್ಲಿ ಗೋರಂಟಿ ಸಹ ಸಹಾಯಕವಾಗಿದೆ ಎಂದು ಹೇಳಿದೆ. ಹೆನ್ನಾ ನೈಸರ್ಗಿಕ ಕಂಡಿಷನರ್ ಆಗಿದೆ. ಹೆನ್ನಾದಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ.
ಕೂದಲಿಗೆ ಗೋರಂಟಿ ಪ್ಯಾಕ್ ತಯಾರಿಸುವುದು ಹೇಗೆ?
ಗೋರಂಟಿ ಪುಡಿಯನ್ನು ಚಹಾ ಅಥವಾ ಕಾಫಿ ನೀರಿನಲ್ಲಿ ಕರಗಿಸಿ ನಂತರ ಅದನ್ನು ಕನಿಷ್ಠ 4 ಗಂಟೆಗಳ ಕಾಲ ಮುಚ್ಚಿಡಿ. ಇದರ ನಂತರ, ಅದರಲ್ಲಿ ಅರಿಶಿನ ಮತ್ತು ಇಂಡಿಗೋ ಪುಡಿಯೊಂದಿಗೆ ಮೊಸರು ಮಿಶ್ರಣ ಮಾಡಿ ಮತ್ತು ತಕ್ಷಣ ಅದನ್ನು ಕೂದಲಿಗೆ ಹಚ್ಚಿ. 30 ನಿಮಿಷಗಳಿಂದ- 1 ಗಂಟೆ ಇರಿಸಿ. ನಂತರ ಕೂದಲು ತೊಳೆಯಿರಿ.
ಇದನ್ನೂ ಓದಿ-ಬೊಕ್ಕ ತಲೆ ಸಮಸ್ಯೆಗೆ ರಾಮಬಾಣ ಉಪಾಯ ಈ ನಾಲ್ಕು ಗಿಡಮೂಲಿಕೆಗಳು!
ಆರಂಭದಲ್ಲಿ ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಅನ್ನು ಅನ್ವಯಿಸಿ ಮತ್ತು ನಂತರ ಕೂದಲು ಬಣ್ಣ ಪಡೆದಾಗ 15 ದಿನಗಳಿಗೊಮ್ಮೆ ಅನ್ವಯಿಸಿ.
ಇದನ್ನೂ ಓದಿ-ಫುಲ್ ಬಾಡಿ ಚೆಕ್ ಅಪ್ ನಲ್ಲಿ ಎಷ್ಟು ಪರೀಕ್ಷೆಗಳಿರುತ್ತವೆ? ಸಮಯ ಇರುವಾಗ ಮಾಡಿಸಿಕೊಳ್ಳುವುದು ಉತ್ತಮ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.