Kuber Story: ಕುಬೇರನಿಗೆ ಚಿನ್ನದ ಲಂಕೆ ಸಿಕ್ಕಿದ್ದಾದರೂ ಹೇಗೆ? ಕುಬೇರನಿಗೆ ಧನದ ಒಡೆಯ ಎಂದು ಏಕೆ ಕರೆಯುತ್ತಾರೆ?
Why Kuber God Of Wealth - ಕುಬೇರನ ತಪಸ್ಸಿಗೆ ಪ್ರಸನ್ನಗೊಂಡ ಬ್ರಹ್ಮದೇವರು ಆತನಿಗೆ ಉತ್ತರದ ಅಧಿಪತಿ ಮತ್ತು ಸಂಪತ್ತಿನ ದೇವರನ್ನಾಗಿಸಿದ್ದಾರೆ. ರಾಮಾಯಣದ ಪ್ರಕಾರ, ಕುಬೇರನಿಗೆ ಅವನ ತಂದೆ ವಿಶ್ರವಾ ಚಿನ್ನದ ಲಂಕೆ ನೀಡಿದ್ದಾರೆ ಎನ್ನಲಾಗುತ್ತದೆ.
ನವದೆಹಲಿ: Kuber Story In Kannada - ನಮ್ಮ ಧರ್ಮಗ್ರಂಥಗಳಲ್ಲಿ, ಕುಬೇರನನ್ನು (Kuber) ಸಂಪತ್ತಿನ ದೇವರು (God Of Wealth) ಎಂದು ಕರೆಯಲಾಗುತ್ತದೆ. ಶಾಶ್ವತ ಸಂಪತ್ತಿಗಾಗಿ ಕುಬೇರನನ್ನು (Kuber Mantra) ಪೂಜಿಸಲಾಗುತ್ತದೆ. ಅವನು ದಿಗ್ಪಾಲ್ ಮತ್ತು ಪ್ರಹರಿ ರೂಪದಲ್ಲಿ ಸಂಪತ್ತು ಮತ್ತು ಖಜಾನೆಯನ್ನು ರಕ್ಷಿಸುತ್ತಾನೆ. ಆದರೆ ಕುಬೇರನಿಗೆ ಚಿನ್ನದ ಲಂಕೆ ಸಿಕ್ಕಿದ್ದು ಹೇಗೆ? ಅಲ್ಲದೆ ಅವನನ್ನು ಏಕೆ ಧನದ ಒಡೆಯ ಎಂದು ಕರೆಯುತ್ತಾರೆ? ಎಂಬುದರ ಹಿಂದೆ ಸ್ವಾರಸ್ಯಕರ ಸಂಗತಿ ಅಡಗಿದೆ. ಸಂಪತ್ತಿನ ದೇವರು ಕುಬೇರನಿಗೆ ಸಂಬಂಧಿಸಿದ ಕೆಲ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ.
ಕುಬೇರನಿಗೆ ಚಿನ್ನದ ಲಂಕೆ ಉಡುಗೊರೆಯ ರೂಪದಲ್ಲಿ ಸಿಕ್ಕಿದೆ (Who Is Kuber)
ರಾಮಾಯಣ ಮಹಾಕಾವ್ಯದ ಪ್ರಕಾರ, ಕುಬೇರನಿಗೆ ಅವನ ತಂದೆ ಋಷಿ ವಿಶ್ರವಾ ಬದುಕಲು ಚಿನ್ನದ ಲಂಕೆಯನ್ನು ನೀಡಿದರು ಎನ್ನಲಾಗಿದೆ. ಕುಬೇರನ ತಪಸ್ಸಿಗೆ ಪ್ರಸನ್ನನಾದ ಬ್ರಹ್ಮ ದೇವರು ಕೂಡ ಅವನನ್ನು ಉತ್ತರದ ಅಧಿಪತಿ ಮತ್ತು ಸಂಪತ್ತಿನ ದೇವರನ್ನಾಗಿ ಮಾಡಿದರು ಎಂದು ಹೇಳಲಾಗುತ್ತದೆ. ಇದಲ್ಲದೇ ಪುಷ್ಪಕ ವಿಮಾನವನ್ನೂ ಕೂಡ ಕುಬೇರನಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಒಮ್ಮೆ, ತನ್ನ ತಂದೆಯ ಆಜ್ಞೆಯ ಮೇರೆಗೆ, ಕುಬೇರ ತನ್ನ ಸಹೋದರ ರಾವಣನಿಗೆ ಚಿನ್ನದ ಲಂಕೆಯನ್ನು ನೀಡಿ, ನಂತರ ಕೈಲಾಸ ಪರ್ವತದ ಬಳಿ ಅಲ್ಕಾಪುರಿ ನೆಲಸಿದ್ದ. ರಾವಣ ಜಗತ್ತನ್ನು ಗೆಲ್ಲಲು ಹೊರಟಾಗ ಅಲಕಾಪುರಿಯ ಮೇಲೂ ದಾಳಿ ಮಾಡಿದನೆಂದು ಹೇಳಲಾಗುತ್ತದೆ. ನಂತರ ರಾವಣ ಮತ್ತು ಕುಬೇರರ ನಡುವೆ ಯುದ್ಧ ನಡೆಯುತ್ತದೆ. ಆದರೆ ಬ್ರಹ್ಮನ ವರದ ಕಾರಣದಿಂದಾಗಿ ಕುಬೇರನು ರಾವಣನಿಂದ ಸೋಲಿಸಲ್ಪಟ್ಟ ಮತ್ತು ರಾವಣ ಆತನಿಂದ ಪುಷ್ಪಕ ವಿಮಾನವನ್ನು ಕಿತ್ತುಕೊಂಡ ಎನ್ನಲಾಗುತ್ತದೆ.
ಇದನ್ನೂ ಓದಿ-Barley Remedy For Wealth - ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಾರ್ಲಿಗೆ ಸಂಬಂಧಿಸದ ಈ ಉಪಾಯಗಳನ್ನು ಅನುಸರಿಸಿ
ಕುಬೇರನನ್ನು ಸಂಪತ್ತಿನ ರಕ್ಷಕ ಎಂದು ಪರಿಗಣಿಸಲಾಗಿದೆ
ಕುಬೇರನಿಗೆ ಮೂರು ಕಾಲುಗಳು ಮತ್ತು ಎಂಟು ಹಲ್ಲುಗಳಿವೆ ಎಂದು ಶಾಸ್ತ್ರಗಳಲ್ಲಿ ಒಂದು ಕಥೆಯಿದೆ. ಆತ ತನ್ನ ಕುರೂಪಿ ಲಕ್ಷಣಗಳಿಂದ ಪ್ರಸಿದ್ಧನಾಗಿದ್ದಾನೆ. ಶತಪಥ ಬ್ರಾಹ್ಮಣ ಎಂಬ ಪುಸ್ತಕದಲ್ಲಿ ಅವನು ರಾಕ್ಷಸ ಕುಲಕ್ಕೆ ಸೇರಿದವನೆಂದು ವಿವರಿಸಲಾಗಿದೆ. ಕುಬೇರನನ್ನು ಯಕ್ಷ ಎಂದೂ ಕರೆಯುತ್ತಾರೆ. ಯಕ್ಷನನ್ನು ಸಂಪತ್ತಿನ ರಕ್ಷಕ ಎಂದು ಪರಿಗಣಿಸಲಾಗಿದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Shani Shubh Yoga : ಶನಿಯ ಈ ಯೋಗವು ನಿಮ್ಮ ಜಾತಕದಲ್ಲಿದ್ದರೆ ನಿಮಗೆ ಸಿಗಲಿದೆ ಸರ್ಕಾರಿ ನೌಕರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.