ಆಧುನಿಕ ಕಾಲದಲ್ಲಿ ಪ್ರೇಮ ಸಂಬಂಧಗಳ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆಯಾಗಿಬಿಟ್ಟಿದೆ. ಪುರುಷರು ಮಹಿಳೆಯರಿಗಿಂತ ಹಿರಿಯರಾಗಿರಬೇಕು ಎಂಬ ರೂಢಿಗತ ಡೇಟಿಂಗ್ ನಂಬಿಕೆಯನ್ನು ಅನೇಕರು ಕಡೆಗಣಿಸಿದ್ದಾರೆ ಮತ್ತು ಇಂದಿನ ಜಗತ್ತಿನಲ್ಲಿ ಪ್ರಣಯ ಪ್ರವೃತ್ತಿಯಾಗಿ ಮುಂದುವರೆದಿದೆ. ಎಲ್ಲದಕ್ಕೂ ಮಿಗಿಲಾಗಿ ದಂಪತಿಗಳು ಪರಸ್ಪರ ಬಾಂಧವ್ಯ ಮತ್ತು ಅಪಾರ ಗೌರವವನ್ನು ಹೊಂದುವುದು ಈಗಿನ ಕಾಲದಲ್ಲಿ ಮುಖ್ಯವಾಗಿದೆ. ಅದರಲ್ಲೂ ಇಂದಿನ ಕಾಲದಲ್ಲಿ ಹುಡುಗರು ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಬೆಳೆಸುತ್ತಾರೆ. ಹೆಚ್ಚಾಗಿ ಆಂಟಿಯರ ಕಡೆಗೆ ಆಕರ್ಷಕಿತರಾಗುತ್ತಾರೆ. ಇದಕ್ಕೆ ಒಂದು ಮುಖ್ಯ ಕಾರಣವೂ ಇದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಗರ್ಬಾ ಡ್ಯಾನ್ಸ್‌ ಮಾಡುತ್ತಿಲೆ ಪ್ರಾಣ ಬಿಟ್ಟ ಯುವಕ!


ಕೆಲವು ಹುಡುಗರು ತಮ್ಮ ಅಮ್ಮನ ವಯಸ್ಸಿನ ಆಂಟಿಯರ ಕಡೆಗೆ ಅಟ್ರ್ಯಾಕ್ಟ್‌ ಆಗುತ್ತಾರೆ. ಕೆಲವರು ಅವರ ಸಮವಯಸ್ಕರು ಅಥವಾ ಚಿಕ್ಕ ವಯಸ್ಸಿನ ಯುವತಿಯರ ಜೊತೆ ಸಂಬಂಧ ಬೆಳೆಸಿದರೆ, ಅನೇಕ ಹುಡುಗರು ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಇದೆಲ್ಲದಕ್ಕೂ ಒಂದು ಮುಖ್ಯ ಕಾರಣವಿದೆ. ಹಿರಿಯ ವಯಸ್ಸಿನ ಮಹಿಳೆಯರು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. 


ಭಾವನಾತ್ಮಕ ಸಂಬಂಧ ಎಲ್ಲದಕ್ಕಿಂತ ಬಹಳ ಮುಖ್ಯ. ಹೀಗಾಗಿ ಭಾವನಾತ್ಮಕವಾಗಿ ಬೇಗ ಕನೆಕ್ಟ್‌ ಆಗುತ್ತಾರೆ. ತಮ್ಮಲ್ಲಿರುವ ಮೆಚ್ಯುರಿಟಿಯಿಂದಾಗಿ ಸುಲಭವಾಗಿ ಹುಡುಗರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕೆಲಸದ ಸ್ಥಳದಲ್ಲಿ ಹುಡುಗರು ವಯಸ್ಸಾದ ಮಹಿಳೆಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದನ್ನು ಕಾಣಬಹುದು. ಮಹಿಳೆಯರಿಗೆ ಹೆಚ್ಚು ವಯಸ್ಸಾದಂತೆ ಅವರು ಪ್ರಬುದ್ಧರಾಗುತ್ತಾರೆ. ಇದೇ ಕಾರಣಕ್ಕೆ ಹುಡುಗರು ಆಂಟಿಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನಬಹುದು. 


ಇದನ್ನೂ ಓದಿ : ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪ್ರಸನ್ನ ಬಿ ವರಾಳೆ ಹೆಸರು ಶಿಫಾರಸ್ಸು


ಅಲ್ಲದೇ, ಮತ್ತೊಂದು ವಿಚಾರವೆಂದರೆ ಅದು ಆರ್ಥಿಕ ಸದೃಢತೆ. ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿರುತ್ತಾರೆ. ಈ ಆರ್ಥಿಕ ಸಬಲತೆ ಸಹ ಆಂಟಿಯರತ್ತ ಯುವಕರು ಆಕರ್ಷಿತರಾಗುವಂತೆ ಮಾಡುತ್ತದೆ. ಯುವಕರ ಕಷ್ಟದ ಸಮಯದಲ್ಲಿ ಅವರಿಗೆ ಹಿರಿಯ ವಯಸ್ಸಿನ ಮಹಿಳೆಯರು ಬೆಂಬಲವಾಗಿ ನಿಲ್ಲುತ್ತಾರೆ. ಹುಡುಗರಿಗೆ ಈ ಗುಣ ತುಂಬಾ ಇಷ್ಟವಾಗುತ್ತದೆ.  


ಇನ್ನೊಂದು ಸಂಗತಿಯೆಂದರೆ ಅದು ಜೀವನಾನುಭವ. ಹಿರಿಯ ಮಹಿಳೆಯರು ಜೀವನದಲ್ಲಿ ಹೆಚ್ಚು ಅನುಭವವನ್ನು ಪಡೆದಿರುತ್ತಾರೆ. ಕಷ್ಟ, ನಷ್ಟ, ಸಂತೋಷಗಳನ್ನು ಎದುರಿಸಿರುತ್ತಾರೆ. ಹೀಗಾಗಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಾಗ ಅವರು ಉತ್ತಮ ಮಾರ್ಗದರ್ಶಕರಾಗಿ ಯುವಕರ ಜೊತೆಗಿರುತ್ತಾರೆ. ಇದು ಕೂಡಾ ಆಂಟಿಯರತ್ತ ಯುವಕರು ಆಕರ್ಷಿತರಾಗಲು ಕಾರಣವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.