Why Indian couples drink milk on the first night: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಮದುವೆಯ ನಂತರ ಮುಹೂರ್ತದ ಪ್ರಕಾರ ಮೊದಲ ರಾತ್ರಿ ನಡೆಯುತ್ತದೆ. ಏಕೆಂದರೆ ಅವರು ಶಾಶ್ವತವಾಗಿ ಒಟ್ಟಿಗೆ ಇರಲು ಬಯಸುತ್ತಾರೆ. ಮೊದಲ ರಾತ್ರಿ ಒಂದು ಲೋಟ ಹಾಲಿನೊಂದಿಗೆ ವಧು ಕೋಣೆಗೆ ಹೋಗುತ್ತಾಳೆ. ಇದು ಪದ್ಧತಿ. ಈ ರೀತಿ ಮಾಡುವುದೇಕೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಸಾಂಪ್ರದಾಯಿಕ ಮದುವೆಯಲ್ಲಿ ಎಲ್ಲವೂ ವಿಶೇಷ. ಅದರಲ್ಲೂ ಹಿಂದೂ ವಿವಾಹಗಳಲ್ಲಿ ನವದಂಪತಿಗಳು ಹಲವು ವಿಧಿವಿಧಾನಗಳ ಮೂಲಕ ವಿವಾಹವಾಗುತ್ತಾರೆ. ಮೊದಲ ರಾತ್ರಿಯ ದಿನ ಮದುಮಗಳು ಹಾಲಿನ ಲೋಟದೊಂದಿಗೆ ಮಧುಮಗನ ಕೋಣೆಗೆ ಬರುವುದು ರೂಢಿಗತ ಪದ್ಧತಿಯಾಗಿದೆ. 


ಇದನ್ನೂ ಓದಿ: ವೀಳ್ಯದೆಲೆಯನ್ನು ಈ ರೀತಿ ಬಳಸಿದರೆ ಒಂದೇ ಒಂದು ಬಿಳಿ ಕೂದಲು ಇರಲ್ಲ!


ಹೊಸದಾಗಿ ಮದುವೆಯಾದ ದಂಪತಿಗಳು ಸಿಹಿ ಬಂಧದ ಸಂಕೇತವಾಗಿ ಈ ಹಾಲು ಕುಡಿಯುತ್ತಾರೆ. ಈ ಹಾಲಿಗೆ ಕೇಸರಿ ಸೇರಿಸಿ ಕೊಟ್ಟಿರುತ್ತಾರೆ. ನವವಿವಾಹಿತರು ಮುಂದಿನ ಜೀವನದ ಬಗ್ಗೆ ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಇದು ಮುನ್ನುಡಿ. 


ಹಾಲನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಮದುವೆಯಾದ ಮೊದಲ ರಾತ್ರಿ ಹಾಲಿನೊಂದಿಗೆ ದಾಂಪತ್ಯ ಜೀವನ ಆರಂಭಿಸುತ್ತಾರೆ. 


ಕಾಮಸೂತ್ರದಲ್ಲಿ ವೈವಾಹಿಕ ಜೀವನದ ಉಲ್ಲೇಖಗಳಿವೆ. ಇದು ಮೊದಲ ರಾತ್ರಿಯ ಹಾಲನ್ನು ಸಹ ಉಲ್ಲೇಖಿಸುತ್ತದೆ. ಹಾಲು, ಕೇಸರಿ, ಸಕ್ಕರೆ ಮತ್ತು ಅರಿಶಿನ ಮಿಶ್ರಣ ಮಾಡಿ ಹಾಲು ಕುಡಿಯಬೇಕು ಎನ್ನಲಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ದಂಪತಿಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ: Weight Loss Tips: ಬೆಳಗಿನ ಈ ಕೆಟ್ಟ ಅಭ್ಯಾಸಗಳೇ ತೂಕ ಹೆಚ್ಚಾಗಲು ಕಾರಣ!! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.