Astro Tips: ಮಹಿಳೆಯರು ಚಿನ್ನದ ಕಾಲುಂಗುರವನ್ನು ಏಕೆ ಧರಿಸುವುದಿಲ್ಲ? ವೈಜ್ಞಾನಿಕ ಕಾರಣ ತಿಳಿಯಿರಿ
Wearing gold in legs: ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಧರಿಸುವುದು ಪ್ರತಿಯೊಬ್ಬ ಮಹಿಳೆಯ ಹವ್ಯಾಸ. ಮಹಿಳೆಯರು ಕೇವಲ ಬೆಳ್ಳಿ ಕಾಲುಂಗುರ ಧರಿಸುತ್ತಾರೆ, ಚಿನ್ನದ ಕಾಲುಂಗುರ ಧರಿಸದಿರಲು ಕಾರಣವೇನು ತಿಳಿಯಿರಿ.
ನವದೆಹಲಿ: ಚಿನ್ನ-ಬೆಳ್ಳಿ, ವಜ್ರ-ರತ್ನ ಆಭರಣಗಳನ್ನು ಧರಿಸುವುದು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮಹಿಳೆಯರು ತಮ್ಮ ಸೌಂದರ್ಯಕ್ಕೆ ಚಿನ್ನಾಭರಣ ಧರಿಸುತ್ತಾರೆ. ಹೀಗಾಗಿಯೇ ಪ್ರತಿಯೊಬ್ಬ ಮಹಿಳೆ ಆಭರಣಗಳ ಬಗ್ಗೆ ಹೆಚ್ಚಿನ ಬಾಂಧವ್ಯ ಹೊಂದಿರುತ್ತಾಳೆ. ವಿಶೇಷ ಸಂದರ್ಭಗಳಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಮಹಿಳೆಯರು ಚಿನ್ನ ಮತ್ತು ಬೆಳ್ಳಿ ಎರಡರಿಂದಲೂ ಮಾಡಿದ ಆಭರಣಗಳನ್ನು ಧರಿಸುತ್ತಾರೆ. ಆದರೆ ಶ್ರೀಮಂತ ಮಹಿಳೆಯರು ಸಹ ಬೆಳ್ಳಿಯ ಕಾಲುಂಗುರ ಧರಿಸುತ್ತಾರೆ. ಆದರೆ ಮಹಿಳೆಯರು ಚಿನ್ನದ ಕಾಲುಂಗುರವನ್ನು ಏಕೆ ಧರಿಸುವುದಿಲ್ಲ ಎಂಬುದರ ಹಿಂದೆ ಕೆಲವು ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ.
ಇದನ್ನೂ ಓದಿ: Palmistry: ಸಂಗಾತಿಯ ಅಂಗೈ ನೋಡಿದ್ರೆ ಹಲವು ರಹಸ್ಯ ತಿಳಿಯಬಹುದು!
ಚಿನ್ನದ ಕಾಲುಂಗುರ ಧರಿಸದಿರಲು ಧಾರ್ಮಿಕ ಕಾರಣ
ಹಿಂದೂ ಧರ್ಮದಲ್ಲಿ ಚಿನ್ನವು ಗುರು ಗ್ರಹಕ್ಕೆ ಸಂಬಂಧಿಸಿದೆ. ಇದರೊಂದಿಗೆ ವಿಷ್ಣು ದೇವರಿಗೂ ಚಿನ್ನ ಎಂದರೆ ತುಂಬಾ ಇಷ್ಟ. ಇದಲ್ಲದೆ ಚಿನ್ನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತಾಯಿ ಲಕ್ಷ್ಮಿದೇವಿ ಯಾವಾಗಲೂ ತನ್ನ ಕೈಗಳಿಂದ ಚಿನ್ನದ ನಾಣ್ಯಗಳನ್ನು ಸುರಿಸುತ್ತಾಳೆ. ಈ ಕಾರಣಕ್ಕಾಗಿ ಪಾದದಲ್ಲಿ ಚಿನ್ನ ಧರಿಸುವುದು ಅಪಮಾನವಾಗುತ್ತದೆಂದು ಹೇಳಲಾಗಿದೆ. ಹೀಗಾಗಿಯೇ ಸೊಂಟದ ಕೆಳಗೆ ಚಿನ್ನ ಧರಿಸುವುದನ್ನು ನಿಷೇಧಿಸಲಾಗಿದೆ. ಯಾವಾಗಲೂ ಬೆಳ್ಳಿಯ ಕಾಲುಂಗರವನ್ನೇ ಧರಿಸಲಾಗುತ್ತದೆ. ಇದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯ ಅಸಮಾಧಾನವನ್ನು ತಪ್ಪಿಸಬಹುದು. ಇಲ್ಲದಿದ್ದರೆ ಶ್ರೀಹರಿ ಮತ್ತು ಲಕ್ಷ್ಮಿದೇವಿಯ ಅಸಮಾಧಾನವು ನಿಮ್ಮ ಜೀವನದಲ್ಲಿ ಬಡತನ, ದುಃಖವನ್ನುಂಟು ಮಾಡುತ್ತದೆ.
ಇದನ್ನೂ ಓದಿ: ಜೀವನದಲ್ಲಿನ ಆರ್ಥಿಕ ಸಂಕಷ್ಟ ನಿವಾರಣೆಗೆ ರಕ್ತಚಂದನದ ಈ ಉಪಾಯ ಟ್ರೈ ಮಾಡಿ ನೋಡಿ!
ಕಾಲಿಗೆ ಚಿನ್ನ ಧರಿಸದಿರಲು ವೈಜ್ಞಾನಿಕ ಕಾರಣ
ಅದೇ ರೀತಿ ಧಾರ್ಮಿಕತೆಯ ಹೊರತಾಗಿ ವೈಜ್ಞಾನಿಕ ದೃಷ್ಟಿಕೋನದಿಂದ ಚಿನ್ನ ಅಥವಾ ಚಿನ್ನದ ಕಾಲುಂಗುರ ಧರಿಸುವುದು ಸರಿಯಲ್ಲ. ವಿಜ್ಞಾನದ ದೃಷ್ಟಿಯಿಂದ ಚಿನ್ನವು ದೇಹದಲ್ಲಿ ಶಾಖವನ್ನು ಹೆಚ್ಚಿಸಿದರೆ, ಬೆಳ್ಳಿ ದೇಹಕ್ಕೆ ತಂಪು ನೀಡುತ್ತದೆ. ಅದಕ್ಕಾಗಿಯೇ ಸೊಂಟದ ಮೇಲೆ ಚಿನ್ನದ ಆಭರಣಗಳನ್ನು ಮತ್ತು ಸೊಂಟದ ಕೆಳಗೆ ಬೆಳ್ಳಿಯ ಆಭರಣಗಳನ್ನು ಧರಿಸಲಾಗುತ್ತದೆ. ಇದರಿಂದ ದೇಹದಲ್ಲಿನ ತಾಪಮಾನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಮತ್ತೊಂದೆಡೆ ಕೇವಲ ಚಿನ್ನದ ಆಭರಣ ಧರಿಸುವುದರಿಂದ ಅನೇಕ ರೋಗಗಳು ಬರುತ್ತವೆಂದು ಹೇಳಲಾಗಿದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.