ಬೆಂಗಳೂರು: ಚಳಿಗಾಲದಲ್ಲಿ, ಬಹುಶಃ ಪ್ರತಿಯೊಬ್ಬ ವ್ಯಕ್ತಿಯು ಕೂದಲು ಉದುರುವಿಕೆಯ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾನೆ. ಒಂದು ವೇಳೆ ಕೂದಲು ಉದುರದೇ ಇದ್ದರೂ ಒಣಗುತ್ತವೆ, ಸಾಮಾನ್ಯವಾಗಿ ಕೂದಲು ಸೀಳುವುದು, ತಲೆಹೊಟ್ಟು, ಕೂದಲು ಉದುರುವುದು ಎಲ್ಲರನ್ನೂ ಕಾಡುವ ಒಂದು ಸಮಸ್ಯೆಯಾಗಿದೆ. ಕೂದಲಿನ ಈ ಎಲ್ಲಾ ಸಮಸ್ಯೆಗಳು ವಿಪರೀತ ಛಳಿಯ ಕಾರಣ ಉಂಟಾಗುತ್ತವೆ, ಇನ್ನೊಂದೆಡೆ ಚಳಿ ಇರುವ ಕಾರಣ ನಾವು ಇಡೀ ಶರೀರದ ಮೇಲೆ ಹೊದಿಕೆಯನ್ನು ಎಳೆದುಕೊಂಡು ಮಲಗುತ್ತೇವೆ. ಆದರೆ, ತಲೆತುಂಬ ಹೊದಿಕೆ ಹಾಕಿಕೊಂಡಾಗ ಅದು ಕೂದಲಿನ ತೇವಾಂಶವನ್ನು ಹೀರುವ ಕೆಲಸ ಮಾಡುತ್ತದೆ.  ಆದರೆ, ಚಳಿಗಾಲದಲ್ಲಿ ಇದು ಸಾಮಾನ್ಯವಾದಕಾರಣ, ನಾವು ಅದಕ್ಕೆ ಪರಿಹಾರ ಕಂಡುಕೊಳ್ಳುವಟ್ಟ ಗಮನ ಹರಿಸುವುದು ಸೂಕ್ತ. (Lifestyle News In Kannada)


COMMERCIAL BREAK
SCROLL TO CONTINUE READING

ಇದಕ್ಕಾಗಿ ನಾವು ನಿಮಗೆ ಚಳಿಗಾಲದ ಒಂದು ವಿಶೇಷ  ಜ್ಯೂಸ್ ಪಾಕವಿಧಾನವನ್ನು ಹೇಳಿಕೊಡಲಿದ್ದೇವೆ. ಈ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ, ಚಳಿಗಾಲದಲ್ಲಿ ನಿಮ್ಮ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನೀವು ತೆಗೆದುಹಾಕಬಹುದು. ಅಲ್ಲದೆ, ಇದನ್ನು ಕುಡಿಯುವುದರಿಂದ, ನಮ್ಮ ದೇಹದಲ್ಲಿನ ಶಕ್ತಿಯ ಮಟ್ಟವು ಎಂದಿಗಿಂತಲೂ ಉತ್ತಮವಾಗಿರುತ್ತದೆ. ವಿಶೇಷವೆಂದರೆ ಚಳಿಗಾಲದಲ್ಲಿ ಪ್ರತಿದಿನ ಈ ಜ್ಯೂಸ್ ಕುಡಿದರೆ ಆರೋಗ್ಯದ ಮೇಲೆ ಶೀತದ ಕೆಟ್ಟ ಪರಿಣಾಮ ಗೋಚರಿಸುವುದಿಲ್ಲ. ಈ ಜ್ಯೂಸ್‌ನ ಹೆಸರು ಎಬಿಸಿ ಜ್ಯೂಸ್ ಅಂದರೆ ಆಮ್ಲಾ-ಬೀಟ್‌ರೂಟ್-ಕ್ಯಾರೆಟ್ ಜ್ಯೂಸ್ ಎಂದರ್ಥ.


ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮ ಜ್ಯೂಸ್
ಕೂದಲು ಉದುರುವುದನ್ನು ತಡೆಯಲು, ನೀವು ಸಲಾಡ್ ರೂಪದಲ್ಲಿ ಸೇವಿಸುವ ಕಾಲೋಚಿತ ತರಕಾರಿಗಳನ್ನು ಬಳಸಬೇಕಾಗುತ್ತದೆ. ಅಂದರೆ, 
2 ಕ್ಯಾರೆಟ್ಗಳು
2 ಆಮ್ಲಾ
1 ಬೀಟ್
10 ರಿಂದ 15 ಒಣದ್ರಾಕ್ಷಿ
15 ರಿಂದ 20 ಪುದೀನ ಎಲೆಗಳು
ಸ್ವಲ್ಪ ಶುಂಠಿ
ಅರ್ಧ ನಿಂಬೆ
ರುಚಿಗೆ ಉಪ್ಪು


ಈ ಜ್ಯೂಸ್ ಹೇಗೆ ತಯಾರಿಸಬೇಕು?
>> ನೀವು ವಿಶೇಷವಾಗಿ ಆಮ್ಲಾ, ಬೀಟ್ರೂಟ್ ಮತ್ತು ಕ್ಯಾರೆಟ್ ಅನ್ನು ಬಳಸಬೇಕು. ಉಳಿದ ಎಲ್ಲ ಸಂಗತಿಗಳು ಐಚ್ಛಿಕ ಸಂಗತಿಗಳಾಗಿವೆ. ಅಂದರೆ, ನಿಮಗೆ ಬೇಕಾದರೆ ನೀವು ಅವುಗಳನ್ನು ಬಳಸಿ ಮತ್ತು ಬೇಡವಾದರೆ ಬಳಸಬೇಡಿ.
>> ಮೊದಲಿಗೆ ಎಲ್ಲಾ ತರಕಾರಿಗಳನ್ನು ಸರಿಯಾಗಿ ತೊಳೆದುಕೊಳ್ಳಿ.  ಸಿಪ್ಪೆ ಸುಲಿದು ಮತ್ತು ನುಣ್ಣಗೆ ಕತ್ತರಿಸಿ. ಇದಾದ ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಒಣದ್ರಾಕ್ಷಿ ವಿಶೇಷವಾಗಿ ಟೇಸ್ಟ್ ಹೆಚ್ಚಿಸಲು ಬಳಸಲಾಗುತ್ತದೆ. ಇದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದ್ದರೂ ಸಹ, ನೀವು ಅದರ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
>> ರಸವು ಸಿದ್ಧವಾದ ನಂತರ, ಅದನ್ನು ಗ್ಲಾಸಿಗೆ ಹಾಕಿ ಮತ್ತು ಉಪ್ಪು ಮತ್ತು ನಿಂಬೆ ಬೆರೆಸಿ ಮಜಾ ಸವಿಯಿರಿ.


ಯಾವಾಗ ಮತ್ತು ಹೇಗೆ ಕುಡಿಯಬೇಕು?
>> ಬೆಳಗಿನ ಉಪಾಹಾರ ಮತ್ತು ಊಟದ ನಡುವಿನ ಸಮಯದಲ್ಲಿ ಅಥವಾ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ವಿರಾಮದ ಸಮಯದಲ್ಲಿ ನೀವು ಈ ರಸವನ್ನು ಸೇವಿಸಬಹುದು. ಆದರೆ ಇದನ್ನು ಹಗಲಿನಲ್ಲಿ ಮಾತ್ರ ಸೇವಿಸಲು ಯತ್ನಿಸಿ.
>> ನೀವು ಇದನ್ನು ಪ್ರತಿದಿನ ಕುಡಿಯಬಹುದು. ನಿತ್ಯ ಸೇವಿಸಿದ ನಂತರವೇ ನೀವು ತ್ವರಿತ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ಕೂದಲಿನ ಆರೋಗ್ಯವು ತ್ವರಿತವಾಗಿ ಸುಧಾರಿಸಲು ನೀವು ಬಯಸಿದರೆ, ಇದನ್ನು ನಿತ್ಯ ಸೇವಿಸುವುದರ ಜೊತೆಗೆ, ಪರಿಪೂರ್ಣ ನಿದ್ರೆ ಮತ್ತು ವ್ಯಾಯಾಮ ಮಾಡಿ.


ಇದನ್ನೂ ಓದಿ-ರಕ್ತ ನಾಳಗಳಲ್ಲಿ ಸಂಗ್ರಹಗೊಳ್ಳುವ ಜಿಡ್ಡಿನ ಶತ್ರು ಬೆಳ್ಳುಳ್ಳಿ, ನಿತ್ಯ ಈ ನಾಲ್ಕು ವಿಧಗಳಲ್ಲಿ ಸೇವಿಸಿ!


ತರಕಾರಿಗಳನ್ನು ಕುದಿಸಿ ಕೂಡ ನೀವು ಈ ಜ್ಯೂಸ್ ಅನ್ನು ತಯಾರಿಸಬಹುದು
>> ನಿಮಗೆ ಜೀರ್ಣಕಾರಿ ಸಮಸ್ಯೆ ಇದ್ದರೆ ಅಥವಾ ಜೀರ್ಣಕ್ರಿಯೆ ನಿಧಾನವಾಗಿದ್ದರೆ ಅಥವಾ ಬೇರೆ ಯಾವುದೇ ಸಮಸ್ಯೆ ಇದ್ದರೆ, ನೀವು ಮೊದಲು ಬೀಟ್‌ರೂಟ್, ಆಮ್ಲಾ ಮತ್ತು ಕ್ಯಾರೆಟ್ ಅನ್ನು ಕುಕ್ಕರ್ ಗೆ ಹಾಕಿ ಒಂದು ವಿಶಲ್ ಬರುವವರೆಗೆ ಕುದಿಸಿಕೊಳ್ಳಿ.
>> ನಂತರ ಅದನ್ನು ಕುದಿಸಲು ಬಳಸುವ ನೀರಿನೊಂದಿಗೆ ರುಬ್ಬಿಕೊಳ್ಳಿ ಮತ್ತು ಅದರ ರಸವನ್ನು ತಯಾರಿಸಿ. ಹೀಗೆ ಮಾಡುವುದರಿಂದ ಜ್ಯೂಸ್ ತ್ವರಿತವಾಗಿ ಜೀರ್ಣ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಭಾರವಾದಂತಹ ಅನುಭವ ಉಂಟಾಗುವುದಿಲ್ಲ.
>> ಈ ರಸವನ್ನು ಮಕ್ಕಳಿಗೆ ನಿಯಮಿತವಾಗಿ ನೀಡಬಹುದು. ಇದರಿಂದಾಗಿ ಅವರ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ ಮತ್ತು ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ.


ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ 5 ಕಾಳುಗಳು, ಇಂದಿನಿಂದಲೇ ನಿಮ್ಮ ಆಹಾರದ ಭಾಗವಾಗಿಸಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ