Winter Weight Loss Tips: ಚಳಿಗಾಲದಲ್ಲಿ ಈ 5 ಜ್ಯೂಸ್ ಸೇವಿಸಿ, ಕೆಲವೇ ದಿನಗಳಲ್ಲಿ34 ಇಂಚಿನ ಸೊಂಟ 28 ಇಂಚಿಗೆ ಇಳಿಕೆಯಾಗುತ್ತೆ!
Weight Loss Tips For Winter: ಚಳಿಗಾಲದಲ್ಲಿ ತೂಕವನ್ನು ಇಳಿಕೆ ಮಾಡಿಕೊಳ್ಳಲು ನೀವೂ ಯೋಚಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಸೂಪ್ಗಳನ್ನು ಸೇರಿಸಿಕೊಳ್ಳಬಹುದು. ಬನ್ನಿ, ಬೊಜ್ಜು ಕಡಿಮೆ ಮಾಡುವ ಕೆಲವು ಆರೋಗ್ಯಕರ ಸೂಪ್‌ಗಳ ಬಗ್ಗೆ ತಿಳಿದುಕೊಳ್ಳೋಣ (Lifestyle News In Kannada).
ಬೆಂಗಳೂರು: ಚಳಿಗಾಲದಲ್ಲಿ, ಹೆಚ್ಚಿನ ಜನರು ತೂಕ ಹೆಚ್ಚಾಗುವ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ. ವಾಸ್ತವದಲ್ಲಿ ಚಳಿಗಾಲದಲ್ಲಿ ಹಸಿವು ಹೆಚ್ಚಾಗುವುದು, ಕಡಿಮೆ ದೈಹಿಕ ಚಟುವಟಿಕೆ ಮತ್ತು ನಿಧಾನ ಗತಿಯ ಚಯಾಪಚಯ ಕ್ರಿಯೆಯಿಂದಾಗಿ ಸ್ಥೂಲಕಾಯತೆಯು ಚಳಿಗಾಲದಲ್ಲಿ ವೇಗವಾಗಿ ಹೆಚ್ಚಾಗುತ್ತದೆ. ನಿಮ್ಮ ಹೆಚ್ಚಾದ ತೂಕವನ್ನು ನೀವು ನಿಯಂತ್ರಿಸಲು ಬಯಸಿದರೆ, ನಿಮ್ಮ ಆಹಾರದಲ್ಲಿ ಕೆಲ ತೂಕ ಇಳಿಕೆಯ ಸೂಪ್ಗಳನ್ನು ನೀವು ಸೇರಿಸಿಕೊಳ್ಳಬಹುದು. ಈ ಸೂಪ್‌ಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ ಮತ್ತು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿರುತ್ತವೆ. ಇವುಗಳನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯು ಬಹಳ ಸಮಯದವರೆಗೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ನಿಮಗೆ ಹಸಿವು ಕಡಿಮೆಯಾಗುತ್ತದೆ. ಇವು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ಚಳಿಗಾಲದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ. ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ತೂಕವು ಒಂದು ವಾರದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇಂದು ಈ ಲೇಖನದಲ್ಲಿ ನಾವು ನಿಮಗೆ ಅಂತಹ 5 ಸೂಪ್‌ಗಳ ಬಗ್ಗೆ ಮಾಹಿತಿಯನ್ನು ನೆಡುತ್ತಿದ್ದೇವೆ. (Lifestyle News In Kannada)
ಹೂಕೋಸು ಸೂಪ್
ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ನೀವು ಹೂಕೋಸು ಸೂಪ್ ಕುಡಿಯಬಹುದು. ಇದರಲ್ಲಿ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಹೇರಳ ಪ್ರಮಾಣದಲ್ಲಿರುತ್ತವೆ ಮತ್ತು ತೂಕ ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆ, ಇದನ್ನು ಕುಡಿಯುವುದರಿಂದ ಬೊಜ್ಜು ನಿಯಂತ್ರಣದಲ್ಲಿ ಉಳಿಯುತ್ತದೆ.
ಟೊಮೆಟೊ ಸೂಪ್
ಟೊಮೇಟೊ ಸೂಪ್ ರುಚಿಕರ ಮಾತ್ರವಲ್ಲದೆ ತುಂಬಾ ಪೌಷ್ಟಿಕವಾಗಿದೆ. ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಇದರಲ್ಲಿ ಹೇರಳವಾಗಿ ಇರುತ್ತವೆ. ಚಳಿಗಾಲದಲ್ಲಿ ರಾತ್ರಿಯಲ್ಲಿ ಒಂದು ಬೌಲ್ ಬಿಸಿ ಟೊಮೆಟೊ ಸೂಪ್ ಕುಡಿಯುವುದರಿಂದ ನಿಮ್ಮ ಹೊಟ್ಟೆಯು ತುಂಬಿರುತ್ತದೆ, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಮಿಶ್ರ ತರಕಾರಿ ಸೂಪ್
ಚಳಿಗಾಲದಲ್ಲಿ ತೂಕ ಇಳಿಕೆಗಾಗಿ ನೀವು ಮಿಶ್ರ ತರಕಾರಿ ಸೂಪ್ ಅನ್ನು ಕುಡಿಯಬಹುದು. ಇದರಲ್ಲಿ ನೀವು ಕೋಸುಗಡ್ಡೆ, ಕ್ಯಾರೆಟ್, ಪಾಲಕ, ಬೀಟ್ರೂಟ್, ಕ್ಯಾಪ್ಸಿಕಂ, ಬಟಾಣಿ, ಎಲೆಕೋಸು, ಟೊಮೆಟೊ ಮತ್ತು ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ಸೇರಿಸಿಕೊಳ್ಳಬಹುದು. ಈ ಸೂಪ್ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿರುತ್ತವೆ. ಇದನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಇದಲ್ಲದೆ, ದೇಹವು ಸಾಕಷ್ಟು ಪೋಷಣೆ ಮತ್ತು ಶಕ್ತಿಯನ್ನು ಪಡೆಯುತ್ತದೆ.
ಇದನ್ನೂ ಓದಿ-ಬೂದು ಬಣ್ಣಕ್ಕೆ ತಿರುಗುತ್ತಿರುವ ನಿಮ್ಮ ಕಪ್ಪು ಕೂದಲನ್ನು ಈ ರೀತಿ ನೈಸರ್ಗಿಕವಾಗಿ ಕಪ್ಪಾಗಿಸಿ!
ಪಾಲಕ ಸೂಪ್
ಪಾಲಕ ಚಳಿಗಾಲದಲ್ಲಿ ಹೇರಳ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತದೆ. ಬೊಜ್ಜು ಕಡಿಮೆಯಾಗಬೇಕೆಂದರೆ ಪಾಲಕ್ ಸೊಪ್ಪನ್ನು ತಯಾರಿಸಿ ಕುಡಿಯಬಹುದು. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ವಿಟಮಿನ್ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಪ್ರತಿನಿತ್ಯ ಒಂದು ಬೌಲ್ ಪಾಲಕ್ ಸೊಪ್ಪನ್ನು ಕುಡಿಯುವುದರಿಂದ ತೂಕ ಇಳಿಕೆಯಾಗುತ್ತದೆ. ಇದು ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ-ತೂಕ ಇಳಿಕೆಗೆ ಈ ಪಾನೀಯ ಒಂದು ರಾಮಬಾಣ ಉಪಾಯ? ಹೇಗೆ ಸೇವಿಸಬೇಕು ಇಲ್ಲಿ ತಿಳಿದುಕೊಳ್ಳಿ!
ಚಿಕನ್ ಸೂಪ್
ಚಳಿಗಾಲದಲ್ಲಿ ತೂಕ ಇಳಿಕೆಗೆ ಚಿಕನ್ ಸೂಪ್ ಆರೋಗ್ಯಕರ ಆಯ್ಕೆಯಾಗಿದೆ. ಇದು ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದೆ. ಇದು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ, ಆದ್ದರಿಂದ ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ದೇಹವು ಬೆಚ್ಚಗಿರುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ