Mahashivratri 2023 Wishes : ಮಹಾಶಿವರಾತ್ರಿಯಂದು ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸುವ ಮೂಲಕ ಶುಭಕೋರಿ
Mahashivratri 2023 Wishes : ಇಂದು ಮಹಾಶಿವರಾತ್ರಿಯ ಮಹಾ ಹಬ್ಬ. ಎಲ್ಲೆಲ್ಲೂ ಹರಹರ ಮಹಾದೇವ್, ಜೈ ಭೋಲೆನಾಥ್, ಬಮ್ ಬಮ್ ಭೋಲೆ ಎಂಬ ಪ್ರತಿಧ್ವನಿ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ, ಮಹಾದೇವನ ಭಕ್ತಿಯಿಂದ ತುಂಬಿದ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸುವ ಮೂಲಕ ನೀವು ಹಾರೈಸಬಹುದು.
ಮಹಾಶಿವರಾತ್ರಿ 2023 ಶುಭಾಶಯಗಳು: ಇಂದು ಮಹಾಶಿವರಾತ್ರಿಯ ಮಹಾ ಹಬ್ಬ. ಎಲ್ಲೆಲ್ಲೂ ಹರಹರ ಮಹಾದೇವ್, ಜೈ ಭೋಲೆನಾಥ್, ಬಮ್ ಬಮ್ ಭೋಲೆ ಎಂಬ ಪ್ರತಿಧ್ವನಿ. ಶಿವಭಕ್ತರು ಭೋಲೆನಾಥನ ಭಕ್ತಿಯಲ್ಲಿ ಮುಳುಗಿದ್ದಾರೆ. ಶನಿ ಪ್ರದೋಷ ಕೂಡ ಈ ದಿನ ತುಂಬಾ ಶುಭಕರವಾಗಿದೆ. ಶನಿ ಪ್ರದೋಷ ವ್ರತದಲ್ಲಿ ಶಿವನನ್ನು ಪೂಜಿಸುವುದರಿಂದ ಸಂತಾನ ಭಾಗ್ಯವಾಗುತ್ತದೆ. ಸುಮಾರು ಮೂವತ್ತು ವರ್ಷಗಳ ನಂತರ, ಈ ದಿನ ಸೂರ್ಯ ಮತ್ತು ಶನಿ ಅಂದರೆ ತಂದೆ-ಮಗ ಕುಂಭ ರಾಶಿಯಲ್ಲಿ ಒಟ್ಟಿಗೆ ಸಾಗುತ್ತಾರೆ. ಮಹಾಶಿವರಾತ್ರಿಯ ಹಬ್ಬವನ್ನು ಫಾಲ್ಗುಣ ಕೃಷ್ಣ ಚತುರ್ದಶಿಯಂದು ಆಚರಿಸಲಾಗುತ್ತದೆ, ಈ ದಿನ ಉಪವಾಸ ವೃತವನ್ನು ಆಚರಿಸಿ, ಶಿವನನ್ನು ಆರಾಧಿಸುವುದರಿಂದ ಧರ್ಮ, ಅರ್ಥ, ಕಾರ್ಯ, ಮೋಕ್ಷ ಪ್ರಾಪ್ತಿಯಾಗುತ್ತದೆ. ಯಾವುದೇ ವ್ಯಕ್ತಿಗೆ ವರ್ಷಪೂರ್ತಿ ಉಪವಾಸ ಮಾಡಲು ಸಾಧ್ಯವಿಲ್ಲವೋ ಅವರು ಮಹಾಶಿವರಾತ್ರಿಯಂದು ಮಾತ್ರ ಉಪವಾಸ ಮಾಡುವುದರಿಂದ ಇಡೀ ವರ್ಷ ಉಪವಾಸ ಮಾಡಿದ ಪುಣ್ಯವನ್ನು ಪಡೆಯುತ್ತಾರೆ.
ಇದನ್ನೂ ಓದಿ : Lucky Zodiac Sign: ಮಹಾಶಿವರಾತ್ರಿಯ ಅದೃಷ್ಟದ ರಾಶಿಗಳು ಇವೇ ನೋಡಿ
ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ, ಮಹಾದೇವನ ಭಕ್ತಿಯಿಂದ ತುಂಬಿದ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸುವ ಮೂಲಕ ನೀವು ಹಾರೈಸಬಹುದು :
ನಿಮ್ಮ ಜೀವನದಲ್ಲಿ ಸದಾ ಶಿವನ ಆಶೀರ್ವಾದ ನಿಮ್ಮೊಂದಿಗೆ ಇರಲಿ. ಸಂತೋಷದ ಬದುಕು ನಿಮ್ಮದಾಗಲಿ. ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತೇನೆ.
ಮಹಾಶಿವರಾತ್ರಿಯ ಈ ಮಂಗಳಕರ ಹಬ್ಬದಂದು, ಶಿವನ ಮಹಾನ್ ಶಕ್ತಿಯು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರಲಿ. ಮಹಾಶಿವರಾತ್ರಿಯ ಶುಭಾಶಯಗಳು.
ಶಿವನು ನಿಮಗೆ ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ಅದೃಷ್ಟವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೆ ಮಹಾಶಿವರಾತ್ರಿಯ ಶುಭಾಶಯಗಳು!
ಶಿವನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಶೀರ್ವಾದ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಮಹಾಶಿವರಾತ್ರಿಯ ಶುಭಾಶಯಗಳು!
ಅಂಧಕಾರವನ್ನು ಕಳೆದು, ಶಿವನು ನಿಮ್ಮ ಬಾಳಲ್ಲಿ ಬೆಳಕು ನೀಡಲಿ. ಮಹಾಶಿವರಾತ್ರಿಯ ಶುಭಾಶಯಗಳು.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಿವನ ಆಶೀರ್ವಾದ ಸಿಗಲಿ. ಆರೋಗ್ಯ, ಸಂತೋಷ ಮತ್ತು ಸಂಪತ್ತನ್ನು ಮಹಾದೇವ ಕರುಣಿಸಲಿ. ಮಹಾಶಿವರಾತ್ರಿಯ ಶುಭಾಶಯಗಳು.
ಇದನ್ನೂ ಓದಿ : Mahashivratri 2023: ಮಹಾಶಿವರಾತ್ರಿಯಂದು ಈ ಹಣ್ಣುಗಳನ್ನು ಅರ್ಪಿಸಬೇಡಿ, ಶಿವನು ಕೋಪಗೊಳ್ಳುತ್ತಾನೆ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.