ನವದೆಹಲಿ : ಶ್ರೀಮಂತನಾಗಬೇಕು ಎಂದು ಕನಸು ಕಾಣದ ವ್ಯಕ್ತಿ ಜಗತ್ತಿನಲ್ಲಿಯೇ ಇರಲಿಕ್ಕಿಲ್ಲ. ಮನುಷ್ಯನ ಮೊದಲ ಅವಶ್ಯಕತೆಯೇ ಹಣ. ಹೀಗಿರುವಾಗ ತಾನು ಸಿರಿತನ ಹೊಂದಬೇಕು ಎಂಬ ಕನಸನ್ನು ನನಸಾಗಿಸಲು ಪ್ರತಿಯೊಬ್ಬನೂ ಪ್ರಯತ್ನಿಸುತ್ತಾನೆ (how to become rich). ಕೆಲವರು ಹುಟ್ಟಿನಿಂದಲೇ ಶ್ರೀಮಂತರಾಗಿರುತ್ತಾರೆ. ಇನ್ನು ಕೆಲವರು ಹಣ ಸಂಪಾದಿಸಲು ಎಷ್ಟೇ ಪ್ರಯತ್ನ ಪಟ್ಟರೂ ವಿಫಲರಾಗುತ್ತಾರೆ. ಜ್ಯೋತಿಷ್ಯದ (Astrology) ಕೆಲವು ವಿಶೇಷ ಕ್ರಮಗಳುನ್ನು ಅನುಸರಿಸುವ ಮೂಲಕ ಹಣದ ಕೊರತೆಯನ್ನು ಹೋಗಲಾಡಿಸಬಹುದು. 


COMMERCIAL BREAK
SCROLL TO CONTINUE READING

ಶ್ರೀ ಯಂತ್ರವನ್ನು ಪವಾಡವೆಂದೇ ಹೇಳಲಾಗುತ್ತದೆ : 
ಸಂಪತ್ತನ್ನು ಪಡೆಯಲು ಲಕ್ಷ್ಮೀ ಯ ಶ್ರೀ ಯಂತ್ರವನ್ನು (Lakshmi Sheeyantra) ಬಹಳ ಅದ್ಭುತವೆಂದು ಪರಿಗಣಿಸಲಾಗಿದೆ. ಈ ಯಂತ್ರವನ್ನು ಲಕ್ಷ್ಮೀಯ ರೂಪವೆಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಯಂತ್ರಗಳನ್ನು ದೇವಾನುದೇವತೆಗಳ ಆರಾಧನೆಗೆ ಬಳಸಲಾಗುತ್ತಿದೆ. ನಿಯಮಿತವಾಗಿ ಶ್ರೀ ಯಂತ್ರವನ್ನು ಪೂಜಿಸಿದರೆ,  ಆರ್ಥಿಕ ಲಾಭವಾಗುತ್ತದೆ ಎನ್ನಲಾಗಿದೆ (shree yantra pooja). 


ಇದನ್ನೂ ಓದಿ : Holi 2022: ಹೋಳಿ ಹಬ್ಬದಂದು ಲಕ್ಷ್ಮಿ ಹಾಗೂ ಆಂಜನೇಯನಿಗೆ ಸಂಬಂಧಿಸಿದ ಈ ಉಪಾಯಗಳನ್ನು ಮಾಡಿ, ಜೀವನವೇ ಬದಲಾಗಲಿದೆ


ಆನಂದ ಮತ್ತು ಮೋಕ್ಷದ ಪ್ರಾಪ್ತಿ : 
ಧಾರ್ಮಿಕ ಗ್ರಂಥಗಳ ಪ್ರಕಾರ, ಈ ಯಂತ್ರವನ್ನು ಸ್ಥಾಪಿಸಿ ಅದನ್ನು ಯಥಾವತ್ತಾಗಿ ಪೂಜಿಸುವ ವ್ಯಕ್ತಿಯು ಲಕ್ಷ್ಮೀ ದೇವಿಯ (Godess Lakshmi) ಅನುಗ್ರಹದಿಂದ ಆನಂದ ಮತ್ತು ಮೋಕ್ಷವನ್ನು ಪಡೆಯುತ್ತಾನೆ. ಇದರೊಂದಿಗೆ, ಆರ್ಥಿಕ ತೊಂದರೆಗಳು ಅವನ ಜೀವನದಿಂದ ದೂರವಾಗುತ್ತವೆ. ಇದಲ್ಲದೆ, ಜೀವನದ ಎಲ್ಲಾ ಭೌತಿಕ ಸಂತೋಷಗಳು ಸಹ ಪ್ರಾಪ್ತಿಯಾಗುತ್ತವೆ ಎನ್ನಲಾಗಿದೆ.  


ಶ್ರೀ ಯಂತ್ರವನ್ನು ಈ ರೀತಿ ಪೂಜಿಸಿ:
ಬೆಳಿಗ್ಗೆ ಸ್ನಾನ ಮಾಡಿದ ನಂತರ , ಪೂಜಾ ಸ್ಥಳದಲ್ಲಿ ಸ್ವಚ್ಛವಾದ ಆಸನದ ಕೆಂಪು ಬಟ್ಟೆಯ ಮೇಲೆ ಶ್ರೀ ಯಂತ್ರವನ್ನು ಇರಿಸಿ. ಈಗ ಅದರ ಮೇಲೆ ಗಂಗಾಜಲ ಮತ್ತು ಹಾಲನ್ನು (Milk) ಚಿಮುಕಿಸಿ. ಇದರ ನಂತರ, ಶ್ರೀ ಯಂತ್ರಕ್ಕೆ ಪಂಚಾಮೃತದ ಅಭಿಷೇಕ ಮಾಡಿ.  ನಂತರ ಶ್ರೀ ಯಂತ್ರಕ್ಕೆ ಕೆಂಪು ಚಂದನ, ಕೆಂಪು ಬಣ್ಣದ ಹೂವುಗಳು, ಅಕ್ಷತೆಗಳನ್ನು ಅರ್ಪಿಸಿ. ಇದರ ನಂತರ, ಯಂತ್ರದ ಮೇಲೆ ಕೆಂಪು ಬಣ್ಣದ ಶಾಲನ್ನು ಹಾಕಿ. ನಂತರ  ಆರತಿ ಬೆಳಗಿ. ಆರತಿಯ ನಂತರ, ಲಕ್ಷ್ಮೀ ಮಂತ್ರ, ಮತ್ತು ದುರ್ಗಾ ಸಪ್ತಶತಿ ಪಠಿಸಿ. ಹೀಗೆ  ಯಂತ್ರವನ್ನು ನಿಯಮಿತವಾಗಿ ಪೂಜಿಸಿ. ಪೂಜೆಯ ನಂತರ, ಓಂ ಶ್ರೀಂ ಹ್ರೀಂ ಶ್ರೀಂ ನಮಃ: ಈ ಮಂತ್ರವನ್ನು 108 ಬಾರಿ ಜಪಿಸಿ. 


ಇದನ್ನೂ ಓದಿ : Bamboo Vastu Tips: ಮನೆ ಅಥವಾ ಕಚೇರಿಯಲ್ಲಿ ಬಿದಿರಿನ ಗಿಡ ಇರಿಸಲು ವಾಸ್ತು ಸಲಹೆಗಳು


ಶ್ರೀ ಯಂತ್ರ ಸ್ಥಾಪನೆಯ ನಿಯಮಗಳು :
1.ಶ್ರೀ ಯಂತ್ರದ ಸ್ಥಾಪನೆಯನ್ನು ಯಾವಾಗಲೂ ಶುಭ ಮುಹೂರ್ತದಲ್ಲಿ ಮಾಡಬೇಕು.
2. ಅದರ ಸ್ಥಾಪನೆಯ ನಂತರ, ಮನೆಯಲ್ಲಿ ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು. ಅಲ್ಲದೆ, ಮನೆಯಲ್ಲಿ ನಿಂದನೀಯ ಪದಗಳನ್ನು ಬಳಸಬಾರದು. 
3. ಸರಿಯಾಗಿ ಮಾಡಲ್ಪಟ್ಟ ಶ್ರೀ ಯಂತ್ರವನ್ನು ಪೂಜಿಸುವುದರಿಂದ ಮಾತ್ರ ಇಷ್ಟಾರ್ಥ ಸಿದ್ಧಿಸುತ್ತದೆ ಎನ್ನುವುದು ನೆನಪಿನಲ್ಲಿಟ್ಟುಕೊಳ್ಳಿ.
4. ಶ್ರೀ ಯಂತ್ರವನ್ನು ಸ್ಥಾಪಿಸಿದ ನಂತರ, ಅದರ ಮುಂದೆ ಪ್ರತಿದಿನ ಮಂತ್ರಗಳನ್ನು ಜಪಿಸುವುದು ಅವಶ್ಯಕ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.